ಮರ ಪುಡಿಮಾಡುವ ಯಂತ್ರದಿಂದ ಅಕ್ರಮವಾಗಿ ಮರಗಳನ್ನು ಕಟಾವು ಮಾಡುತ್ತಿರುವುದರಿಂದ ಪರಿಸರ ನಾಶವಾಗುತ್ತಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ, ಕೆಆರ್ಪೇಟೆ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳಲ್ಲಿ, ಅರಣ್ಯ ಇಲಾಖೆಯ ಅನುಮತಿ ಇಲ್ಲದೆ, ಲೈಸೆನ್ಸ್ ಪಡೆಯದೆ ಬಹಳಷ್ಟು ಯಂತ್ರಗಳಿಂದ ಅಕ್ರಮವಾಗಿ ಮರಗಳನ್ನು ಕಡಿದು ಅವಿಗಳನ್ನು ಪುಡಿಮಾಡಲಾಗುತ್ತಿದೆ.
ಪಾಂಡವಪುರ ತಾಲೂಕಿನ ಎಲೆಕೆರೆ, ದೇವೇಗೌಡನ ಕೊಪ್ಪಲು, ಕೆಆರ್ಪೇಟೆ ತಾಲೂಕಿನ ಹೊಸಹೊಳಲು, ಹೆಮ್ಮನಹಳ್ಳಿ, ಅಗಸನಹಳ್ಳಿ ಗ್ರಾಮಗಳಲ್ಲಿ ದಿನಕ್ಕೆ ಸರಿಸುಮಾರು 800ರಿಂದ 1000 ಟನ್ಗಳವರೆಗೆ ಮರಗಳನ್ನು ಕಡಿದು, ಪರಿಸರ ನಾಶ ಮಾಡಲಾಗುತ್ತಿದೆ.
“ಮರ ಕಡಿಯಲು ಯಾವುದೇ ಲೈಸೆನ್ಸ್ ಇಲ್ಲದೆ ಅಕ್ರಮವಾಗಿ ಮರ ಕಡಿದು ಪುಡಿಮಾಡುವ ಪರಿಸರ ನಾಶ ಮಾಡುತ್ತಿದ್ದಾರೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸದೆ ಕಣ್ಣುಮುಚ್ಚಿ ಕುಳಿತಿದ್ದಾರೆ” ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ಈ ಸಲದ ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪಮಾನ ಮಂಡ್ಯ ಜಲ್ಲೆಯಲ್ಲಿ 43 ಡಿಗ್ರಿ ಸೆಲ್ಸಿಸ್ವರೆಗೆ ಕಂಡುಬಂದಿತ್ತು. ಇದೇ ರೀತಿ ಚಿಪ್ಪಿಂಗ್ ಮಿಷಿನ್ಗಳ ಕಾರ್ಯ ನಿರ್ವಹಣೆಯಿಂದ ಪರಿಸರ ನಾಶ ಮುಂದುವರಿದರೆ ಮುಂದಿನ ದಿನಗಳಲ್ಲಿ 50 ಡಿಗ್ರಿ ಸೆಂಟಿಗ್ರೇಡ್ ದಾಟುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವಂತೆ ಸಚಿವ ಕೆ ಹೆಚ್ ಮುನಿಯಪ್ಪ ಸೂಚನೆ
ಮಂಡ್ಯ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಹೇಳಿಕೆ ಪಡೆಯಲು ಈ ದಿನ.ಕಾಮ್ ಪ್ರಯತ್ನಿಸಿದೆಯಾದರೂ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಕೂಡಲೇ ಎಲ್ಲ ಮರ ಪುಡಿಮಾಡುವ(ಚಿಪ್ಪಿಂಗ್ ಮಿಷಿನ್) ಯಂತ್ರಗಳನ್ನು ಸೀಜ಼್ ಮಾಡದೇ ಹೋದರೆ ಸಾರ್ವಜನಿಕರು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.