ಎಲ್ಲ ಅಧಿಕೃತ ದಾಖಲೆಗಳಲ್ಲಿ ತನ್ನ ಹೆಸರು ಮತ್ತು ಲಿಂಗವನ್ನು ಬದಲಾಯಿಸಲು ಹಿರಿಯ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿ ಸಲ್ಲಿಸಿದ್ದ ಮನವಿಯನ್ನು ಹಣಕಾಸು ಸಚಿವಾಲಯವು ಅನುಮತಿಸಿದೆ. ಇಂತಹದೊಂದು ಬೆಳವಣಿಗೆ ಭಾರತೀಯ ನಾಗರಿಕ ಸೇವೆಗಳಲ್ಲಿ ಮೊದಲ ಬಾರಿಗೆ ಸಂಭವಿಸಿದ್ದು, ಇದೊಂದು ಐತಿಹಾಸಿಕ ನಿರ್ಧಾರ ಎಂದು ಹೇಳಲಾಗಿದೆ.
ಹೈದರಾಬಾದ್‌ನ ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (CESTAT) ಪ್ರಾದೇಶಿಕ ಪೀಠದ ಜಂಟಿ ಆಯುಕ್ತರಾಗಿರುವ ಮಹಿಳಾ ಐಆರ್‌ಎಸ್ ಅಧಿಕಾರಿ ಎಂ ಅನುಸೂಯಾ ಅವರು ಲಿಂಗ ಪರಿವರ್ತನೆ ಮಾಡಿಸಿಕೊಂಡು ತಮ್ಮ ಹೆಸರನ್ನು ಎಂ ಅನುಕಾಂತಿರ್ ಸೂರ್ಯ ಎಂದು ಬದಲಿಸಿಕೊಂಡಿದ್ದಾರೆ.
ಸರ್ಕಾರವು ಅವರ ದಾಖಲೆಗಳಲ್ಲಿ ಅವರ ಹೆಸರು ಮತ್ತು ಲಿಂಗವನ್ನು ತಿದ್ದುಪಡಿ ಮಾಡಿಕೊಂಡಿದೆ. ಇದೀಗ, ಅವರು ಪುರಷ ನಾಗರಿಕ ಸೇವಾ ಅಧಿಕಾರಿಯಾಗಿದ್ದಾರೆ. ಭಾರತದ ನಾಗರಿಕ ಸೇವೆಗಳ ಇತಿಹಾಸದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡ ಮೊದಲ ಅಧಿಕಾರಿ ಎನಿಸಿಕೊಂಡಿದ್ದಾರೆ.
“2013ನೇ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಎಂ ಅನುಸೂಯ ಅವರು ಪ್ರಸ್ತುತ ಹೈದರಾಬಾದ್‌ನ ಸಿಇಎಸ್‌ಟಿಎಟಿಯಲ್ಲಿ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಪುರುಷನಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದು, ಅವರ ಹೆಸರನ್ನು ಎಂ ಅನುಕಾಂತಿರ್ ಸೂರ್ಯ ಎಂದು ಬದಲಿಸಿಕೊಂಡಿದ್ದಾರೆ” ಎಂದು ಕೇಂದ್ರ ಹಣಕಾಸು ಸಚಿವಾಲಯವು ತನ್ನ ಆದೇಶದಲ್ಲಿ ಹೇಳಿದೆ.
In a first for Indian civil services, an #IRS officer, posted as joint commissioner at #Hyderabad, has been granted permission by ministry of finance, to change both name & gender, from Ms M.Anusuya to Mr M. Anukathir Surya, and this will be the reference in all official records pic.twitter.com/bvDLHNAuJs
— Uma Sudhir (@umasudhir) July 10, 2024
“ಅನುಸೂಯ ಅವರ ಮನವಿಯನ್ನು ಪುರಸ್ಕರಿಸಲಾಗಿದೆ. ಇನ್ನು ಮುಂದೆ ಎಲ್ಲ ದಾಖಲೆಗಳಲ್ಲಿ ಅವರ ಹೆಸರನ್ನು ಎಂ ಅನುಕಾಂತಿರ್ ಸೂರ್ಯ ಎಂದು ಬದಲಿಸಲಾಗುತ್ತಿದೆ” ಎಂದು ಸಿಇಎಸ್‌ಟಿಎಟಿ ತಿಳಿಸಿದೆ.