ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ನಿಂದ ಸೋಲಿಸಿ ಭಾರತ ತಂಡವು ಚಾಂಪಿಯನ್ ಆಗುತ್ತಿದ್ದಂತೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವೆಸ್ಟ್‌ಇಂಡೀಸ್‌ನ ಬಾರ್ಬಡೋಸ್ ಮೈದಾನದ ಮಣ್ಣು ಸವಿದಿದ್ದಾರೆ.
ಭಾರತ ತಂಡ ಗೆಲುವು ಕಾಣುತ್ತಿದ್ದಂತೆ ಹಲವರು ಸಂತೋಷದ ಕಣ್ಣೀರು ಹರಿಸುತ್ತಿದ್ದಂತೆ ರೋಹಿತ್ ಅವರು ತಾನು ನಾಯಕನಾಗಿ ವಿಶ್ವಕಪ್ ಅನ್ನು ಗೆದ್ದ ಪಿಚ್‌ನಿಂದ ಮಣ್ಣನ್ನು ತೆಗೆದು ಬಾಯಿಗೆ ಹಾಕಿ ಸವಿದು ತಮ್ಮ ಗೆಲುವಿನ ಕ್ಷಣಕ್ಕೆ ಮಣ್ಣನ್ನು ಭಾಗಿಯಾಗಿಸಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋವನ್ನು ಐಸಿಸಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ರೋಹಿತ್ ಬಾರ್ಬಡೋಸ್ ಪಿಚ್‌ನಿಂದ ಮಣ್ಣನು ಎತ್ತಿ ಬಾಯಿಗೆ ಹಾಕಿರುವುದು ಕಾಣಬಹುದು.
ಇದನ್ನು ಓದಿದ್ದೀರಾ? ವಿರಾಟ್ ಕೊಹ್ಲಿ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಾಯಕ ರೋಹಿತ್ ಶರ್ಮಾ
ಇನ್ನು ಈ ಪಂದ್ಯ ಅಂತ್ಯವಾದ ಬಳಿಕ ರೋಹಿತ್ ಪತ್ರಿಕಾಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದರು. ಅದಕ್ಕೂ ಮುನ್ನ ಟೀಮ್ ಇಂಡಿಯಾ ಚಾಂಪಿಯನ್ ಆಗುತ್ತಿದ್ದಂತೆಯೇ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದರು.
“ಟಿ20 ಪಂದ್ಯಗಳಿಂದ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ” ಎಂದು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ರೋಹಿತ್ ಶರ್ಮಾ ತಿಳಿಸಿದ್ದಾರೆ.
“ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು. ಪ್ರಾಮಾಣಿಕವಾಗಿ, ನಾನು ಈ ಟಿ20 ಸ್ವರೂಪವನ್ನು ಆಡಲು ಪ್ರಾರಂಭಿಸಿದ ಸಮಯದಿಂದ ನಾನು ಸಿಕ್ಕಾಪಟ್ಟೆ ಖುಷಿಯಲ್ಲಿದ್ದೆ. ಈ ಸ್ವರೂಪಕ್ಕೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ” ಎಂದು ಹೇಳಿದ್ದಾರೆ.
View this post on Instagram
“ನಾನು ಈ ಮಾದರಿಯ ಪ್ರತಿಯೊಂದು ಕ್ಷಣವನ್ನು ಪ್ರೀತಿಸುತ್ತೇನೆ. ನಾನು ಈ ಸ್ವರೂಪದಲ್ಲಿ ಆಡುವ ಮೂಲಕ ನನ್ನ ಭಾರತ ವೃತ್ತಿಜೀವನವನ್ನು ಪ್ರಾರಂಭಿಸಿದೆ. ನಾನು ಈಗ ಏನು ಮಾಡಿದ್ದೇನೋ ಅದನ್ನೇ ಮಾಡಲು ಬಯಸಿದ್ದೆ. ಕಪ್ ಗೆದ್ದು ವಿದಾಯ ಹೇಳಿದೆ” ಎಂದು ತಿಳಿಸಿದ್ದಾರೆ.
CAPTAIN ROHIT SHARMA WAS EATING THE SOIL OF BARBADOS. 🇮🇳
THIS IS MORE THAN A TROPHY FOR HITMAN, THIS IS WORLD CUP. 🏆🥺 pic.twitter.com/aPDanCxlj5
— Vishal. (@SPORTYVISHAL) June 30, 2024