ಬೆಂಗಳೂರು | ‘ಕೊಳೆಗೇರಿ ಮಹಿಳೆಯರ ಹೋರಾಟ ಮತ್ತು ಸಾಮರ್ಥ್ಯ’

Date:

Advertisements

ಎಳೆ ವಯಸ್ಸಿನಲ್ಲೇ ಪತಿ ಸಾವನ್ನಪ್ಪಿದ ಮಹಿಳೆಯರು ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ಪ್ರದೇಶದಲ್ಲಿ ಬದುಕುತ್ತಿದ್ದಾರೆ. ಹಲವಾರು ಕುಟುಂಬಗಳನ್ನು ಆ ಕುಟುಂಬಗಳ ಏಕಾಂಗಿ ಮಹಿಳೆಯರು ನಿರ್ವಹಿಸುತ್ತಿದ್ದಾರೆ. ಇಂತಹ ಕುಟುಂಬಗಳನ್ನು ಸರ್ಕಾರ ಗುರುತಿಸಿ, ‘ಅಕಾಲಿಕ ಮರಣ ಪರಿಹಾರ’ ಯೋಜನೆಯನ್ನು ರೂಪಿಸಿ, ಜಾರಿಗೊಳಿಸಬೇಕು ಎಂದು ಸ್ಲಂ ಮಹಿಳಾ ಸಂಘಟನೆ ಒತ್ತಾಯಿಸಿದೆ.

ಸ್ಲಂ ಮಹಿಳಾ ಸಂಘಟನೆಯು ಆಕ್ಷನ್‍ಏಡ್ ಸಹಯೋಗದೊಂದಿಗೆ ಬಿಬಿಎಂಪಿ ವ್ಯಾಪ್ತಿಯ ಏಳು ವಾರ್ಡ್‍ಗಳಲ್ಲಿ ವಾಸವಿರುವ ಮಹಿಳೆಯರ ಕುರಿತಾಗಿ ‘ಎಳೆ ಮನಸಿನ ಒಡಲಾಳದ ಮಾತುಗಳು’ ಕಿರುಪುಸ್ತಕವನ್ನು ಶನಿವಾರ ಬಿಡುಗಡೆ ಮಾಡಿದೆ. ಈ ಪುಸ್ತಕವು  ಬಿಡುಗಡೆ ಬೆಂಗಳೂರಿನ ಕೊಳೆಗೇರಿಗಳಲ್ಲಿ ವಾಸಿಸುವ 18 ರಿಂದ 30 ವರ್ಷ ವಯಸ್ಸಿನ ಮಹಿಳೆಯರ 50 ಪ್ರಕರಣಗಳ ಅಧ್ಯಯನಗಳನ್ನು ಒಳಗೊಂಡಿದೆ. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಹಲವು ಮಹಿಳೆಯರು ತಮ್ಮ ಜೀವನದ ಕಥೆಗಳನ್ನು ಹಂಚಿಕೊಂಡಿದ್ದಾರೆ. ಹಲವಾರು ಮಹಿಳೆಯರ ಪೈಕಿ ಆರತಿ (ಹೆಸರು ಬದಲಾಯಿಸಲಾಗಿದೆ) ಕೂಡ ಒಬ್ಬರು.

“17ನೇ ವಯಸ್ಸಿನಲ್ಲಿ ಪ್ರೀತಿಸಿ ಮದುವೆಯಾದೆ, ಆರಂಭದಲ್ಲಿ ನಮ್ಮ ಪತಿಯೊಂದಿಗೆ ಸಂತೋಷದಾಯಕ ಜೀವನವನ್ನು ನಡೆಸುತ್ತಿದ್ದೆ. ಆದರೆ, ಸ್ವಲ್ಪ ದಿನಗಳ ಬಳಿಕ ನನ್ನ ಗಂಡ ಸಾವನ್ನಪ್ಪಿದರು. ಆ ನಂತರ ನನ್ನ ಜೀವನವನ್ನು ನಡೆಸಲು, ನನ್ನ ಒಂಭತ್ತು ವರ್ಷದ ಮಗಳ ಶಿಕ್ಷಣಕ್ಕಾಗಿ ಹಾಗೂ ಕುಟುಂಬದವರಿಗಾಗಿ ಬ್ಯೂಟಿಷನ್ ಕೋರ್ಸ್‌ ಪೂರ್ತಿ ಮಾಡುವಂತೆ ಉತ್ತೇಜಿಸಿತು” ಎಂದು ಆರತಿ ಹೇಳಿದ್ದಾರೆ.

Advertisements

ಸ್ಲಂ ಮಹಿಳಾ ಸಂಘಟನೆಯ  ಅಧ್ಯಯನಗಳು ಪಾದರಾಯನಪುರ, ಕಾಟನ್‌ಪೇಟೆ, ಸುಧಾಮ ನಗರ ಮತ್ತು ಗಾಳಿ ಆಂಜನೇಯ ದೇವಸ್ಥಾನ ಸೇರಿದಂತೆ ಏಳು ನಗರ ವಾರ್ಡ್‌ಗಳಲ್ಲಿ 23 ಸ್ಲಂಗಳನ್ನು ಒಳಗೊಂಡಿವೆ. ಸಮೀಕ್ಷೆಗೆ ಒಳಪಟ್ಟ ಸುಮಾರು 90% ಮಹಿಳೆಯರು ಕೆಲವು ರೀತಿಯ ದೈಹಿಕ ಅಥವಾ ಮಾನಸಿಕ ಕಿರುಕುಳವನ್ನು ಅನುಭವಿಸಿದ್ದಾರೆ.

ಸಮೀಕ್ಷೆಗೆ ಒಳಪಟ್ಟ 30 ವರ್ಷದೊಳಗೆ 50 ಯುವತಿಯರಲ್ಲಿ 34 ಮಂದಿ(ಶೇ.68) ಬಾಲ್ಯ ವಿವಾಹಕ್ಕೆ ಒಳಗಾಗಿದ್ದಾರೆ. 12(ಶೇ.24) ಯುವತಿಯರು 18 ರಿಂದ 21 ವಯಸ್ಸಿನಲ್ಲಿ ಮದುವೆ ಆಗಿದ್ದಾರೆ ಹಾಗೂ ಉಳಿದ 4(ಶೇ.8) ಯುವತಿಯರ ಮದುವೆ 21 ರಿಂದ 24 ವಯಸ್ಸಿನಲ್ಲಾಗಿದೆ ಎಂದು ವರದಿ ಸ್ಪಷ್ಟಪಡಿಸಿದೆ. ಶೇ.38 ಯುವತಿಯರು ಮೋಸಕ್ಕೆ ಒಳಗಾಗಿ ಗಂಡನಿಂದ ಪ್ರತ್ಯೇಕಗೊಂಡಿದ್ದಾರೆ. ಶೇ.62 ಮಹಿಳೆಯರ ಗಂಡ ತೀರಿಹೋಗಿದ್ದಾರೆ. ಏಕಾಂಗಿಯಾಗಿ ಕುಟುಂಬದ ಭಾರವನ್ನು ಹೊರುತ್ತಿದ್ದಾರೆ. ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮದುವೆಯಾದಾಗ ಅಪ್ರಾಪ್ತರಾಗಿದ್ದರು.

ಕೇಸ್ ಸ್ಟಡಿಯಲ್ಲಿ 50 ಮಹಿಳೆಯರ ಪೈಕಿ ಶೇ.90ರಷ್ಟು ಮಹಿಳೆಯರು ತಮ್ಮ ಮಕ್ಕಳನ್ನು ಸಲಹುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಈ ಮಹಿಳೆಯರಲ್ಲಿ ಕನಿಷ್ಠ 85% ಗಂಡಂದಿರು ಮದ್ಯಪಾನ ಅಥವಾ ಇತರ ಮಾದಕ ವ್ಯಸನದಿಂದ ಬಳಲುತ್ತಿದ್ದರು. ಇದು ನಿಂದನೆ ಮತ್ತು ಕಿರುಕುಳಕ್ಕೆ ಕಾರಣವಾಗುತ್ತದೆ. ಸುಮಾರು 90% ಮಹಿಳೆಯರು ಕೆಲವು ರೀತಿಯ ದೈಹಿಕ ಅಥವಾ ಮಾನಸಿಕ ಕಿರುಕುಳವನ್ನು ಅನುಭವಿಸಿದ್ದಾರೆ.

ಯಾವುದೇ ಮಹಿಳೆಯರು ಕನಿಷ್ಟ ದಿನಗೂಲಿಯನ್ನು ಗಳಿಸಲಿಲ್ಲ. ಅರ್ಧಕ್ಕಿಂತ ಹೆಚ್ಚು ಜನರು ಯಾವುದೇ ಸರ್ಕಾರಿ ಕೆಲಸಗಳನ್ನು ಪಡೆದಿಲ್ಲ. ಅವರು ಮನೆಗೆಲಸ ಸಿಬ್ಬಂದಿ, ಕ್ಲೀನರ್‌ಗಳಾಗಿ ಅಥವಾ ತಂಬಾಕು ಮತ್ತು ಹತ್ತಿ ಬತ್ತಿ ತಯಾರಿಕೆ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡುತ್ತಿದ್ದಾರೆ.

“ನನ್ನ ಪತಿಯ ಸಾವಿಗೆ ನಾನೇ ಕಾರಣ ಎಂದು ಆರೋಪಿಸುತ್ತಾರೆ. ಇದರಿಂದ ನಾನು ಸಂಪೂರ್ಣವಾಗಿ ಕುಗ್ಗಿದ್ದೇನೆ. ಈ ಮಾತುಗಳನ್ನು ಕೇಳಿ ನನಗೆ ಸಾಯಬೇಕು ಎಂದೆನಿಸುತ್ತದೆ. ಆದರೆ, ನಾನು ಸತ್ತರೇ ನನ್ನ ಮಕ್ಕಳನ್ನು ನೋಡಿಕೊಳ್ಳುವವರು ಯಾರು ಎಂಬ ಆಲೋಚನೆ ಒಂದೇ ನನ್ನನ್ನು ಉಳಿಸಿದೆ. ನನ್ನ ಮಕ್ಕಳಿಗಾಗಿ, ಅವರ ಶಿಕ್ಷಣ ಮತ್ತು ಉನ್ನತಿಗಾಗಿ ನಾನು ಬದುಕುತ್ತೇನೆ. ನಮಗೆ ನಾವೇ ಎಲ್ಲ. ಯಾರೂ ನಮ್ಮ ರಕ್ಷಣೆಗೆ ಬರುವುದಿಲ್ಲ” ಎಂದು ಮಹಿಳೆಯೊಬ್ಬರು ತಮ್ಮ ಜೀವನ ಕಥೆಗಳನ್ನು ಹಂಚಿಕೊಂಡರು.

ಹೆಚ್ಚುವರಿಯಾಗಿ, ಏಕಾಂಗಿಯಾಗಿ ವಾಸಿಸುವ ಯುವತಿಯರಿಗೆ ವಸತಿಗಾಗಿ ಆದ್ಯತೆ ನೀಡಬೇಕೆಂದು ವಿಶ್ಲೇಷಣೆಯು ಪ್ರತಿಪಾದಿಸಿದೆ.

ತಮ್ಮ ಮಕ್ಕಳನ್ನು ಸಲಹುವ ಜವಾಬ್ದಾರಿ ನಿಭಾಯಿಸಲು ಬೇಕಾದ ಕನಿಷ್ಠ ಆದಾಯವೂ ಇಲ್ಲದೆ ಇರುವುದರಿಂದ ಈಗ ಅಸ್ತಿತ್ವದಲ್ಲಿರುವ ವಿಧವಾ ಪಿಂಚಣಿಯ ಮೊತ್ತವನ್ನು ಕನಿಷ್ಠ ₹5 ಸಾವಿರ ತುರ್ತಾಗಿ ಹೆಚ್ಚಿಸಬೇಕಾಗಿದೆ ಎಂದು ತಿಳಿಸಿದೆ.

ಶೋಷಣೆಗೆ ಒಳಗಾಗಿ ಕುಟುಂಬದ ಆಹಾರ ವ್ಯವಸ್ಥೆಯನ್ನು ನಿಭಾಯಿಸಲು ಬೇಕಾದ ಕನಿಷ್ಠ ಆರ್ಥಿಕ ಮೂಲಗಳಿಲ್ಲದೆ ತೊಳಲಾಡುತ್ತಿರುವ, ಮಹಿಳೆಯರೇ ಜವಾಬ್ದಾರರಾಗಿರುವ ಕುಟುಂಬಗಳಿಗೆ ಪಡಿತರ ಚೀಟಿಯಲ್ಲಿ ಅಕ್ಕಿ ಜೊತೆ ಬೇಳೆಕಾಳುಗಳನ್ನು ಹಾಗೂ ಅಡುಗೆ ಎಣ್ಣೆಯನ್ನು ಒದಗಿಸಲು ಬೇಕಾದ ಸೂಕ್ತ ಕ್ರಮವನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಹೇಳಿದೆ.

“ಬಡತನ ರೇಖೆಗಿಂತ ಕೆಳಗಿರುವ ಮತ್ತು ಏಕಾಂಗಿಯಾಗಿ ಕುಟುಂಬದ ಹೊಣೆ ಹೊತ್ತಿರುವ ಯುವತಿಯರು ಒಂದು ಹೊತ್ತಿನ ಊಟದ ವ್ಯವಸ್ಥೆಗಾಗಿ ಪಡಿತರ ಚೀಟಿಯಲ್ಲಿ ದೊರೆಯುವ ಅಕ್ಕಿಯನ್ನು ಅವಲಂಬಿಸಿದ್ದಾರೆ. ಹೀಗಾಗಿ, ಪಡಿತರ ಚೀಟಿಯನ್ನು ರದ್ದುಗೊಳಿಸುವ, ಅದರ ಅನುಷ್ಠಾನಕ್ಕೆ ಬೇಕಾದ ನಿಯಮಗಳನ್ನು ಪದೇಪದೇ ಬದಲಾಯಿಸುವ ಕ್ರಮಗಳನ್ನು ನಿಲ್ಲಿಸಬೇಕು” ಎಂದಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮುಕ್ತಾಯ ಹಂತದಲ್ಲಿರುವ ಕಾವೇರಿ 5ನೇ ಹಂತದ ಯೋಜನೆ; ಮುಂದೇನು?

2005ರ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಮಹಿಳೆಯರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆಯ ಅಗತ್ಯವಿರುವುದರಿಂದ ಸ್ವ-ಆಧಾರ ಕೇಂದ್ರಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಬೇಕು. ಈ ಹಿನ್ನೆಲೆಯಲ್ಲಿ ಸಂಬಂಧಿತ ಕಾಯ್ದೆ ಅನುಷ್ಠಾನಕ್ಕೆ ಬೇಕಾದ ಅನುದಾನದ ಮೊತ್ತವನ್ನು ಹೆಚ್ಚಿಸಬೇಕು ಎಂದು ತಿಳಿಸಿದೆ.

ಕೌಟುಂಬಿಕ ಹಿಂಸೆಗೆ ಒಳಗಾಗಿ, ಯಾವುದೇ ಆದಾರವಿಲ್ಲದೆ ಮಹಿಳೆಯರೇ ನಿರ್ವಹಿಸುತ್ತಿರುವ ಕುಟುಂಬಗಳನ್ನು ಆದ್ಯತಾ ಗುಂಪೆಂದು ಪರಿಗಣಿಸಿ, ತುರ್ತಾಗಿ ವಸತಿ ಯೋಜನೆ ಮತ್ತು ಕುಟುಂಬಕ್ಕೆ ಬೇಕಾದ ಮೂಲಭೂತ ವ್ಯವಸ್ಥೆಗಳನ್ನೂ ಕಲ್ಪಿಸಬೇಕಾಗಿದೆ ಎಂದು ಸ್ಲಂ ಮಹಿಳಾ ಸಂಘಟನೆಯು ಒತ್ತಾಯಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X