ಸುಮಾರು 30 ಪ್ರಯಾಣಿಕರಿಂದ ಬಿಎಂಟಿಸಿ ಬಸ್ ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಬೆಂಗಳೂರು ನಗರದ ಎಂ.ಜಿ.ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಅನಿಲ್ ಕುಂಬ್ಳೆ ಜಂಕ್ಷನ್ ಬಳಿ ಈ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಬಿಎಂಟಿಸಿ ಬಸ್ ರೋಸ್ ಗಾರ್ಡನ್ನಿಂದ ಶಿವಾಜಿನಗರಕ್ಕೆ ಸಾಗುತ್ತಿದ್ದು ಎಂಜಿ ರಸ್ತೆಯ ಅನಿಲ್ ಕುಂಬ್ಳೆ ಸಿಗ್ನಲ್ನಲ್ಲಿ ಚಾಲಕ ಬಸ್ ಬಂದ್ ಮಾಡಿದ್ದರು.
ಇದನ್ನು ಓದಿದ್ದೀರಾ? ಬೆಂಗಳೂರು | ಬಿಎಂಟಿಸಿ ಬಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಕಾರು ಸುಟ್ಟು ಕರಕಲು
ಬಸ್ ಮತ್ತೆ ಸ್ಟಾರ್ಟ್ ಮಾಡಲು ಚಾಲಕ ಪ್ರಯತ್ನ ಮಾಡುತ್ತಿದ್ದಂತೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
A BMTC bus on MG Road, #Bengaluru caught fire this morning at around 8:50 am. Fire department officials extinguished the fire, and no casualties were reported. @THBengaluru @the_hindu pic.twitter.com/RexmBG63iz
— Darshan Devaiah B P (@DarshanDevaiahB) July 9, 2024
ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಮತ್ತು ನಿರ್ವಾಹಕ ಬಸ್‌ನಲ್ಲಿದ್ದ ಎಲ್ಲರನ್ನು ಕೆಳಗಿಳಿಸಿದ್ದಾರೆ.
ಅಧಿಕ ಸಂಚಾರದಟ್ಟಣೆ ಇರುವ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಈ ಬಿಎಂಟಿಸಿ ಬಸ್ ಅವಘಡದಿಂದಾಗಿ ಇನ್ನಷ್ಟು ಟ್ರಾಫಿಕ್ ಅಸ್ತವ್ಯಸ್ತವಾಗಿದೆ.