ಬಿಹಾರದಲ್ಲಿ ಮತ್ತೆ 12 ಮಂದಿ ಸಿಡಿಲು ಬಡಿದು ಸಾವು ಕಂಡಿದ್ದು ಈ ವರ್ಷ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಬಿಹಾರದ ಏಳು ಜಿಲ್ಲೆಗಳಲ್ಲಿ ಸಿಡಿಲು ಬಡಿದು 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಬಿಹಾರದ ಏಳು ಜಿಲ್ಲೆಗಳಲ್ಲಿ ಈ 12 ಸಾವುಗಳು ವರದಿಯಾಗಿವೆ. ಜಮುಯಿ ಮತ್ತು ಕೈಮೂರ್ ಜಿಲ್ಲೆಗಳಿಂದ ತಲಾ ಮೂರು ಸಾವುಗಳು ವರದಿಯಾಗಿದ್ದರೆ, ರೋಹ್ಟಾಸ್‌ನಲ್ಲಿ ಎರಡು ಸಾವುಗಳು ಸಂಭವಿಸಿದೆ. ಇನ್ನು ಸಹರ್ಸಾ, ಸರನ್, ಭೋಜ್‌ಪುರ ಮತ್ತು ಗೋಪಾಲ್‌ಗಂಜ್‌ನಲ್ಲಿ ತಲಾ ಒಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರಿನ ಹಲವೆಡೆ ಭಾರೀ ಮಳೆ; ಹಾಸನದಲ್ಲಿ ಸಿಡಿಲು ಬಡಿದು ಮೂವರು ಸಾವು
12 ಸಾವು ಬಳಿಕ ಬಿಹಾರದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದವರ ಸಂಖ್ಯೆ ಈ ವರ್ಷ 40ಕ್ಕೆ ಏರಿದೆ. ಇನ್ನು ಶನಿವಾರ ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು 10 ಜನರು ಸಾವನ್ನಪ್ಪಿದ್ದರು. ನಳಂದ, ನಾವಡಾ, ವೈಶಾಲಿ, ಭಾಗಲ್ಪುರ್, ಸಹರ್ಸಾ, ರೋಹ್ತಾಸ್, ಸರನ್, ಜಮುಯಿ, ಭೋಜ್‌ಪುರ ಮತ್ತು ಗೋಪಾಲ್‌ಗಂಜ್ ಜಿಲ್ಲೆಗಳಲ್ಲಿ ಶನಿವಾರ ಸಾವು ಸಂಭವಿಸಿದೆ.
ಕಳೆದ ಐದು ದಿನಗಳಲ್ಲಿ ರಾಜ್ಯದಲ್ಲಿ ಸಿಡಿಲು ಬಡಿದು ಪ್ರತ್ಯೇಕ ಘಟನೆಗಳಲ್ಲಿ 25 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ದಾಖಲೆಗಳು ತೋರಿಸುತ್ತವೆ.
ಭಾರೀ ಮಳೆಯ ನಂತರ ಮಿಂಚಿನ ಸಮಯದಲ್ಲಿ ಜನರು ಮನೆಯೊಳಗೆ ಇರುವಂತೆ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಸಿಡಿಲು ಬಡಿದು ಸಾವನ್ನಪ್ಪಿದವರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
In the last 24 hours, 12 people have died due to lightning strikes in Bihar, ex-gratia of Rs 4 lakhs each to be given to families of the deceased persons: CMO pic.twitter.com/rDAhBaWtUf
— ANI (@ANI) July 8, 2024