ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿಗಳಲ್ಲಿ ಒಂದು ಅನ್ನಭಾಗ್ಯ ಯೋಜನೆ. ಈ ಯೋಜನೆಯಡಿ ಬಿಪಿಎಲ್ ಪಡಿತರದಾರರಿಗೆ ಮಾಸಿಕ ತಲಾ 10 ಕೆ.ಜಿ ಅಕ್ಕಿ ಕೊಡುತ್ತೇವೆಂದು ಕೇಳಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರ ನೆರವು ನೀಡಲಿಲ್ಲ. ಹೀಗಾಗಿ, 5 ಕೆ.ಜಿ ಅಕ್ಕಿ ಮಾತ್ರ ನೀಡಲು ಶಕ್ತವಾಗಿದ್ದ ಕಾಂಗ್ರೆಸ್ ಸರ್ಕಾರ, ಉಳಿದ 5 ಕೆ.ಜಿ ಅಕ್ಕಿ ಬದಲಿಗೆ, 170 ರೂ. ಹಣ ನೀಡುವುದಾಗಿ ಘೋಷಿಸಿತ್ತು. ಅಕ್ಕಿ ಬದಲಿಗೆ ಹಣ ನೀಡುವ ಕ್ರಮ ಜಾರಿಯಾಗಿ ಈ ತಿಂಗಳಿಗೆ (ಜುಲೈ) ಒಂದು ವರ್ಷ ಪೂರೈಸಿದೆ ಈಗಲೂ ಸರ್ಕಾರ ಹಣವನ್ನೇ ಫಲಾನುಭವಿಗಳ ಕುಟುಂಬಕ್ಕೆ ನೀಡುತ್ತಿದೆ. ಲೋಕಸಭಾ ಚುನಾವಣೆ ನಡೆದು, ಮುಗಿದು, ಬಿಜೆಪಿ ಸೋತು ಮೈತ್ರಿಯಲ್ಲಿ ಎನ್ಡಿಎ ಸರ್ಕಾರ ರಚಿಸಿದರೂ, ಈಗಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿಯ ನೆರವು ನೀಡುತ್ತಿಲ್ಲ.