ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬಿಜೆಪಿ, ಆರ್‌ಎಸ್‌ಎಸ್‌ನ ಕೋಮುವಾದಿ, ಸರ್ವಾಧಿಕಾರಿ ಧೋರಣೆಗಳನ್ನು ನಿರಂತರವಾಗಿ ಟೀಕಿಸುತ್ತಿರುವ ನಟ ಕಿಶೋರ್, ಇದೀಗ ಮತ್ತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಮೋದಿ ಅವರದ್ದು ಇದೆಂಥಾ ವಿಕೃತ ಮನಸ್ಥಿತಿ. ಸತ್ಯಕ್ಕೆ ಶಾಂತಿಗೆ ಹೆಸರಾದ ದೇಶಕ್ಕೆ ಎಂಥ ಪ್ರಧಾನಿ… ನಾಚಿಕೆಗೇಡು… ದೇಶಕ್ಕೇ ಅವಮಾನ” ಎಂದು ಕಿಡಿಕಾರಿದ್ದಾರೆ.
ಸಂಸತ್‌ನಲ್ಲಿ ಸೋಮವಾರ ಮಾತನಾಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ, “ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ದಿನದ 24 ಗಂಟೆ ಹಿಂಸೆ ಮತ್ತು ದ್ವೇಷದಲ್ಲಿ ತೊಡಗುತ್ತಾರೆ. ಅವರು ಹಿಂದೂಗಳೇ ಅಲ್ಲ” ಎಂದಿದ್ದರು. ಅವರ ಹೇಳಿಕೆಯನ್ನು ಕ್ಷಣಾರ್ಧದಲ್ಲಿ ತಿರುಚಿದ ಪ್ರಧಾನಿ ಮೋದಿ, “”ಇದು ಬಹಳ ಗಂಭೀರ ವಿಚಾರ. ಇಡೀ ಹಿಂದು ಸಮಾಜವನ್ನು ಹಿಂಸಾಚಾರಿಗಳು ಎಂದು ಕರೆಯುವುದು ಸರಿಯಲ್ಲ” ಎಂದಿದ್ದರು. ಅಲ್ಲಿಯೇ ಪ್ರತಿಕ್ರಿಯಿಸಿದ್ದ ರಾಹುಲ್, “ನಾನು ಬಿಜೆಪಿಯನ್ನು ಹಿಂಸಾತ್ಮಕ ಎಂದು ಕರೆದಿದ್ದೇನೆ. ಮೋದಿ ಮಾತ್ರ ಹಿಂದು ಸಮಾಜವಲ್ಲ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಾತ್ರವೇ ಹಿಂದು ಸಮಾಜವಲ್ಲ” ಎಂದು ತಿರುಗೇಟು ನೀಡಿದ್ದರು.
ಆ ಚರ್ಚೆಯ ವಿಡಿಯೋ ತುಣುಕನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ನಟ ಕಿಶೋರ್, “ತನ್ನ ಅಯೋಗ್ಯತೆಯನ್ನು ಮುಚ್ಚಲು, ಇನ್ನೊಬ್ಬರನ್ನು ಕೀಳೆಂದು ತೋರಿಸಲು, ರಾಜಾರೋಷವಾಗಿ ಮಾತು ತಿರುಚುವ ಹಸೀ ಸುಳ್ಳು ಹೇಳುವ, ಹರಡುವ ಅತ್ಯಂತ ಕೀಳುಮಟ್ಟಕ್ಕೂ ಇಳಿಯಬಲ್ಲ, ಘನತೆ ಹೀನ ನಾಚಿಕೆಗೇಡು ಸುಳ್ಳನೆಂದು ತನ್ನನ್ನು ತಾನು ತುಂಬಿದ ಸಭೆಯಲ್ಲಿ ಮತ್ತೆ ರುಜುವಾತು ಮಾಡಿಕೊಂಡ ಮೋದಿ.. ಇದೆಂಥಾ ವಿಕೃತ ಮನಸ್ಥಿತಿ. ಸತ್ಯಕ್ಕೆ ಶಾಂತಿಗೆ ಹೆಸರಾದ ದೇಶಕ್ಕೆ ಎಂಥ ಪ್ರಧಾನಿ… ನಾಚಿಕೆಗೇಡು… ದೇಶಕ್ಕೇ ಅವಮಾನ” ಎಂದು ಬರೆದಿದ್ದಾರೆ. ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
View this post on Instagram