ಕೇರಳ: ಮೆದುಳು ತಿನ್ನುವ ಅಮೀಬಾ ರೋಗದಿಂದ 14 ವರ್ಷದ ಬಾಲಕ ಸಾವು

Date:

Advertisements

ಮೆದುಳು ತಿನ್ನುವ ಅಮೀಬಾ ರೋಗದಿಂದ 14 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಕೇರಳದ ಕೋಜಿಕೋಡ್‌ನಲ್ಲಿ ನಡೆದಿದೆ. ಕಲುಷಿತ ನೀರಿನಲ್ಲಿ ಕಂಡು ಬರುವ ಮೆದುಳು ತಿನ್ನುವ ಅಮೀಬಾ ಬಾಲಕನ ದೇಹವನ್ನು ಸೇರ್ಪಡೆಗೊಂಡು ಅನಾರೋಗ್ಯ ಉಂಟಾದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

14 ವರ್ಷದ ಬಾಲಕ ಮೃದುಲ್‌ ಚಿಕಿತ್ಸೆ ಫಲಕಾರಿಯಾಗದೆ ಬುಧಬಾರ ರಾತ್ರಿ 11.20ರ ಸಮಯದಲ್ಲಿ ಮೃತಪಟ್ಟಿದ್ದಾನೆ ಎಂದು ಕೇರಳ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಈ ವರ್ಷದ ಮೇ ತಿಂಗಳಿನಿಂದ ರಾಜ್ಯದಲ್ಲಿ ಮೆದುಳು ತಿನ್ನುವ ರೋಗದಿಂದ ಮೃತಪಟ್ಟಿರುವ ಮೂರನೇ ಪ್ರಕರಣ ಇದಾಗಿದೆ.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗಾಯ ನೆಕ್ಕಿಕೊಳ್ಳುತ್ತಿರುವ ಮೋದಿ ಎಚ್ಚರಿಕೆ- ಹೊಸ ದಮನ ದಾಳಿ ದಸ್ತಗಿರಿಗಳ ಮುನ್ಸೂಚನೆ

ಮೇ 21 ರಂದು ಮಲಪ್ಪುರಂನಲ್ಲಿ 5 ವರ್ಷದ ಬಾಲಕಿ ಮೃತಪಟ್ಟಿದ್ದಳು. ನಂತರ ಜೂನ್‌ 25ರಂದು ಕಣ್ಣೂರಿನಲ್ಲಿ13 ವರ್ಷದ ಬಾಲಕಿ ಮೆದುಳು ತಿನ್ನುವ ಅಮೀಬಾ ಕಾಯಿಲೆಯಿಂದ ಅಸುನೀಗಿದ್ದಳು.

ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ಸಣ್ಣ ಕೊಳವೊಂದರಲ್ಲಿ ಆಟವಾಡಿದ ನಂತರ ಬಾಲಕನಿಗೆ ಆನಾರೋಗ್ಯವುಂಟಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯಕೀಯ ಪರಿಣಿತರ ಪ್ರಕಾರ ಮೆದುಳು ತಿನ್ನುವ ಜೀವಂತ ಅಮೀಬಾ ಬ್ಯಾಕ್ಟೀರಿಯ ಕಲುಷಿತ ನೀರಿನಿಂದ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ನೀರಿನಲ್ಲಿ ಆಟವಾಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ | ಅಂತರ್ಜಾತಿ ವಿವಾಹದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ತೆಲಂಗಾಣದ...

ಜಮ್ಮು ಕಾಶ್ಮೀರ ಮೇಘಸ್ಫೋಟ: ಹತ್ತನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ, ಇನ್ನೂ 36 ಮಂದಿ ನಾಪತ್ತೆ

ಜಮ್ಮು ಕಾಶ್ಮೀರ ಮೇಘಸ್ಫೋಟ ದುರಂತದಲ್ಲಿ ಕನಿಷ್ಠ 68 ಮಂದಿ ಸಾವನ್ನಪ್ಪಿ 36...

ಬ್ಯಾಂಕ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ನಿವಾಸದ ಮೇಲೆ ಸಿಬಿಐ ದಾಳಿ, ಎಫ್‌ಐಆರ್ ದಾಖಲು

ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ...

Download Eedina App Android / iOS

X