ಮಧ್ಯ ಪ್ರದೇಶ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ 31 ಸಾವಿರಕ್ಕೂ ಅಧಿಕ ಮಹಿಳೆಯರು ಹಾಗೂ ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ಅಧಿಕೃತ ವರದಿಗಳು ತಿಳಿಸಿವೆ.
ಅಧಿಕೃತ ಅಂಕಿಅಂಶಗಳ ಪ್ರಕಾರ 2021 ರಿಂದ 2024ರ ನಡುವೆ ಮಧ್ಯ ಪ್ರದೇಶದಲ್ಲಿ 28,857 ಮಹಿಳೆಯರು ಹಾಗೂ 2944 ಬಾಲಕಿಯರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಗೃಹ ಸಚಿವರಾದ ಬಾಲಾ ಬಚ್ಚನ್ ಕೇಳಿದ ಪ್ರಶ್ನೆಗೆ ಈ ಅಂಕಿಅಂಶಗಳು ಬಹಿರಂಗಗೊಂಡಿವೆ.
ಅಂಕಿಅಂಶಗಳ ಪ್ರಕಾರ ಪ್ರತಿ ದಿನ ಮಧ್ಯ ಪ್ರದೇಶದಲ್ಲಿ ಸರಾಸರಿ 28 ಮಹಿಳೆಯರು ಹಾಗೂ ಬಾಲಕಿಯರು ನಾಪತ್ತೆಯಾಗುತ್ತಿದ್ದಾರೆ. ಈ ಆತಂಕಕಾರಿ ಸಂಖ್ಯೆಯ ಹೊರತಾಗಿಯೂ ಕೇವಲ 724 ನಾಪತ್ತೆ ಪ್ರಕರಣಗಳು ಮಾತ್ರ ಅಧಿಕೃತವಾಗಿ ದಾಖಲಾಗಿವೆ.
ಈ ಸುದ್ದಿ ಓದಿದ್ದೀರಾ? ಹತ್ರಾಸ್ ಕಾಲ್ತುಳಿತ ದುರಂತ| ಮೃತರ ಸಂಖ್ಯೆ 121ಕ್ಕೆ ಏರಿಕೆ, ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆ
ಕಳೆದ 34 ತಿಂಗಳುಗಳಲ್ಲಿ ಉಜ್ಜೈನಿಯಲ್ಲಿ 676 ಮಹಿಳೆಯರು ನಾಪತ್ತೆಯಾಗಿದ್ದರೂ ಇಲ್ಲಿಯವರೆಗೂ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.
ಸಾಗರ ಜಿಲ್ಲೆಯಲ್ಲಿ 245 ಬಾಲಕಿಯರು ನಾಪತ್ತೆಯಾಗಿರುವ ಬಗ್ಗೆ ದಾಖಲಾಗಿದೆ. ಇಂಧೋರ್‌ನಲ್ಲಿ 2384 ಮಹಿಳೆಯರು ನಾಪತ್ತೆಯಾಗಿದ್ದು, ರಾಜ್ಯದಲ್ಲಿ ಇತರ ಜಿಲ್ಲೆಗಳಿಗಿಂತ ಹೆಚ್ಚು ದಾಖಲಾಗಿರುವ ಸಂಖ್ಯೆಯಾಗಿದೆ. ಪ್ರತಿ ತಿಂಗಳು ಇಂಧೋರ್‌ನಲ್ಲಿ 479 ಮಹಿಳೆಯರು ನಾಪತ್ತೆಯಾಗುತ್ತಿದ್ದು, ಕೇವಲ 15 ಪ್ರಕರಣಗಳನ್ನು ಮಾತ್ರ ದಾಖಲಿಸಿಕೊಳ್ಳಲಾಗಿದೆ.
