371(ಜೆ) ಹೈ.ಕ ಮೀಸಲಾತಿ | ತಪ್ಪಾಗುತ್ತಿರುವುದು ಎಲ್ಲಿ? ಸರ್ಕಾರದ ವೈಫಲ್ಯವೇನು?

Date:

Advertisements
ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಪದಾಧಿಕಾರಿಗಳ ಎಡವಟ್ಟಿನಿಂದಾಗಿ ಸರ್ಕಾರದ ಮಟ್ಟದಲ್ಲಿ ‘ಉಪ ಸಚಿವ ಸಂಪುಟ ಸಮಿತಿ’ ರಚಿಸಿಕೊಂಡು ಹೈ.ಕ ಭಾಗದವರಿಗೆ ಎರಡು ವೃಂದಗಳಿಗೆ ಒಂದೇ ನೇಮಕಾತಿ ಅಧಿಸೂಚನೆ ಮತ್ತು ಒಂದೇ ಅರ್ಜಿಯಡಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವುದು ಸಂವಿಧಾನಬಾಹಿರ

ಹೈದ್ರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟು ಪ್ರಾದೇಶಿಕವಾಗಿ ಬಹಳ ಹಿಂದುಳಿದಿದ್ದ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬೀದರ್, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳನ್ನು ಹೈದರಾಬಾದ್ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ಭಾರತದ ಸಂವಿಧಾ‌ನಕ್ಕೆ 2012ರಲ್ಲಿ 98ನೇ ತಿದ್ದುಪಡಿ ಮಾಡಿ 371(j) ವಿಧಿಯನ್ನು ಸೇರ್ಪಡೆ ಮಾಡುವ ಮೂಲಕ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಕರ್ನಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕ ಭಾಗವು ಸಾಕಷ್ಟು ಹಿಂದುಳಿದಿದ್ದ ಕಾರಣ, ಆ ಭಾಗದ ಜನರು ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದ ಕಾರಣ, 371(ಜೆ) ಅಸ್ತಿತ್ವಕ್ಕೆ ಬಂದಿತು.

371(j) ವಿಧಿಯ ಪ್ರಕಾರ, ಹೈದರಾಬಾದ್ ಕರ್ನಾಟಕ/ ಕಲ್ಯಾಣ ಕರ್ನಾಟಕದ ಪ್ರದೇಶಕ್ಕೆ ಸಾರ್ವಜನಿಕ ಉದ್ಯೋಗ ಮತ್ತು  ಸಾರ್ವಜನಿಕ ಶಿಕ್ಷಣದಲ್ಲಿ ಮೀಸಲಾತಿ, ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚನೆ ಹಾಗೂ ವೃತ್ತಿಪರ ತರಬೇತಿ ವಿಷಯದಲ್ಲಿ  ವಿಶೇಷ ಸ್ಥಾನಮಾನವನ್ನ  ಕಲ್ಪಿಸಿಕೊಟ್ಟಿದೆ. ಮಾತ್ರವಲ್ಲದೆ, ಹೇಗೆ ಅನುಷ್ಠಾನ ಮಾಡಬೇಕು ಎನ್ನುವ ಬಗ್ಗೆ ಮೂಲ ಕಾಯ್ದೆ ಮತ್ತು ನಿಯಮಗಳನ್ನು ರೂಪಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ 371(j) ವಿಧಿ ಕಲ್ಪಿಸಿಕೊಟ್ಟಿರುವ ಮೀಸಲಾತಿ ಬಗ್ಗೆ ಹೋರಾಟಗಳು, ಪ್ರತಿಭಟನೆ, ಜಾಥಾಗಳು ಏಕೆ ನಡೆಯುತ್ತಿವೆ, ಇದರ ಹಿಂದಿನ ರಾಜಕೀಯ ಏನು ಎಂಬುದನ್ನು ಪರಿಶೀಲಿಸೋಣ.  ಬೆಂಗಳೂರಿನ ‘ಹಸಿರು ಪ್ರತಿಷ್ಠಾನ’ ಸಂಘಟನೆ ಜೂನ್ 1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ, ‘2023ರ ಫೆಬ್ರವರಿ 1ರಂದು ಸರ್ಕಾರ ಹೊರಡಿಸಿರುವ ಅವೈಜ್ಞಾನಿಕ ಮತ್ತು ಸಂವಿಧಾನ ಬಾಹಿರ ಸುತ್ತೋಲೆಯನ್ನು ರದ್ಧುಮಾಡಬೇಕು’ ಎಂದು ಆಗ್ರಹಿಸಲಾಗಿದೆ. ನೇಮಕಾತಿಗಳಲ್ಲಿ ಮತ್ತು ಮುಂಬಡ್ತಿಗಳಲ್ಲಿ 371(j) ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಮೂಲ ಕಾಯ್ದೆ ಮತ್ತು ನಿಯಮಗಳಿಗೆ ವಿರುದ್ಧವಾಗಿ ಅನುಷ್ಠಾನ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸುವಂತೆ ಸಂಘಟನೆ ಆಗ್ರಹಿಸಿದೆ.

Advertisements

ಈ ಪ್ರತಿಭಟನೆಯನ್ನು ವಿರೋಧಿಸಿ ಹೈದರಾಬಾದ್ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ ಪ್ರತಿಭಟನೆಗಳು, ಹೋರಾಟಗಳು ನಡೆದಿದ್ದು, 371(j) ಮೀಸಲಾತಿಯನ್ನು ವಿರೋಧಿಸಿದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಮುನ್ನೆಲೆಗೆ ಬರುತ್ತದೆ. ಈ ಬಗ್ಗೆ ಜನಾಭಿಪ್ರಾಯ ಮೂಡಿಸಲು ಜನಾಂದೋಲನಗಳು ಪ್ರಾರಂಭ ಮಾಡುತ್ತೇವೆ ಎನ್ನುವಂತಹ ಕೂಗುಗಳು ಕೇಳಿ ಬರುತ್ತಿವೆ. 2014ರಿಂದ ಇಲ್ಲದ ಈ ಕೂಗು ಇತ್ತೀಚಿನ ದಿನಗಳಲ್ಲಿ ಮುನ್ನೆಲೆಗೆ ಬಂದಿದೆ ಎಂಬುದನ್ನು ನಾವು ಗಮನಿಸಬೇಕು.

ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿಗಳಲ್ಲಿ 371(j) ಮೀಸಲಾತಿಯನ್ನು ಸರಿಯಾಗಿ ಅನುಷ್ಠಾನ ಮಾಡದೇ, ತಪ್ಪಾಗಿ ಅಳವಡಿಸಲಾಗಿದೆ. ಪರಿಣಾಮ, ಉಳಿದ 24 ಜಿಲ್ಲೆಯ ಅಭ್ಯರ್ಥಿಗಳಿಗೆ ಎಲ್ಲ ನೇಮಕಾತಿಗಳಲ್ಲಿಯೂ ಅನ್ಯಾಯ ಮಾಡಿ ಅವಕಾಶ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ. ಇನ್ನೊಂದೆಡೆ 371(j) ವಿಧಿಯನ್ನೇ ವಿರೋಧಿಸುತ್ತಿದ್ದಾರೆ ಎಂದು ಹೈದರಾಬಾದ್ ಕರ್ನಾಟಕದ ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಭಾರತದ ರಾಷ್ಟ್ರಪತಿಗಳು ನಮ್ಮ ಕರ್ನಾಟಕದ ರಾಜ್ಯಪಾಲರಿಗೆ 371(j)ವಿಧಿಯನ್ನು ಅನುಷ್ಠಾನ ಮಾಡುವ ಅಧಿಕಾರವನ್ನು ನೀಡಿದ್ದಾರೆ. ಈ ಬಗ್ಗೆ 2013ರ ಜನವರಿ 1ರಂದು ಅಧಿಕೃತವಾಗಿ ಭಾರತದ ಗೆಜೆಟ್‌ನಲ್ಲಿ ದಾಖಲಿಸಲಾಗಿದೆ. ಇದರ ಆಧಾರದ ಮೇಲೆ ರಾಜ್ಯದ ರಾಜ್ಯಪಾಲರು 2013ರ ನವೆಂಬರ್ 06ರಂದು ‘ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ-2013’ ಎಂದು ಅಧಿಕೃತವಾಗಿ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದಾರೆ.

ಇದರಲ್ಲಿರುವ ಅಧ್ಯಾಯ -1 ಕಂಡಿಕೆ 3ರಲ್ಲಿ ಸ್ಥಳೀಯ ವೃಂದಗಳ ರಚನೆ ಬಗ್ಗೆ  ಮತ್ತು ಕಂಡಿಕೆ 5(1) ರಲ್ಲಿ ಸ್ಥಳೀಯ ವೃಂದಗಳು ಮತ್ತು ವ್ಯಕ್ತಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ನಿರ್ದೇಶನವಿದೆ. ಕಂಡಿಕೆ 13ರಲ್ಲಿ ಹೈದರಾಬಾದ್ ಕರ್ನಾಟಕ ಭಾಗದವರಿಗೆ ರಾಜ್ಯಮಟ್ಟದಲ್ಲಿ ಗುರುತಿಸಿ ನೀಡಬೇಕಾದ ಶೇ.8ರಷ್ಟು ಹುದ್ದೆಗಳ ಬಗ್ಗೆ ನಿರ್ದೇಶನಗಳನ್ನು ನೀಡಲಾಗಿದೆ. ಈ ಆದೇಶಗಳ ಆಧಾರದ ಮೇಲೆ 2014ರ ಜನವರಿ 29ರಂದು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಸ್ಥಳೀಯ ವೃಂದಗಳ ರಚನೆ, ಹಂಚಿಕೆ ಮತ್ತು ವ್ಯಕ್ತಿಗಳ ವರ್ಗಾವಣೆ ನಿಯಮಗಳು-2013 ಅನ್ನು ರಚಿಸಿ ಅಧಿಕೃತ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

371(j) ವಿಧಿಗೆ ಸಂಬಂಧಿಸಿದ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಮಾತೃ ವೃಂದದಲ್ಲಿ ಸ್ಥಳೀಯ ವೃಂದಗಳನ್ನು ಮೊದಲಿಗೆ ನೇಮಕಾತಿ ಅಧಿಸೂಚನೆ ಮೂಲಕ ಒಂದು ಪ್ರತ್ಯೇಕವಾದ ಸ್ಥಳೀಯ ವೃಂದಗಳನ್ನು ಗುರುತಿಸಿ ರೋಷ್ಟರ್ ಆವರ್ತಕವನ್ನು ರಚಿಸಿಕೊಳ್ಳಬೇಕಾಗುತ್ತದೆ. ಅದರಂತೆ ಎಲ್ಲ ನೇಮಕಾತಿಯಲ್ಲಿ ಸ್ಥಳೀಯ ವೃಂದಗಳನ್ನು ಗುರುತಿಸಿ, ರೋಷ್ಟರ್ ಆವರ್ತಕವನ್ನು ವಿಂಗಡಿಸಲಾಗಿರುತ್ತದೆ‌.

  1. ರಾಜ್ಯಮಟ್ಟದ ಸ್ಥಳೀಯ ವೃಂದ: 8% ಉಳಿದ 24 ಜಿಲ್ಲೆಗಳಲ್ಲಿ ಗುರುತಿಸಬೇಕಾದ ಸ್ಥಳೀಯ ವೃಂದದ ಹುದ್ದೆಗಳು (ಆದೇಶದ ಕಂಡಿಕೆ 13ರ ಆಧಾರದ ಮೇಲೆ ಹೈ.ಕ ದವರಿಗೆ ಹೈ.ಕ ಪ್ರದೇಶ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ನೀಡಬೇಕಾದ ಶೇ.8ರಷ್ಟು ಹುದ್ದೆಗಳು).
  2. ಪ್ರಾದೇಶಿಕ ಸ್ಥಳೀಯ ವೃಂದ: ಸ್ಥಳೀಯ ಪ್ರದೇಶದಲ್ಲಿ ಉದ್ಭವವಾದ ಒಟ್ಟು ಹುದ್ದೆಗಳಲ್ಲಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಹುದ್ದೆಗಳಿಗೆ ಶೇ. 75%
    ಗ್ರೂಪ್ ‘ಸಿ’ ಹುದ್ದೆಗಳಿಗೆ ಶೇ. 80%
    ಗ್ರೂಪ್ ‘ಡಿ’ ಹುದ್ದೆಗಳಿಗೆ 85% ಪ್ರಾದೇಶಿಕ ಸ್ಥಳೀಯ ವೃಂದವೆಂದು ಗುರುತಿಸ ಬೇಕಾಗುತ್ತದೆ. (ಹೈ.ಕ ದವರಿಗೆ ಹೈ.ಕ ಪ್ರದೇಶ/ ಜಿಲ್ಲೆಗಳಲ್ಲಿ ಕೊಡಬೇಕಾದ ವಿಶೇಷ ಮೀಸಲಾತಿ ಪ್ರಮಾಣ)
  3. ರಾಜ್ಯವ್ಯಾಪಿ ಸ್ಥಳೀಯ ವೃಂದ: ರಾಜ್ಯಮಟ್ಟದ ಸ್ಥಳೀಯ ವೃಂದದ ಶೇ.8ರಷ್ಟು ಹುದ್ದೆಗಳನ್ನು ಪ್ರಾದೇಶಿಕ ಮಟ್ಟದ ಸ್ಥಳೀಯ ಶೇ.75, ಶೇ.80, ಶೇ.85ರ ಜೊತೆಗೆ ವಿಲೀನಗೊಳಿಸಿದರೆ ಅದು ರಾಜ್ಯವ್ಯಾಪಿ ಸ್ಥಳೀಯ ವೃಂದವಾಗಿ ರೂಪ ಪಡೆದುಕೊಳ್ಳುತ್ತದೆ. ಅಂದರೆ ನೇಮಕಾತಿ ಅಧಿಸೂಚನೆ ಮೂಲಕ ಗುರುತಿಸಲಾಗುತ್ತದೆ.

ಮೂಲ ವೃಂದದಲ್ಲಿ ಮೇಲೆ ವಿವರಿಸಿರುವ ರೀತಿಯಲ್ಲಿ ಸ್ಥಳೀಯ ವೃಂದಗಳನ್ನು ಗುರುತಿಸಿದ ನಂತರ ಮೂಲ ವೃಂದ (ಕರ್ನಾಟಕ)ದಲ್ಲಿ ಉಳಿದುಕೊಂಡ ವೃಂದವನ್ನ ಉಳಿಕೆ ಮೂಲ ವೃಂದ ಎಂದು ಕರೆಯಲಾಗುತ್ತದೆ. ಇಲ್ಲಿ ಸ್ಪಷ್ಟಪಡಿಸುವುದೇನೆಂದರೆ ಉಳಿಕೆ ಮೂಲ ವೃಂದದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಉಳಿದುಕೊಂಡಂತಹ ಶೇ.25, ಶೇ.20, ಶೇ.15 ಹಾಗೂ ಉಳಿದ ಜಿಲ್ಲೆಗಳಲ್ಲಿ ಉಳಿದುಕೊಂಡಂತ ಶೇ.92 ಹುದ್ದೆಗಳನ್ನು ಒಳಗೊಂಡಿರುತ್ತದೆ. ಇವುಗಳ ಆಧಾರದ ಮೇಲೆಯೇ ಎಲ್ಲ ನೇಮಕಾತಿಗಳಲ್ಲಿ ಉಳಿಕೆ ಮೂಲ ವೃಂದ (residual parent cadre) ಮತ್ತು ಸ್ಥಳೀಯ ವೃಂದ / ಕಲ್ಯಾಣ ಕರ್ನಾಟಕ ವೃಂದ / ರಾಜ್ಯವ್ಯಾಪಿ ಸ್ಥಳೀಯ ವೃಂದ ಎಂಬ ಎರಡು ಪ್ರತ್ಯೇಕ ಘಟಕಗಳು ಎರಡು ವೃಂದಗಳ ರೀತಿಯಲ್ಲಿ ರೋಷ್ಟರ್ ಬಿಂದುಗಳು ಮತ್ತು ರೋಷ್ಟರ್ ಸೈಕಲ್‌ಗೆ ಅನುಗುಣವಾಗಿ ಸಮನಾಂತರವಾದ ಎರಡು ರೋಷ್ಟರ್ ಆವರ್ತಕಗಳನ್ನು ಎಲ್ಲ ನೇಮಕಾತಿಗಳಲ್ಲಿ ಗುರುತಿಸಿ ಅಧಿಸೂಚನೆ ಹೊರಡಿಸಲಾಗುತ್ತದೆ. ಇಲ್ಲಿಯವರೆಗೆ ಒಂದು ಮಟ್ಟಿಗೆ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸ್ಪಷ್ಟತೆ ಇರುತ್ತದೆ.

ಅಂದರೆ, ಸ್ಥಳೀಯ ವೃಂದದಲ್ಲಿ ಪ್ರಾದೇಶಿಕ ಸ್ಥಳೀಯ ವೃಂದದ ಕ್ರಮವಾಗಿ ಗ್ರೂಪ್ ಎ, ಬಿ, ಸಿ ಮತ್ತು ಡಿ ವರ್ಗದಲ್ಲಿ 75%, 80%, 85% ಜೊತೆಗೆ ರಾಜ್ಯಮಟ್ಟದ ಸ್ಥಳೀಯ ವೃಂದ ಅಂದರೆ ಉಳಿದ 24 ಜಿಲ್ಲೆಯಲ್ಲಿ ಹೈದರಾಬಾದ್ ಕರ್ನಾಟಕದವರಿಗೆ ಮೀಸಲಿರುವ ಶೇ.8ರಷ್ಟು ಹುದ್ದೆಗಳನ್ನು ಒಳಗೊಂಡಿರುತ್ತದೆ.

ಉಳಿಕೆ ಮೂಲ ವೃಂದದಲ್ಲಿ 92% ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಉಳಿಯುವ 25%, 20%, 15% ಹುದ್ದೆಗಳು ಒಳಗೊಂಡಿರುತ್ತದೆ. ಇದು ರಾಜ್ಯಮಟ್ಟದ ನೇಮಕಾತಿ ಆಗಿದ್ದಾಗ ಇನ್ನೂ ಜಿಲ್ಲಾ ಮಟ್ಟದ ನೇಮಕಾತಿಗಳಲ್ಲಿ ಸ್ಥಳೀಯ ವೃಂದದ 80%, ಮಿಕ್ಕುಳಿದ ವೃಂದದ 20% ಅಥವಾ 15% ಹುದ್ದೆಗಳನ್ನು ಪ್ರತ್ಯೇಕವಾಗಿ ಗುರುತಿಸಿ ಅಧಿಸೂಚಿಸಿರುತ್ತಾರೆ.

ಒಂದೇ ಪದನಾಮದ ಹುದ್ದೆಗೆ ಒಂದೇ ನೇಮಕಾತಿ ಅಧಿಸೂಚನೆಯಲ್ಲಿ  ಎರಡು ಪ್ರತ್ಯೇಕ ವೃಂದಗಳನ್ನು ರೋಷ್ಟರ್ ಬಿಂದು ಮತ್ತು ರೋಷ್ಟರ್ ಸೈಕಲ್‌ಗೆ ಅನುಗುಣವಾಗಿ ವರ್ಗೀಕರಿಸಿದ ಎರಡು ಸಮನಾಂತರ ರೋಷ್ಟರ್ ಆವರ್ತಕಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ಸಮಯದಲ್ಲಿ ಹೈ.ಕ ಭಾಗದ ಅಭ್ಯರ್ಥಿಗಳು ನೀವು ಹೈದರಾಬಾದ್ ಕರ್ನಾಟಕ ಮೀಸಲಾತಿ ಕೋರುತ್ತೇವೆ ಎನ್ನುವ ಆಯ್ಕೆಯನ್ನು ‘ಹೌದು’ ಎಂದು ಆಯ್ಕೆ ಕೊಟ್ಟನಂತರ, ಉಳಿಕೆ ಮೂಲ ವೃಂದದಕ್ಕೆ ಅರ್ಜಿ ಸಲ್ಲಿಸುವ ಅವಕಾಶ ನೀಡಬಾರದು. ಏಕೆಂದರೆ ಇದು ವೃಂದಗಳ ನೇಮಕಾತಿ, ಒಂದೇ ಪದನಾಮದ ಹುದ್ದೆಗಳು ಎರಡು ವೃಂದಗಳಲ್ಲಿ ಇರುತ್ತದೆ. ಒಂದು ವೇಳೆ ಹೈ.ಕ ಭಾಗದವರು ಸ್ಥಳೀಯ ಮೀಸಲಾತಿ ಅಂದರೆ ಹೈ.ಕ ಮೀಸಲಾತಿಯನ್ನು ಕ್ಲೇಮು ಮಾಡದೆ, ಉಳಿಕೆ ಮೂಲವೃಂದದಲ್ಲಿ ಭಾಗವಹಿಸ ಬಹುದೆ ವಿನಃ ಎರಡು ವೃಂದಗಳಲ್ಲಿ ಭಾಗವಹಿಸಲಿಕ್ಕೆ ಅವಕಾಶ ಇರುವುದಿಲ್ಲ. ಹೈ.ಕ ಭಾಗದವರು ಯಾವುದಾದರೂ ಒಂದು ವೃಂದವನ್ನು ಆಯ್ಕೆ ಮಾಡಿಕೊಳ್ಳಬಹುದು ಆದರೆ ಉಳಿದ 24 ಜಿಲ್ಲೆಯವರು ಕಡ್ಡಾಯವಾಗಿ ಉಳಿಕೆ ಮೂಲ ವೃಂದ/ ಮಿಕ್ಕುಳಿದ ವೃಂದಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಪದಾಧಿಕಾರಿಗಳ ಎಡವಟ್ಟಿನಿಂದಾಗಿ ಸರ್ಕಾರದ ಮಟ್ಟದಲ್ಲಿ ‘ಉಪ ಸಚಿವ ಸಂಪುಟ ಸಮಿತಿ’ ರಚಿಸಿಕೊಂಡು ಆ ಉಪಸಮಿತಿಗಳಲ್ಲಿ ಹೈ.ಕ ಭಾಗದವರಿಗೆ ಎರಡು ವೃಂದಗಳಿಗೆ ಒಂದೇ ನೇಮಕಾತಿ ಅಧಿಸೂಚನೆ ಮತ್ತು ಒಂದೇ ಅರ್ಜಿಯಡಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವುದು ಸಂವಿಧಾನಬಾಹಿರ. ಇದು 371(j) ಕಾಯ್ದೆ ಮತ್ತು ನಿಯಮಗಳ ಕಂಡಿಕೆ 3 ಮತ್ತು 4ಕ್ಕೆ ವಿರುದ್ಧವಾಗಿದೆ. ಕಂಡಿಕೆ 3ರಲ್ಲಿ ಸ್ಥಳೀಯ ವೃಂದಗಳ ರಚನೆ ಮಾಡುವ ಬಗ್ಗೆ ನಿರ್ದೇಶವಿದೆ. ಕಂಡಿಕೆ 4ರಲ್ಲಿ “ಉಳಿಕೆ ಮೂಲವೃಂದ ಮತ್ತು ಅದರಿಂದ ರೂಪಿಸಲಾದ ಸ್ಥಳೀಯ ವೃಂದವನ್ನು ನೌಕರಿ,ಭರ್ತಿ, ನೇಮಕಾತಿ, ಜೇಷ್ಠತೆ, ಮುಂಬಡ್ತಿಯ ಉದ್ದೇಶಕ್ಕೆ ಮತ್ತು ಮೀಸಲಾತಿಯ ನಿರ್ವಹಣೆಗಾಗಿ ಒಂದು ಪ್ರತ್ಯೇಕ ಘಟಕವೆಂದು ಪರಿಗಣಿಸತಕ್ಕದ್ದು. ಎರಡು ಸಮಾನಾಂತರ ರೋಸ್ಟರ್ ಆವರ್ತಕಗಳನ್ನು, ಉಳಿದ ಮೂಲ ವೃಂದ ಮತ್ತು ಸ್ಥಳೀಯ ವೃಂದಕ್ಕಾಗಿ ಜಾರಿಗೊಳಿಸತಕ್ಕದ್ದು” ಎಂದು ಸ್ಪಷ್ಟವಾಗಿ ನಿರ್ದೇಶನವಿದೆ. ಆದರೂ, ಅದನ್ನು ಪಾಲಿಸದೆ, ಉಪಸಚಿವ ಸಂಪುಟ ಸಮಿತಿ ರಚಿಸಿಕೊಂಡು ಮನಸೋ ಇಚ್ಛೆ ಮಾರ್ಗಸೂಚಿಗಳನ್ನು ರಚಿಸಿ, ಸುತ್ತೋಲೆ ಮೂಲಕ ಹೊರಡಿಸಿ, 371(j) ಮೂಲ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ ಎನ್ನುವಂತೆ ಬಿಂಬಿಸಲಾಗಿದೆ.

ಉಪಸಚಿವ ಸಂಪುಟದ ಪದಾಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಒಂದೊಂದು ನೇಮಕಾತಿಗೆ ಒಂದೊಂದು ರೀತಿಯಲ್ಲಿ ಸುತ್ತೋಲೆಗಳನ್ನು ಹೊರಡಿಸಿ, ಬಳಿಕ ಅವುಗಳನ್ನು ಸರ್ಕಾರ ಹಿಂಪಡೆದು ಕೊಂಡ ರಾಜಕೀಯ ಆಟಗಳು ನಡೆದಿವೆ.

ಈ ವರದಿ ಓದಿದ್ದೀರಾ?: ಜನ ಮರುಳೋ ಜಾತ್ರೆ ಮರುಳೋ; ಸ್ವಯಂಘೋಷಿತ ದೇವಮಾನವನ ಪಾದ ಮುಟ್ಟಲು ಪ್ರಾಣತೆತ್ತ ಜನರು

2023ರ ಫೆಬ್ರವರಿ 1ರಂದು ಸರ್ಕಾರ ಹೊರಡಿಸಿದ ಸುತ್ತೋಲೆ ಹೆಚ್ಚು ವಿವಾದಕ್ಕೆ ಕಾರಣವಾಯಿತು. ಯಾಕೆಂದರೆ, ಈ ಸುತ್ತೋಲೆಯ ಕೊನೆಯ ಕಂಡಿಕೆಯಲ್ಲಿ ‘ಅರ್ಜಿ ಸಲ್ಲಿಸುವ ಸಮಯದಲ್ಲಿ ಸ್ಥಳೀಯ ಅಭ್ಯರ್ಥಿಗಳಿಂದ ಪಡೆಯಲಾಗಿರುವ ಆಯ್ಕೆಗಳನ್ನು ಪರಿಗಣಿಸದೇ, ಮೆರಿಟ್ ಪಟ್ಟಿಯಿಂದ ಆಯ್ಕೆ ಪಟ್ಟಿ ತಯಾರಿಸುವಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಪರಿಗಣಿಸಿ ಆಯ್ಕೆಪಟ್ಟಿಯನ್ನು ತಯಾರಿಸಬೇಕು’ ಎಂದು ಸೂಚಿಲಾಗಿದೆ. ಈ ಪ್ರಕ್ರಿಯೆ ಮೂಲ ಕಾಯ್ದೆಯ ಕಂಡಿಕೆ 5(1)ಕ್ಕೆ ಹಾಗೂ ನಿಯಮಗಳು ಕಂಡಿಕೆ 3 ಮತ್ತು 4ಕ್ಕೆ  ಹಾಗೂ  KCSRs 8(7)ರ ನಿಯಮಗಳಿಗೆ ವಿರುದ್ಧವಾಗಿದೆ.  ಇದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಗಮನಿಸದೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಪದವೀದರ ಶಿಕ್ಷಕರ ನೇಮಕಾತಿ, KPTCL ನೇಮಕಾತಿ ಇತ್ಯಾದಿ ನೇಮಕಾತಿಗಳಿಗೆ ಪೂರ್ವಾನ್ವಯ ಮಾಡಿ ದೊಡ್ಡ ಪ್ರಮಾದವನ್ನೇ ಎಸಗಿದೆ.

ಈ ನಡುವೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ದಿನಾಂಕ:08/11/2023 ದಾವೆ ಸಂಖ್ಯೆ: 2688 & 2689ರ ಅಡಿ ವಿಚಾರಣೆ ನಡೆಸಿ ದಿನಾಂಕ: 10/02/2023ರ ಸುತ್ತೋಲೆಯು ರಾಜ್ಯಪಾಲರ ಆದೇಶ ಮತ್ತು ನಿಯಮಗಳು 2013ಕ್ಕೆ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಒಂದೇ ಪದನಾಮದ ಹುದ್ದೆಗೆ ಎರಡೆರಡು ಅವಕಾಶ ಕಲ್ಪಿಸಿಕೊಟ್ಟಂತೆ ಆಗುತ್ತದೆ ಎಂದು ಹೇಳಿ, ದಿನಾಂಕ: 06/06/2020ರ ಸುತ್ತೋಲೆಯನ್ನು ರದ್ಧುಮಾಡುವಂತೆ ತನ್ನ ಆದೇಶದಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ, ಆಗಿರುವ ತಪ್ಪನ್ನು ತಿದ್ದಿಕೊಳ್ಳುವುದನ್ನು ಬಿಟ್ಟು ಸರ್ಕಾರದ ಅಧಿಕಾರಿಗಳು ಅನವಶ್ಯಕವಾಗಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಅಭ್ಯರ್ಥಿಗಳ ಭವಿಷ್ಯದ ಜೊತೆ ಚಲ್ಲಾಟ ಆಡುತ್ತಿದ್ದಾರೆ. ಸರ್ಕಾರದ ಈ ನಡೆಯ ಹಿಂದೆ ಹೈದರಾಬಾದ್ ಕರ್ನಾಟಕದ ಹೋರಾಟ ಸಮಿತಿಯ ಪದಾಧಿಕಾರಿಗಳ ಕೈವಾಡ ಮತ್ತು ಕೆಲವು ಜನಪ್ರತಿನಿಧಿಗಳ ಒತ್ತಡವು ಇದೆ.

ಒಂದೊಂದು ನೇಮಕಾತಿಗೆ ಒಂದೊಂದು ಸುತ್ತೋಲೆ ಜಾರಿಗೊಳಿಸಿಕೊಂಡು ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಎರಡೆರಡು ಅವಕಾಶಗಳನ್ನು ಕಲ್ಪಿಸಿಕೊಟ್ಟು ಉಳಿದ 24 ಜಿಲ್ಲೆಯ ಅಭ್ಯರ್ಥಿಗಳನ್ನು ಸರ್ಕಾರಿ ಹುದ್ದೆ ಪಡೆಯುವ ಅವಕಾಶದಿಂದ ವಂಚಿತರನ್ನಾಗಿ ಮಾಡುತ್ತಿರುವ ಕೆಟ್ಟ ರಾಜಕೀಯ ಆಟವನ್ನು ತಡೆಯಬೇಕಿದೆ. ಇದೊಂದು ದೊಡ್ಡ ಪ್ರಮಾದ ಈ ಪ್ರಮಾದಕ್ಕೆ ಕಾರಣ ಹೈದರಾಬಾದ್ ಕರ್ನಾಟಕ ಭಾಗದ ಕೆಲವು ಜನಪ್ರತಿನಿಧಿಗಳು ಮತ್ತು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕಾರಿಗಳೇ ನೇರ ಹೊಣೆಗಾರರು.

ಇವರೆಲ್ಲ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಕರ್ತವ್ಯ ಲೋಪ ಮಾಡಿದ್ದರ ಪರಿಣಾಮ, ಕಳೆದ 10 ವರ್ಷಗಳಿಂದ ಈ ಪ್ರಮಾದ ನಡೆದು ಹೋಗಿದೆ. ಈ ಅನ್ಯಾಯಕ್ಕೆ ಒಳಗಾಗಿ ಸರ್ಕಾರಿ ಹುದ್ದೆ ಪಡೆಯುವ ಅವಕಾಶದಿಂದ ವಂಚನೆಗೆ ಒಳಗಾದ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸುವವರು ಯಾರು? ಈ ರೀತಿ ಮುಂದೆ ಆಗುವ ಪ್ರಮಾದಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಆಗಿರುವ ಪ್ರಮಾದದ ಬಗ್ಗೆ ತನಿಖೆ ನಡೆಸಬೇಕು. ಮುಂದಿನ ನೇಮಕಾತಿಗಳಲ್ಲಿ ಈ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಅರ್ಜುನ್ ಪಿ ತಿರುವರಂಗ
ಅರ್ಜುನ್ ಪಿ ತಿರುವರಂಗ
ಮುಖಂಡರು, ನಾನ್ ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳ ಹೋರಾಟ ಸಮಿತಿ

4 COMMENTS

  1. ಕಲ್ಯಾಣ ಕರ್ನಾಟಕ ಮೀಸಲಾತಿಯಬಗ್ಗೆ ನಿಖರವಾದ ಮಾಹಿತಿಯನ್ನು ನೀಡಿದಕ್ಕೆ ಧನ್ಯವಾದಗಳು… Nkk ಭಾಗದ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ನಿಮ್ಮ ಅಂಕಣವು ಹೀಗೆ ಮುಂದುವರೆಯಲಿ.

    • 24 ಜಿಲ್ಲೆಗೆ ಇಷ್ಟು ದೊಡ್ಡ ಮಟ್ಟದಲ್ಲಿ ಅನ್ಯಾಯ ಮಾಡುತ್ತಿದ್ದಾರೆ hk ಭಾಗದವರು , 24 ಜಿಲ್ಲೆ ದವರೂ ಎಚೆಟ್ಟುಕೊಳ್ಳಬೇಕು

  2. Arjun sir, I want ur details if possible please attach ur mail I’d here..I just wanna discuss certain points ..IAM also a nonhk candidate if u provide ur contact details it will be helpful

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

Download Eedina App Android / iOS

X