ತಿಪಟೂರು | ಸಾಮಾಜಿಕ ಕ್ರಾಂತಿಕಾರಿಯ ಶಕ್ತಿ ಅಸ್ತಂಗತ : ದಲಿತ ಮುಖಂಡ ಸಿ ಎಸ್ ಪಾರ್ಥಸಾರಥಿ ಇನ್ನಿಲ್ಲ

Date:

ದಲಿತ ಚಳುವಳಿಯ ಮತ್ತೊಂದು ಕೊಂಡಿ ಈಗ ಕಳಚಿದ್ದು ನಾಡಿನ ದಲಿತ ಸಮಾಜದಲ್ಲಿ ಸೂತಕದ ಜೊತೆಗೆ ಆತಂಕ ಮನೆ ಮಾಡಿದೆ. ಸಿ ಎಸ್ ಪಾರ್ಥಸಾರಥಿ(59) ಸೋಮವಾರ(ಜುಲೈ 8) ನಿಧನರಾಗಿದ್ದಾರೆ. ಪತ್ನಿ, ಪುತ್ರಿ ಜೊತೆಗೆ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ‌. ಮಗಳನ್ನು ಡಾಕ್ಟರ್ ಮಾಡಬೇಕೆಂದು ಕನಸು ಕಂಡಿದ್ದರು.

- Advertisement -

ಎಪ್ಪತ್ತರ ದಶಕದಲ್ಲಿ ಬಿಕೆಯವರ ಜೊತೆಗೆ ಹೆಜ್ಜೆ ಹಾಕಿ ನಾಡಿನಲ್ಲಿ ಹೋರಾಟದ ಕಿಚ್ಚು ಹಚ್ಚಿದ ದಲಿತ ಸಮಾಜದ ಕೊನೆಯ ಕೊಂಡಿಗಳು ಈಗ ಒಂದೊಂದೆ ಕಳಚುತ್ತಾ ಅನಾಥ ಪ್ರಜ್ಞೆ ಕಾಡಲು ಶುರು ಮಾಡಿದೆ. ಈಚೆಗೆ ಸಮಾಜದ ಹೆಸರಾಂಥ ಕವಿ ಲಕ್ಕರ್ ಆನಂದ್ ಅವರನ್ನು ಕಳೆದುಕೊಂಡ ನಂತರ ಅತ್ಯಂತ ಪ್ರಾಮಾಣಿಕ ಸೇವಾ ಮನೋಭಾವದ ನಿರ್ಗರ್ವಿ, ಸರಳ ಸಜ್ಜನ ನಾರಾಯಣ ರಾಜು ಅಗಲಿದ್ದು ನಮ್ಮಗೆಲ್ಲಾ ನುಂಗಲಾರದ ತುತ್ತಾಗಿತ್ತು. ‌ದಿನ ಕಳೆಯುವುದರ ಒಳಗೆ ನಮ್ಮ ಮೆಚ್ಚಿನ ಪಾರ್ಥಣ್ಣ ಇನ್ನೂ ಇಲ್ಲ ಎನ್ನುವ ಮಾತೇ ನೂರು ಬಾಣಗಳು ಎದೆಗೆ ನಾಟಿದ ನೋವಿನ ಅನುಭವವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

‌ಸಂಘಟನೆ, ಹೋರಾಟದ ನೈಜತೆ ಅರ್ಥ ಮಾಡಿಕೊಂಡು ಸದಾ ಕ್ರಾಂತಿಯ ಮನಸ್ಸಿನಿಂದ ಸಾಮಾಜಿಕ ನ್ಯಾಯ ಬಗ್ಗೆ ಚಿಂತಿಸುತ್ತಿದ್ದ ಸಂಘ ಜೀವಿ ಪಾರ್ಥಣ್ಣ ಒಂದು ದೊಡ್ಡ ಸಂಘಟನಾ ಶಕ್ತಿಯಾಗಿದ್ದರು. ಸಮಾಜದ ಅಭಿವೃದ್ಧಿಯ ಬಗ್ಗೆ ಸದಾ ಚಿಂತಿಸುತ್ತಿದ್ದ ಪಾರ್ಥಣ್ಣ, ಒಳ ಮೀಸಲಾತಿ ಕನಸು ಕಾಣುತ್ತಾ ಮಹತ್ತರವಾದ ಆಶಾಭಾವನೆ ಇಟ್ಟುಕೊಂಡಿದ್ದರು. ಈ ಬಗ್ಗೆ ಸುಪ್ರಿಂ ಕೋರ್ಟಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಮೊರೆ ಹೋಗುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ನಂತರ ಬಗ್ಗೆ ಜನ ಜಾಗೃತಿ ಮೂಡಿಸುವಲ್ಲಿ ಸತತ ಪ್ರಯತ್ನದಲ್ಲಿದ್ದರು.

ಪಾರ್ಥಸಾರಥಿ

ಬಿಕೆಯವರ ಜೊತೆಗೆ ದಲಿತ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಪಾರ್ಥಣ್ಣ, ದಕ್ಷಿಣ ಭಾರತದ ಮಾತಂಗ ಪರಿವಾರದ ಸಾಹಿತ್ಯ, ಚಳವಳಿ, ಹೋರಾಟದ ಜೊತೆಗೆ ನಡೆಯುತ್ತಾ ಸಾಕಷ್ಟು ಶ್ರಮ ಹಾಕಿದ್ದರು. ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಇಡೀ ಭಾರತದ ಮಾತಂಗ ಪರಿವಾರವನ್ನು ಸಂಘಟಿಸುವ ಮಹದಾಸೆ ಹೊಂದಿದ್ದವರು. ಮಾತಂತ ಸಾಹಿತ್ಯ ಪರಿಷತ್ ರಚನೆಗೆ ಪ್ರಮುಖ ಪಾತ್ರವಹಿಸಿ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿದ್ದು ಮಾತಂಗ ಸಂಸ್ಕೃತಿಯ ನವ ಚೇತನಕ್ಕೆ ಪುಷ್ಟಿ ನೀಡಿದವರು. ಕ್ರಾಂತಿಕಾರಿ ಗದ್ದಾರ್, ಆಂಧ್ರದ ಮಂದ ಕೃಷ್ಣ ಮಾದಿಗ ಸೇರಿದಂತೆ ದಕ್ಷಿಣ ಭಾರತದ ಕ್ರಾಂತಿಕಾರಿ ಸಾಮಾಜಿಕ ಹೋರಾಟಗಾರರ ಒಡನಾಟ ಇಟ್ಟುಕೊಂಡು ಪ್ರವಾಸ ಮಾಡಿ, ದೊಡ್ಡ ಸಂಘಟನೆಯ ಕನಸು ಕಂಡವರು.

ಕ್ರಾಂತಿಕಾರಿ ಹಾಡುಗಾರಿಕೆ ಪರಿಚಯವಿದ್ದ ಅವರು ಸಮಾಜದ ಶೈಕ್ಷಣಿಕ, ಆರ್ಥಿಕ ಪ್ರಗತಿ ಬಗ್ಗೆ ಕನಸು ಕಾಣುತ್ತಿದ್ದವರು. ಹತ್ತು ಹದಿನೈದು ವರ್ಷಗಳಿಂದ ತಮ್ಮ ದೇಹ ತೂಕ ಹೆಚ್ಚಿ, ಆಯಾಸವಾಗುತ್ತಿದ್ದರೂ ಹೊಸ ತಲೆಮಾರಿನ ಜನರಿಗೆ ಹೋರಾಟದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು.

ಎನ್ ಜಿ ಒ ಸ್ಥಾಪಿಸಿ ನಾಡಿನಾದ್ಯಂತ ಸಾಮಾಜಿಕ ಸೇವಾಕಾರ್ಯದಲ್ಲಿ ತೊಡಗಿಕೊಂಡಿದ್ದರು. ಸಾಹಿತ್ಯ, ಸಂಘಟನೆ, ಶಿಕ್ಷಣ, ಉದ್ಯೋಗ, ಆರ್ಥಿಕ ಸಮಗ್ರ ಅಭಿವೃದ್ಧಿ ಬಗ್ಗೆ ಸದಾ ಚಿಂತಿಸುತ್ತಾ ಬರುವ ಒಳ್ಳೆಯ ದಿನಗಳ ಬಗ್ಗೆ ನಿರೀಕ್ಷೆಯಲ್ಲಿದ್ದರು. ಅವರು ಚಳುವಳಿ, ಹೋರಾಟ, ಸಙಘಟನೆಯ ದೊಡ್ಡ ಅನುಭವದ ಮೂಸೆ. ತಾನು, ತಮ್ಮವರು, ತಮ್ಮ ಮನೆಗಿಂಥ ಸಮಾಜದ ಬಗ್ಗೆಯೇ ಚಿಂತಿಸುತ್ತಿದ್ದ ಅವರಿಗೆ ಶಾಪವಾಗಿ ಕಾಡಿ, ಬಲಿ ಪಡೆದದ್ದು ಅವರ ಆರೋಗ್ಯದ ದುಸ್ಥಿತಿ.

ಒಳಗೆ ನೋವಿದ್ದರೂ ಸದಾ ಸಮಾಜದ ಸಂಘಟನೆ, ಬೆಳವಣಿಗೆ ಬಗ್ಗೆ ಚಿಂತಿಸುತ್ತಿದ್ದ ಸಮಾಜದ ಚೈತನ್ಯ ಪಾತ್ರ ಪಾರ್ಥಸಾರಥಿ ಇದೀಗ ಮರೆಯಾಗಿದ್ದು, ಸಮಾಜಕ್ಕೆ ಬಹು ದೊಡ್ಡ ನಷ್ಟ.

ಶಿಸ್ತು, ಸಮಯ ಪ್ರಜ್ಞೆ, ಸತತ ಶ್ರಮ, ಪ್ರಯತ್ನ, ಪ್ರಾಮಾಣಿಕತೆ ಜೊತೆಗೆ ಸಾಗುತ್ತಾ ಸಹಾಯ ಕೇಳಿ ಬಂದವರಿಗೆ ಕೈಲಾದ ಸಹಾಯ ಮಾಡುತ್ತಿದ್ದರು. ಅವರ ಹೋರಾಟದ ಜೀವನ ನಮ್ಮಂಥವರಿಗೆ ಮಾದರಿ. ‌ಕೇವಲ 59 ವರ್ಷದಲ್ಲೆ ನಮ್ಮನ್ನು ಅಗಲಿ, ಸಮಾಜವನ್ನು ದುಃಖ ಸಾಗರದಲ್ಲಿ ಮುಳುಗಿಸಿದ ಸಮಾಜದ ಹೋರಾಟದ ಜ್ಯೋತಿಯಾಗಿದ್ದ ಪಾರ್ಥಣ್ಣ, ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸುತ್ತಾ, ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.

ಬರಹ: ತಿಪಟೂರು ಕೃಷ್ಣ,
ಪತ್ರಕರ್ತರು, ತಿಪಟೂರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ತುಮಕೂರು ದಸರಾಕ್ಕೆ ತಾರಾ ಮೆರುಗು : 11 ದಿನ, ನೂರಾರು ಆಕರ್ಷಣೆ

ದೇವಿಯ ಆರಾಧನೆ, ತಾರೆಯರ ಕಲರವ, ಸಂಗೀತದ ರಸದೌತಣ, ನೃತ್ಯ ವೈಭವ, ಕ್ರೀಡಾ...