ಮೃತ ಎಂಜಿನಿಯರ್ ಸಹಿ ನಿರಂತರ ದುರ್ಬಳಕೆಯಾಗುತ್ತಿದ್ದು, ಸರ್ಕಾರದ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಖಂಡಿಸಿ ತುಮಕೂರು ಜಿಲ್ಲೆಯ ಸಿರಾ ನಗರಸಭೆಯ ಸರ್ವ ಸದಸ್ಯರು ಸಾಮಾನ್ಯ ಸಭೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಜಿಲ್ಲೆಯ ಸಿರಾ ನಗರಸಭೆಯ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಆಗ್ರಹ ಕೇಳಿಬಂದಿದ್ದು, “ಮೃತ ಎಂಜಿನಿಯರ್ ಸೇತುರಾಂ ಸಿಂಗ್ ಮೃತಪಟ್ಟು ಒಂದು ವರ್ಷ ಕಳೆದಿದೆ. ಆದರೆ, ಸೇತುರಾಂ ಸಿಂಗ್ ಹೆಸರಲ್ಲಿ ಹಳೆಯ ಕಡತಗಳಿಗೆ ನಕಲಿ ಸಹಿ ಹಾಕಿ ಅನುದಾನ ದುರ್ಬಳಕೆ ಮಾಡಲಾಗಿದೆ. ಕೂಡಲೇ ದುರ್ಬಳಕೆಯನ್ನು ತಡೆಗಟ್ಟಬೇಕು” ಎಂದು ಆಗ್ರಹಿಸಿ ಮೃತ ಎಂಜಿನಿಯರ್ ಪತ್ನಿ ನಗರಸಭೆಗೆ ದೂರು ನೀಡಿದ್ದಾರೆ.
ನಗರಸಭೆ ಸದಸ್ಯರುಗಳಾದ ಅಜಯ್ ಕುಮಾರ್, ಲಕ್ಷ್ಮಿಕಾಂತ್, ಕೃಷ್ಣಪ್ಪ ಸೇರಿದಂತೆ ಹಲವು ಸದಸ್ಯರ ದೂರನ್ನು ಆಧಾರಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ, ಎಂಎಲ್‌ಸಿ ಚಿದಾನಂದ್ ಸಮ್ಮುಖದಲ್ಲೇ ಆರೋಪ ಕೇಳಿಬಂದಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ವೈದ್ಯಕೀಯ ಕಾಲೇಜುಗಳಿಗೆ ದಂಡ; ಎನ್ಎಂಸಿಯ ಏಕಪಕ್ಷೀಯ ನಡೆಗೆ ಎಐಡಿಎಸ್‌ಒ ಕಂಡನೆ
ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಕೋಡಬೇಕೆಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಒತ್ತಾಯಿಸಿದ್ದಾರೆ.
ಸಿರಾ ನಗರಸಭೆ ಅಧ್ಯಕ್ಷೆ ಪೂಜಾ ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ.