ಗದಗ ನೂತನ ಜಿಲ್ಲಾಧಿಕಾರಿಯಾಗಿ ಗೋವಿಂದ ರೆಡ್ಡಿ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಗದಗ ಜಿಲ್ಲಾಧಿಕಾರಿ ಆಗಿದ್ದ ವೈಶಾಲಿ ಎಂ ಎಲ್ ಅವರು ವರ್ಗಾವಣೆ ಮಾಡಲಾಗಿದೆ. ಆದರೆ, ಇನ್ನೂ ಕೂಡ ರಾಜ್ಯ ಸರ್ಕಾರ ಹುದ್ದೆ ನಿಗದಿಪಡಿಸಿಲ್ಲ.
ಗದಗ ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡಿರುವ ಗೋವಿಂದ ರೆಡ್ಡಿ ಅವರು ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ, ಕಾರ್ಯ ನಿರ್ವಹಿಸುತ್ತಿದ್ದರು.