ಸತ್ಯ, ಶಾಂತಿಗೆ ಹೆಸರಾದ ದೇಶಕ್ಕೆ ಎಂಥ ಪ್ರಧಾನಿ, ನಾಚಿಕೆಗೇಡು; ಮೋದಿ ವಿರುದ್ಧ ನಟ ಕಿಶೋರ್ ಕಿಡಿ

Date:

ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬಿಜೆಪಿ, ಆರ್‌ಎಸ್‌ಎಸ್‌ನ ಕೋಮುವಾದಿ, ಸರ್ವಾಧಿಕಾರಿ ಧೋರಣೆಗಳನ್ನು ನಿರಂತರವಾಗಿ ಟೀಕಿಸುತ್ತಿರುವ ನಟ ಕಿಶೋರ್, ಇದೀಗ ಮತ್ತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಮೋದಿ ಅವರದ್ದು ಇದೆಂಥಾ ವಿಕೃತ ಮನಸ್ಥಿತಿ. ಸತ್ಯಕ್ಕೆ ಶಾಂತಿಗೆ ಹೆಸರಾದ ದೇಶಕ್ಕೆ ಎಂಥ ಪ್ರಧಾನಿ… ನಾಚಿಕೆಗೇಡು… ದೇಶಕ್ಕೇ ಅವಮಾನ” ಎಂದು ಕಿಡಿಕಾರಿದ್ದಾರೆ.

ಸಂಸತ್‌ನಲ್ಲಿ ಸೋಮವಾರ ಮಾತನಾಡಿದ್ದ ವಿಪಕ್ಷ ನಾಯಕ ರಾಹುಲ್‌ ಗಾಂಧಿ, “ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ದಿನದ 24 ಗಂಟೆ ಹಿಂಸೆ ಮತ್ತು ದ್ವೇಷದಲ್ಲಿ ತೊಡಗುತ್ತಾರೆ. ಅವರು ಹಿಂದೂಗಳೇ ಅಲ್ಲ” ಎಂದಿದ್ದರು. ಅವರ ಹೇಳಿಕೆಯನ್ನು ಕ್ಷಣಾರ್ಧದಲ್ಲಿ ತಿರುಚಿದ ಪ್ರಧಾನಿ ಮೋದಿ, “”ಇದು ಬಹಳ ಗಂಭೀರ ವಿಚಾರ. ಇಡೀ ಹಿಂದು ಸಮಾಜವನ್ನು ಹಿಂಸಾಚಾರಿಗಳು ಎಂದು ಕರೆಯುವುದು ಸರಿಯಲ್ಲ” ಎಂದಿದ್ದರು. ಅಲ್ಲಿಯೇ ಪ್ರತಿಕ್ರಿಯಿಸಿದ್ದ ರಾಹುಲ್‌, “ನಾನು ಬಿಜೆಪಿಯನ್ನು ಹಿಂಸಾತ್ಮಕ ಎಂದು ಕರೆದಿದ್ದೇನೆ. ಮೋದಿ ಮಾತ್ರ ಹಿಂದು ಸಮಾಜವಲ್ಲ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಾತ್ರವೇ ಹಿಂದು ಸಮಾಜವಲ್ಲ” ಎಂದು ತಿರುಗೇಟು ನೀಡಿದ್ದರು.

ಆ ಚರ್ಚೆಯ ವಿಡಿಯೋ ತುಣುಕನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ನಟ ಕಿಶೋರ್, “ತನ್ನ ಅಯೋಗ್ಯತೆಯನ್ನು ಮುಚ್ಚಲು, ಇನ್ನೊಬ್ಬರನ್ನು ಕೀಳೆಂದು ತೋರಿಸಲು, ರಾಜಾರೋಷವಾಗಿ ಮಾತು ತಿರುಚುವ ಹಸೀ ಸುಳ್ಳು ಹೇಳುವ, ಹರಡುವ ಅತ್ಯಂತ ಕೀಳುಮಟ್ಟಕ್ಕೂ ಇಳಿಯಬಲ್ಲ, ಘನತೆ ಹೀನ ನಾಚಿಕೆಗೇಡು ಸುಳ್ಳನೆಂದು ತನ್ನನ್ನು ತಾನು ತುಂಬಿದ ಸಭೆಯಲ್ಲಿ ಮತ್ತೆ ರುಜುವಾತು ಮಾಡಿಕೊಂಡ ಮೋದಿ.. ಇದೆಂಥಾ ವಿಕೃತ ಮನಸ್ಥಿತಿ. ಸತ್ಯಕ್ಕೆ ಶಾಂತಿಗೆ ಹೆಸರಾದ ದೇಶಕ್ಕೆ ಎಂಥ ಪ್ರಧಾನಿ… ನಾಚಿಕೆಗೇಡು… ದೇಶಕ್ಕೇ ಅವಮಾನ” ಎಂದು ಬರೆದಿದ್ದಾರೆ. ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

 

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರವಿಂದ್ ಕೇಜ್ರಿವಾಲ್ ಕೋಮಾಗೆ ಜಾರಬಹುದು ಎಂದ ಎಎಪಿ, ತಿಹಾರ್ ಜೈಲು ಹೇಳುವುದೇನು?

ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಸೋಮವಾರ...

ಸಿಬಿಐ ದಾಖಲಿಸಿದ್ದ ಪ್ರಕರಣ ರದ್ದುಗೊಳಿಸಲು ಡಿ ಕೆ ಶಿವಕುಮಾರ್ ಕೋರಿದ್ದ ಅರ್ಜಿ ಸುಪ್ರೀಂನಿಂದ ವಜಾ

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಮ್ಮ ವಿರುದ್ಧ ದಾಖಲಿಸಿದ್ದ...