ಮೂರು ವರ್ಷದ ಮಗುವಿನ ಮೇಲೆ ಆತನ ಅಜ್ಜ ಬಿಸಿಬಿಸಿ ‘ಟೀ’ ಎರಚಿ ಕ್ರೌರ್ಯ ಮೆರೆದಿರುವ ಘಟನೆ ಕೇರಳದ ಮನ್ನಂತಲದಲ್ಲಿ ನಡೆದಿದೆ. ಗುರುವಾರ ರಾತ್ರಿ ಘಟನೆ ನಡೆದಿದ್ದು, ಗಂಭೀರ ಸುಟ್ಟಗಾಯಗಳಾಗಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಮನ್ನಂತಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕ್ರೌರ್ಯ ಮೆರೆದ ಅಜ್ಜನನ್ನು ಬಂಧಿಸಿದ್ದಾರೆ.
ಮಗುವಿನ ತಂದೆ ಅಭಿಜಿತ್ ಅವರು ಚಲೈ ಮಾರುಕಟ್ಟೆಯಲ್ಲಿ ಹೂವಿನ ಮಾರಾಟ ಮಾಡುತ್ತಿದ್ದು ತಾಯಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಮಗು ತನ್ನ ಅಜ್ಜಿ ಮತ್ತು ಅಜ್ಜನೊಂದಿಗೆ ವಾಸಿಸುತ್ತಿತ್ತು ಎಂದು ವರದಿಯಾಗಿದೆ.
ಮಗುವಿನ ತಾಯಿಗೆ ಮಲತಂದೆಯಾಗಿರುವ ಅಜ್ಜ ಪದೇ ಪದೇ ಮಗುವಿನ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಗುರುವಾರ ರಾತ್ರಿ ಘಟನೆ ನಡೆದಾಗ, ಚೈಲ್ಡ್‌ಲೈನ್ ಮೂಲಕ ದೂರು ನೀಡಿದರೂ ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಿರಲಿಲ್ಲ ಎಂದು ಅಭಿಜಿತ್ ಆರೋಪಿಸಿದ್ದಾರೆ.