ಎಡಪಂಥೀಯ ಸಿದ್ಧಾಂತವನ್ನು ಹೊಂದಿದ್ದ ಲೇಬರ್ ಪಕ್ಷದ ನಿಲುವನ್ನೇ ಬದಲಿಸಿರುವ, ಸೈದ್ಧಾಂತಿಕ ಬದ್ದತೆಯಿಲ್ಲದ ಸ್ಟಾರ್ಮರ್ ಆಡಳಿತದಲ್ಲಿ ಬ್ರಿಟನ್‌ನ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಬರುವುದಿಲ್ಲ. NATOದೊಂದಿಗೆ ಬ್ರಿಟನ್ ಮುಂದುವರೆಯುತ್ತದೆ. ಯುರೋಪಿಯನ್ ಒಕ್ಕೂಟಕ್ಕೆ ಬ್ರಿಟನ್ ಮರುಸೇರ್ಪಡೆಯಾಗುವುದಿಲ್ಲ. ಹೆಸರಿಗಷ್ಟೇ ಎಡಪಂಥೀಯ ಪಕ್ಷವಾಗಿರುವ ಲೇಬರ್ ಪಕ್ಷದ ಆಡಳಿತದಲ್ಲೂ ಬ್ರಿಟನ್ ಜನರ ಬದುಕು ಬದಲಾಗುವುದಿಲ್ಲ ಎಂಬುದು ಬ್ರಿಟನ್ ಜನರಿಂದಲೇ ಹೊರಬರುತ್ತಿದೆ.