ಬಿಎಂಡಬ್ಲ್ಯು ಕಾರಿನ ಮೂಲಕ 45 ವರ್ಷದ ಮಹಿಳೆಯೊಬ್ಬರ ಸಾವಿಗೆ ಕಾರಣನಾಗಿದ್ದ ಮುಂಬೈ ಹಿಟ್ ಆ್ಯಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ ಜುಲೈ 7 ರಂದು ಅಪಘಾತ ನಡೆಸಿದ ನಂತರ ತನ್ನ ಗೆಳತಿಗೆ 40 ಬಾರಿ ಕರೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪಘಾತ ನಡೆಸಿದ ನಂತರ ಬಂಧನವಾಗುವುದಕ್ಕೂ ಮುನ್ನ ಮಿಹಿರ್ ಶಾ ಮಹಾರಾಷ್ಟ್ರದ ಹಲವು ಕಡೆ ಸಂಚರಿಸಿ ರೆಸಾರ್ಟ್‌ಗಳಲ್ಲಿ ಅಡಗಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಗ್ಗೆ ತಿಳಿದ ನಂತರ ಮಿಹಿರ್ ಶಾ ಗೆಳತಿ ಆರೋಪಿಯ ಸಹೋದರಿಗೆ ಕರೆ ಮಾಡಿದ್ದಾರೆ. ನಂತರ ಮಿಹಿರ್‌ನನ್ನು ಸಹೋದರಿ ಗೊರೆಗಾವ್‌ನಿಂದ ಬೊರಿವಾಲಿಯ ಮನೆಗೆ ಕರೆದೊಯ್ದಿದ್ದಾರೆ.
ಮನೆಗೆ ಬಂದ ನಂತರ ಮಿಹಿರ್ ಶಾ ತನ್ನ ಸ್ನೇಹಿತನೊಂದಿಗೆ ಥಾಣೆಯ ರೆಸಾರ್ಟ್‌ಗೆ ತೆರಳಿದ. ಕೆಲವು ಗಂಟೆಗಳ ನಂತರ ಮುರ್ಬಾದ್‌ನ ಮತ್ತೊಂದು ರೆಸಾರ್ಟ್‌ಗೆ ಹೋಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಣ ಅಕ್ರಮ ವರ್ಗಾವಣೆ ಕರಾಳ ಕಾಯಿದೆ; ಮೇಲ್ಮನವಿಗಳ ವಿಲೇವಾರಿ ಮಾಡಲಿ ಸುಪ್ರೀಮ್ ಕೋರ್ಟ್
ಒಂದು ದಿನದ ನಂತರ ಆರೋಪಿ ಮತ್ತು ಆತನ ಸ್ನೇಹಿತ ಶಹಾಪುರ್‌ನ ಬೇರೊಂದು ರೆಸಾರ್ಟ್‌ಗೆ ತೆರಳಿದರು. ಅಂತಿಮವಾಗಿ 72 ಗಂಟೆಯ ನಂತರ ಮಿಹಿರ್ ಶಾನನ್ನು ಬಂಧಿಸಲಾಯಿತು. ಬಂಧನಕ್ಕೂ 15 ನಿಮಿಷ ಮುನ್ನ ಆರೋಪಿಯ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನ ವಾರ್ಲೆ ಪ್ರದೇಶದಲ್ಲಿ ಜುಲೈ 7ರಂದು ಮೀನು ಮಾರಾಟಗಾರರಾದ ದಂಪತಿ ಪ್ರದೀಪ್ ನಖ್ವಾ ಹಾಗೂ ಕಾವೇರಿ ನಖ್ವಾ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ವೇಗವಾಗಿ ಬಂದ ಮಿಹಿರ್ ಶಾ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದಿದೆ. ಸ್ಕೂಟರ್‌ನಿಂದ ಪ್ರದೀಪ್ ನಕ್ವಾ ಅವರು ಕೆಳಗೆ ಬಿದ್ದ ನಂತರ ಕಾವೇರಿ ನಖ್ವಾ ಅವರು ಕಾರಿನಡಿ ಸಿಲುಕಿದ್ದಾರೆ. ಕಾವೇರಿ ಅವರನ್ನು 100 ಮೀಟರ್‌ವರೆಗೂ ಕಾರು ಎಳೆದೊಯ್ದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಬಿಎಂಡಬ್ಲ್ಯು ಕಾರು ಆರೋಪಿ ತಂದೆ ಏಕ್‌ನಾಥ್ ಶಿಂಧೆ ಬಣದ ನಾಯಕ ರಾಜೇಶ್ ಶಾ ಹೆಸರಿನಲ್ಲಿ ನೋಂದಣಿಯಾಗಿದ್ದು, ಪೊಲೀಸರು ಮೊದಲು ರಾಜೇಶ್ ಶಾ ಹಾಗೂ ಚಾಲಕನನ್ನು ಬಂಧಿಸಿದ್ದರು.