ಕಳೆದ ತಿಂಗಳು ನಡೆದ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ ಬಳಿಕ ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಹೆಚ್ಚುವರಿ 2.5 ಕೋಟಿ ರೂಪಾಯಿ ಬೋನಸ್ ನೀಡುವ ನಿರ್ಧಾರ ಮಾಡಿದೆ. ಆದರೆ, ಈ ಹೆಚ್ಚುವರಿ ಬೋನಸ್ಅನ್ನು ರಾಹುಲ್ ದ್ರಾವಿಡ್ ಬೇಡ ಎಂದಿದ್ದಾರೆ. ಈ ಮೂಲಕ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಒಟ್ಟು 125 ಕೋಟಿ ರೂಪಾಯಿಗಳ ಬೋನಸ್ಅನ್ನು ಇಡೀ ತಂಡಕ್ಕೆ ವಿತರಿಸಬೇಕಾಗಿತ್ತು. ದ್ರಾವಿಡ್ ಅವರಿಗೆ 5 ಕೋಟಿ ರೂಪಾಯಿ ಮತ್ತು ಇತರ ಕೋಚಿಂಗ್ ಸಿಬ್ಬಂದಿಗೆ ತಲಾ 2.5 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿತ್ತು. ಆದರೆ, ದ್ರಾವಿಡ್ ತನ್ನ ಸಹೋದ್ಯೋಗಿಗಳಿಗೆ ಸಿಗುವಷ್ಟೆ ಬೋನಸ್‌ಅನ್ನು ಮಾತ್ರವೇ ಪಡೆದಿದ್ದಾರೆ. ಇನ್ನುಳಿದ ಹೆಚ್ಚುವರಿ 2.5 ಕೋಟಿ ರೂಪಾಯಿಯನ್ನು ಪಡೆಯಲು ನಿರಾಕರಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಹುಲ್ ದ್ರಾವಿಡ್‌ಗೆ ‘ಭಾರತ ರತ್ನ’ ನೀಡುವಂತೆ ಸರ್ಕಾರಕ್ಕೆ ಒತ್ತಾಯ
ರಾಹುಲ್ ಅವರ ಸಹಾಯಕ ಸಿಬ್ಬಂದಿಗಳಾದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರಿಗೆ 2.5 ಕೋಟಿ ರೂ. ಬೋನಸ್ ಮೊತ್ತ ನೀಡಲಾಗಿದೆ. ಅಷ್ಟೇ ಮೊತ್ತದ ಬೋನಸ್‌ಅನ್ನು ಮಾತ್ರವೇ ರಾಹುಲ್ ಕೂಡ ಪಡೆದಿದ್ದಾರೆ.
ರಾಹುಲ್ ದ್ರಾವಿಡ್ ಅವರು ಬಹುಮಾನ ಮೊತ್ತವನ್ನು ತ್ಯಜಿಸುವ ನಿರ್ಧಾರ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ, 2018ರಲ್ಲಿ ಭಾರತದ ಯು-19 ವಿಶ್ವಕಪ್ ವಿಜೇತ ತಂಡದ ತರಬೇತುದಾರರಾಗಿದ್ದಾಗಲೂ ಇದೇ ರೀತಿ ನಿರ್ಧಾರ ಮಾಡಿದ್ದರು.
ಯು-19 ವಿಶ್ವಕಪ್ ಗೆದ್ದಾಗ ರಾಹುಲ್ ಅವರಿಗೆ 50 ಲಕ್ಷ ರೂಪಾಯಿ ನೀಡಲು ಮತ್ತು ಉಳಿದ ಸಹಾಯಕ ಸಿಬ್ಬಂದಿಗೆ ತಲಾ 20 ಲಕ್ಷ ರೂಪಾಯಿಗಳನ್ನು ನೀಡಲು ಬಿಸಿಸಿಐ ನಿರ್ಧರಿಸಿತ್ತು. ಆದರೆ, ರಾಹುಲ್ ದ್ರಾವಿಡ್ ಪ್ರಶಸ್ತಿಗಳನ್ನು ಪರಿಷ್ಕರಿಸಲು ಬಿಸಿಸಿಐಗೆ ಒತ್ತಡ ಹೇರಿ, ತಾನು ಸೇರಿದಂತೆ ಎಲ್ಲ ಸಹಾಯಕ ಸಿಬ್ಬಂದಿಗಳಿಗೆ 25 ಲಕ್ಷ ರೂ. ದೊರಕುವಂತೆ ಮಾಡಿದ್ದರು.
No amount of respect will ever equal what Rahul Dravid deserves. True legend. 🙏🏽 pic.twitter.com/X7zMQhrkqr
— Shiv Aroor (@ShivAroor) July 10, 2024