“ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಚಾಪು ಮೂಡಿಸಿದ್ದಾರೆ. ಮಹಿಳೆಯರು ಸಂಘಟನೆಗೆ ಸೇರಿವುದರಿಂದ ಸಮಾಜ ಇನ್ನೂ ಹೆಚ್ಚು ಜಾಗೃತರಾಗಲು ಕಾರಣವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಂಘಟನೆಯಲ್ಲಿ ತೊಡಗಿಸಬೇಕು. ಆಗ ಸಮಾಜ ಜಾಗೃತಿಯಾಗಲು ಸಾಧ್ಯ” ಎಂದು ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ ಹೇಳಿದರು.
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಡಿಎಸ್‌ಎಸ್ ಸಂಘಟನೆಯ ಜಿಲ್ಲಾ ಮಟ್ಟದ ಮಹಿಳಾ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
“ಮಹಿಳೆಯರಲ್ಲಿ ನಾಯಕತ್ವ ಗುಣ ಹಾಗೂ ಸಮಾಜದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಸಂಘಟಿತರಾಗಿ ತಮ್ಮ ಪ್ರಾಬಲ್ಯತೆ ತೋರಿಸಲು ಅವಕಾಶವಿದೆ. ಎಲ್ಲ ಪದಾಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಿ” ಎಂದು ಶುಭ ಕೋರಿದರು.
ಸಭೆಯ ಅಧ್ಯಕ್ಷತೆಯನ್ನು ಡಿಎಸ್‌ಎಸ್ ಜಿಲ್ಲಾ ಸಂಚಾಲಕರಾದ ಮಂಜಪ್ಪ ಮರೋಳ ವಹಿಸಿ ಮಾತನಾಡಿ, “ನಮ್ಮ ಸಂಘಟನೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸಂತೋಷಕರ” ಎಂದರು.
ಡಿಎಸ್‌ಎಸ್ ಮಹಿಳಾ ಘಟಕದ ಜಿಲ್ಲಾ ಸಂಚಾಲಕರಾಗಿ ಶ್ರೀಮತಿ ರೇಣುಕಾ ಹ ಬಡಕಣ್ಣನವರ, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಕಲ್ಪನಾ ಮೆಳಗೇರಿ ಹಾಗೂ ಕಲಾವಿದರ ಘಟಕದ ಜಿಲ್ಲಾ ಸಂಚಾಲಕರಾಗಿ ಬಸವರಾಜ ಕಾಳೆ, ಪದಾಧಿಕಾರಿಗಳಾಗಿ ಗೀತಾ ದೊಡ್ಡಮನಿ, ಮಾಯವ್ವ ದೊಡ್ಡಮನಿ, ಯಲ್ಲಮ್ಮ ಕೆ, ಲಲಿತಾ ಖಾಜಿ, ಗೀತಾ ಮಾದರ, ಸುಮಂಗಲಾ ಹರಿಜನ, ಲಲಿತಾ ಬಡಕಣ್ಣನವರ, ರೇಣುಕಾ ವಾಲ್ಮೀಕಿ, ರೇಣುಕಾ ದೊಡ್ಡಮನಿ, ಪ್ರೇಮವ್ವ ಹರಿಜನ, ಗೀತಾ ಹರಿಜನ, ಪಾರು ಲಮಾಣಿ, ರತ್ನವ್ವ ದೊಡ್ಡಮನಿ, ಮಾಳವ್ವ ಹರಿಜನ ಇನ್ನಿತರರನ್ನು ಆಯ್ಕೆ ಮಾಡಲಾಯಿತು.
ಇದನ್ನು ಓದಿದ್ದೀರಾ? ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರೇ ಇಲ್ಲ!
ಇದೇ ವೇಳೆ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ನೀಡಿ, ಸನ್ಮಾನಿಸಿ ಗೌರವಿಸಿಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ವೈ ಎನ್ ಮಾಸೂರ, ಮಾರುತಿ ಕಿಳಿಕ್ಯಾತರ, ಜಗದೀಶ ಹರಿಜನ ಹನಮಂತಪ್ಪ ಹೌಂಶಿ, ದುರಗಪ್ಪ ಹುಲ್ಲತ್ತಿ, ಹನಮಂತಪ್ಪ ಸಿಡಿ, ಮಂಜುನಾಥ ಡಿ, ಭರಮಪ್ಪ ಗೀವಿನಾಳ, ಮಲ್ಲೇಶ ಹರಿಜನ, ಬಸವಣ್ಣೆಪ್ಪ ಹಳ್ಳಿ, ಶಂಭುಲಿಂಗಪ್ಪ ಡಿವಿಟರ, ಮಲ್ಲಾರೆಪ್ಪ ದೊಡ್ಮನಿ ಮತ್ತಿತರರು ಉಪಸ್ಥಿತರಿದ್ದರು.
