ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥನ ಹತ್ಯೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಬಹುಜನ ಸಮಾಜ ಪಕ್ಷ ತಮಿಳುನಾಡು ರಾಜ್ಯಾಧ್ಯಕ್ಷರನ್ನು ಶುಕ್ರವಾರ ಚೆನ್ನೈನ ಅವರ ಮನೆಯ ಸಮೀಪವೇ ಬೈಕ್‌ನಲ್ಲಿ ಬಂದ ಆರು ಮಂದಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ.
ಆರ್ಮ್‌ಸ್ಟ್ರಾಂಗ್ ಅವರು ನಗರದ ಸೇಂಬಿಯಂ ಪ್ರದೇಶದಲ್ಲಿರುವ ತನ್ನ ಮನೆಯ ಬಳಿ ಬಿಎಸ್‌ಪಿಯ ಕೆಲವು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾಗ ಆರು ಜನರು ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕುಟುಂಬಸ್ಥರು ಆರ್ಮ್‌ಸ್ಟ್ರಾಂಗ್ ಅವರನ್ನು ಕರೆದೊಯ್ದಿದ್ದು, ಆದರೆ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಮನಗರ | ನಾಮಪತ್ರ ವಾಪಸ್ ಪಡೆದ ಬಿಎಸ್‌ಪಿ ಅಭ್ಯರ್ಥಿ; ಪಕ್ಷದಿಂದ ಉಚ್ಛಾಟನೆ
ಕಳೆದ ವರ್ಷ ಗ್ಯಾಂಗ್‌ಸ್ಟಾರ್ ಆರ್ಕಾಟ್ ಸುರೇಶ್ ಹತ್ಯೆಗೆ ಇದು ಪ್ರತೀಕಾರದ ಕೊಲೆಯಾಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಡಿಟಿವಿಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು “ನಾವು ತನಿಖೆ ನಡೆಸುತ್ತಿದ್ದೇವೆ. ಈ ಕೊಲೆಯು ಈ ಹಿಂದಿನ ಕೊಲೆಗೆ ಸಂಬಂಧ ಹೊಂದಿರುವಂತೆ ತೋರುತ್ತಿದೆ” ಎಂದು ಹೇಳಿದ್ದಾರೆ.
“ಕೊಲೆ ಪ್ರಕರಣದಲ್ಲಿ ನಾವು ಇದುವರೆಗೆ 8 ಶಂಕಿತರನ್ನು ಬಂಧಿಸಿದ್ದೇವೆ. ಇದು ಪ್ರಾಥಮಿಕ ತನಿಖೆಯಾಗಿದೆ. ಹತ್ತು ತಂಡಗಳನ್ನು ರಚಿಸಲಾಗಿದೆ. ನಾವು ಅಪರಾಧಿಗಳನ್ನು ಪತ್ತೆ ಹಚ್ಚಲಿದ್ದೇವೆ. ಈ ಶಂಕಿತರ ವಿಚಾರಣೆಯ ನಂತರ, ನಾವು ಕೊಲೆಯ ಹಿಂದಿನ ಉದ್ದೇಶವನ್ನು ಪತ್ತೆಹಚ್ಚಲಿದ್ದೇವೆ” ಎಂದು ಚೆನ್ನೈನ ಹಿರಿಯ ಪೊಲೀಸ್ ಅಧಿಕಾರಿ ಆಸ್ರಾ ಗಾರ್ಗ್ ಹೇಳಿದ್ದಾರೆ.
ವಕೀಲರಾಗಿದ್ದ ಆರ್ಮ್‌ಸ್ಟ್ರಾಂಗ್ ಅವರು 2006ರಲ್ಲಿ ಚೆನ್ನೈ ಕಾರ್ಪೊರೇಷನ್ ಕೌನ್ಸಿಲ್‌ಗೆ ಆಯ್ಕೆಯಾದರು. ಎರಡು ವರ್ಷಗಳ ಹಿಂದೆ ಚೆನ್ನೈನಲ್ಲಿ ಮೆಗಾ ರ್‍ಯಾಲಿಯನ್ನು ಆಯೋಜಿಸಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯನ್ನು ಆಹ್ವಾನಿಸಿದ ನಂತರ ಹೆಚ್ಚು ಮುನ್ನಲೆಗೆ ಬಂದರು.
I am deeply shocked and saddened by the brutal murder of BSP’s Tamil Nadu Chief K. Armstrong by anti-Dalit elements.
On behalf of @VBAforIndia, I strongly condemn this cowardly, villainous and Dalit-targeted act.
There has been a blanket of silence over tides of violence…
— Prakash Ambedkar (@Prksh_Ambedkar) July 6, 2024