ಹಾಡಹಗಲೇ ಮನೆಯ ಮೇಲ್ಛಾವಣಿ ಕಿತ್ತು ಮನೆಯಲ್ಲಿದ್ದ ಒಡವೆ ಹಾಗೂ ನಗದು ಹಣ ದೋಚಿದ ಪ್ರಕರಣ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದ ಸಾಮ್ರಾಟ್ ಅಶೋಕ್ ಚಕ್ರವರ್ತಿ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಮಲ್ಲಪ್ಪ ಮಾಂಗ್ ಅವರ ಪುರಕಲ್ಲು ಮನೆಯ ಮೇಲ್ಛಾವಣಿ ಕಿತ್ತು ಒಳ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ 45 ಗ್ರಾಂ ಚಿನ್ನ ಹಾಗೂ 5,000 ನಗದು ಹಣ ದೋಚಿದ್ದಾರೆ.
ಕೃಷಿ ಕೆಲಸಕ್ಕಾಗಿ ಜಮೀನಿಗೆ ಕುಟುಂಬಸ್ಥರು ತೆರಳಿದ್ದ ಸಂದರ್ಭ ಬಳಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಲಿಂಗತ್ವ ಅಲ್ಪಸಂಖ್ಯಾತರಿಗೆ ಗೌರವದ ಬದುಕು ಕೊಡಿ: ಬಿ ಮಂಜಮ್ಮ ಜೋಗತಿ
ಕುಟುಂಬ ಸದಸ್ಯರು ಸಂಜೆ ಮನೆಗೆ ಮರಳಿದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ಮಲ್ಲಪ್ಪ ಮಾಂಗ್ ನೀಡಿದ ದೂರಿನ ಮೇರೆಗೆ ಚಿತ್ತಾಪುರ ಪಿಎಸ್ಐ ಶ್ರೀಶೈಲ್ ಅಂಬಾಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ.
ವರದಿ: ವಿಕ್ರಮ್ ತೇಜಸ್
