ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮದ ದಲಿತ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜನರು ನೀರಿಗಾಗಿ ಪರಿದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೋನಿಗೆ ಗಜೇಂದ್ರಗಡ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಬಡಿಗೇರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ವೇಳೆ, ಕಾಲೋನಿ ನಿವಾಸಿಗಳು ತಮಗೆ ಎದುರಾಗಿರುವ ನೀರಿನ ಸಮಸ್ಯೆಗಳ ಬಗ್ಗೆ ವಿವರಿಸಿದರು. ಸಮಸ್ಯೆಯನ್ನು ಆಲಿಸಿದ ಬಡಿಗೇರ್, ಎರಡು ದಿನಗಳಲ್ಲಿ ಸಮಸ್ಯೆ ಪರಿಹರಿಸುವಂತೆ ಪಂಚಾಯತಿ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಸಮಸ್ಯೆ ಬಗೆಹರಿಯದಿದ್ದರೆ, ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ಮುಶಿಗೇರಿ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶಿವಪ್ಪ ಮಾದರ, “ಕಾಲೋನಿಯ ಸಮಸ್ಯೆ ಆಲಿಸಲು ತಾವೇ ಖುದ್ದಾಗಿ ಬಂದ್ದದ್ದು ಸಂತೋಷವಾಗಿದೆ. ಹಲವಾರು ವರ್ಷದಿಂದ ನಮ್ಮ ಕಾಲೋನಿಗೆ ನೀರು ಬರುತ್ತಿಲ್ಲ. ಮಹಿಳೆಯರು ಮತ್ತು ಮುದಕರು ನೀರು ಹಿಡಿಯಲು ದೂರದ ರಸ್ತೆಗೆ ಹೋಗಬೇಕು. ದಯವಿಟ್ಟು ನಮಗೆ ನೀರು ಕೊಡಿಸಿ” ಎಂದು ತಮ್ಮ ಅಳಲು ತೋಡಿಕೊಂಡರು.
ಈ ವೇಳೆ, ಕಾಲೋನಿ ನಿವಾಸಿ ದ್ಯಾಮವ್ವ ಮಾದರ, ಮರಿಯವ್ವ ಮಾದರ, ರೇಣುಕಾ ಹಿರೇಮಠ, ರೇಖಾ ಮಾದರ, ಇನ್ನು ಹಲವಾರು ಜನರು ಇದ್ದರು.
ವರದಿ: ಶರಣು ದೊಡ್ಡಮನಿ, ಮೀಡಿಯಾ ವಾಲಂಟಿಯರ್