ತುಮಕೂರು | ಸಿದ್ದರಾಮಯ್ಯ ಸರ್ಕಾರ ಯಾರಿಗೂ ಮೋಸ ಮಾಡುವುದಿಲ್ಲ: ಗೃಹ ಸಚಿವ ಪರಮೇಶ್ವರ್

Date:

Advertisements

ಒಂದೇ ದಿನದಲ್ಲಿ ಎಲ್ಲವನ್ನೂ ಜಾರಿಗೆ ತರಲು ಸಾಧ್ಯವಿಲ್ಲ. 6ನೇ ವೇತನ ಆಯೋಗ ಜಾರಿಗೆ ತಂದಿದ್ದೂ ಕೂಡಾ ನಮ್ಮದೇ ಸರ್ಕಾರ. ಸಿದ್ದರಾಮಯ್ಯ ಸರ್ಕಾರ ಯಾರಿಗೂ ಮೋಸ ಮಾಡುವುದಿಲ್ಲ. ತಾಳ್ಮೆಯಿಂದ ಇರಿ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಮನವಿ ಮಾಡಿದರು.

ತುಮಕೂರು ನಗರದ ಏಂಪ್ರೆಸ್ ಕಾಲೇಜು ಸಭಾಂಗಣದಲ್ಲಿ ವಿಧಾನಪರಿಷತ್ ಸದಸ್ಯ ಡಿ ಟಿ ಶ್ರೀನಿವಾಸ್ ಅಭಿಮಾನಿ ಬಳಗದಿಂದ ಶಿಕ್ಷಕ ವರ್ಗ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

“ಸರ್ಕಾರದ ಮುಂದಿರುವ 7ನೇ ವೇತನ ಆಯೋಗ ಶಿಫಾರಸ್ಸು ಜಾರಿಗೆ ತರಲು ₹18 ಸಾವಿರ ಕೋಟಿ  ಬೇಕು. ಇದರ ಜತೆಗೆ ಒಪಿಎಸ್ ಜಾರಿಗೆ ತರುವುದಕ್ಕೂ ನೂರಾರು ಕೋಟಿ ರೂ ಹಣ ಬೇಕು. ಕಾಂಗ್ರೆಸ್ ಪಕ್ಷದ ಮೇಲೆ ನೀವಿಟ್ಟಿರುವ ನಂಬಿಕೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ” ಎಂಬ ಭರವಸೆ ನೀಡಿದರು.

Advertisements

“ಆರು ಕ್ಷೇತ್ರಗಳ ಶಿಕ್ಷಕರ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 72 ವರ್ಷಗಳಲ್ಲಿ ಮೊದಲ ಬಾರಿಗೆ ಆಗ್ನೆಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು ಅತ್ಯಂತ ಸಂತೋಷ ನೀಡಿದೆ. ಈ ಮೌನ ಕ್ರಾಂತಿಗೆ ಸಹಕಾರ ನೀಡಿದ ಶಿಕ್ಷಕರಿಗೆ ಹಾಗೂ ಅದಕ್ಕೆ ಬೆನ್ನೆಲುಬಾಗಿ ನಿಂತ ಡಿ ಟಿ ಶ್ರೀನಿವಾಸ ದಂಪತಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

“ಪೂ‌ರ್ಣಿಮ ಶ್ರೀನಿವಾಸ್‌ ಅವರ ತಂದೆ ಎ ಕೃಷ್ಣಪ್ಪ ಮತ್ತು ನಾನು ಒಂದೇ ಬಾರಿಗೆ ರಾಜಕಾರಣ ಪ್ರವೇಶಿಸಿದವರು. ಪೂರ್ಣಿಮ ನನಗೂ ಮಗಳಿದ್ದ ಹಾಗೆ. ಎ ಕೃಷ್ಣಪ್ಪ ಅವರ ಕುಟುಂಬದ ಪರವಾಗಿ ನಾನು ಆಗ್ನೇಯ ಶಿಕ್ಷಕರ ಕ್ಷೇತ್ರದ ಎಲ್ಲ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಿಕ್ಷಕರು ಬಹಳ ಅಚ್ಚುಕಟ್ಟಾಗಿ, ಯಾರಿಗೂ ಗೊತ್ತಾಗದ ಹಾಗೆ ಶಾಂತಿಯಿಂದ ರಾಜಕಾರಣ ಮಾಡಿದ್ದೀರಿ. ಇದು ಬಹಳ ದೊಡ್ಡ ಬದಲಾವಣೆ” ಎಂದರು.

“ತುಮಕೂರು ಜಿಲ್ಲೆಯಲ್ಲಿಯೇ 5300ಕ್ಕೂ ಹೆಚ್ಚು ಮತಗಳು ಡಿ ಟಿ ಶ್ರೀನಿವಾಸ ಅವರಿಗೆ ಬಂದಿವೆ. ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಇದರಿಂದ ಇಡೀ ವಿಶ್ವದ ಗಮನ ಸೆಳೆದಿದೆ. ಸ್ವಾತಂತ್ರ ಬಂದಾಗ ಶೇ.12ರಷ್ಟಿದ್ದ ಸಾಕ್ಷರರ ಸಂಖ್ಯೆ ಇಂದು 82ಕ್ಕೆ ಮುಟ್ಟಿದೆ. ಇದೊಂದು ದೊಡ್ಡ ಸಾಧನೆ. ಯಾರು ಏನೇ ಹೇಳಿಕೊಳ್ಳಲಿ, ಇದು ಕಾಂಗ್ರೆಸ್ ಪಕ್ಷದ ದೊಡ್ಡ ಕೊಡುಗೆ. ಜನರನ್ನು ಪ್ರಜ್ಞಾವಂತರನ್ನಾಗಿ ಮಾಡಿದೆ. ಪ್ರಶ್ನಿಸುವಂತಹ ಧೈರ್ಯವನ್ನು ತಂದುಕೊಟ್ಟಿದೆ. ಇದಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ತಂದಿರುವ ಹಲವಾರು ಬದಲಾವಣೆಗಳೇ ಕಾರಣ” ಎಂದರು.

ವಿಧಾನಪರಿಷತ್ ಸದಸ್ಯ ಡಿ ಟಿ ಶ್ರೀನಿವಾಸ್ ಮಾತನಾಡಿ, “ಅನುದಾನಿತ ಶಾಲೆಗಳ ಒಕ್ಕೂಟ ಹಾಗೂ ಎಲ್ಲ ಶಿಕ್ಷಕರು ನನ್ನ ಗೆಲುವಿಗೆ ಸಂಪೂರ್ಣ ಸಹಕಾರ ನೀಡಿದೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಬದಲಾವಣೆ ತರಬೇಕೆಂದು ಆಂತರ್ಯದಲ್ಲಿ ನಡೆದ ಕೆಲಸ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಸಹಕಾರಿಯಾಯಿತು. ನಮ್ಮದೇ ಸರ್ಕಾರವಿದೆ. ಇವರನ್ನು ಗೆಲ್ಲಿಸಿಕೊಂಡರೆ ಅನುಕೂಲವಾಗಲಿದೆ ಎಂಬ ನಿಮ್ಮ ವಿಶ್ವಾಸವನ್ನು ಹುಸಿಗೊಳಿ‌ಸುವುದಿಲ್ಲ” ಎಂದರು.

“ಓಟ್ ಫಾರ್ ಒಪಿಎಸ್ ಹೆಚ್ಚು ಸಹಕಾರ ನೀಡಿದೆ. ವೇತನ ತಾರತಮ್ಯ ನಿವಾರಣೆ, ಒಪಿಎಸ್ ಜಾರಿ, ಅನುದಾನಿತ ಶಾಲೆಗಳ ಸಿಬ್ಬಂದಿ ನೇಮಕ ಸೇರಿದಂತೆ ಮತ್ತಿತರರ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಒತ್ತಡ ನೀಡುವ ಸಂಬಂಧ ಕ್ರಮ ವಹಿಸುತ್ತೇನೆ” ಎಂದು ಭರವಸೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಚಳವಳಿಗಳಿಂದ ಮಾತ್ರ ಸರ್ಕಾರದ ಧೋರಣೆ ಬದಲಿಸಲು ಸಾಧ್ಯ: ಹಸಿರುಸೇನೆ ರಾಜ್ಯಾಧ್ಯಕ್ಷ ಬಸವರಾಜಪ್ಪ

ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಪೂರ್ಣೀಮ ಶ್ರೀನಿವಾಸ್, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಷಣ್ಮುಗಪ್ಪ, ಎನ್ ಗೋವಿಂದರಾಜು, ಡಾ.ರಫೀಕ್ ಅಹಮದ್, ಇಕ್ಬಾಲ್ ಅಹಮದ್, ಸುಲ್ತಾನ್‌ಮೊಹಮದ್, ಬಿಇಒ ಡಾ.ಸೂರ್ಯಕಲಾ, ಕೆ ಎಸ್ ಕಿರಣಕುಮಾರ್, ಚಿಕ್ಕಣ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X