ಶೂ ಧರಿಸಿದ್ದಾನೆ ಎಂಬ ಕಾರಣಕ್ಕೆ ಪ್ಲಸ್1 (ಪ್ರಥಮ ಪಿಯುಸಿ) ವಿದ್ಯಾರ್ಥಿಯೋರ್ವನನ್ನು ಪ್ಲಸ್2 (ದ್ವಿತೀಯ ಪಿಯುಸಿ) ವಿದ್ಯಾರ್ಥಿಗಳು ಅತಿ ಕ್ರೂರವಾಗಿ ರ್‍ಯಾಗಿಂಗ್ ನಡೆಸಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಚಿತ್ತಾರಿಯಲ್ಲಿ ನಡೆದಿದೆ.
ಚಿತ್ತಾರಿ ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಪಳ್ಳಿಕೆರೆಯ ಬಿಲಾಲ್ ನಗರದ ಹುಡುಗ ರ್‍ಯಾಗಿಂಗ್‌ಗೆ ಒಳಗಾದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಶೂ ಧರಿಸಿ ಕಾಲೇಜಿಗೆ ಬಂದ ವಿಚಾರವಾಗಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಯನ್ನು ರ್‍ಯಾಗಿಂಗ್ ಮಾಡಿದ್ದಾರೆ. ಬಳಿಕ ಕಾಲೇಜಿನ ಸಮೀಪದ ಬಸ್‌ಸ್ಟಾಂಡ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಆತನ ಬಳಿ ಹಾಡು ಹಾಡಲು ಹೇಳಿದ್ದಾರೆ. ಇದಕ್ಕೆ ಅಸಮ್ಮತಿಸಿದಾಗ ಹಿರಿಯ ವಿದ್ಯಾರ್ಥಿಗಳು ಗುಂಪು ಕಟ್ಟಿ ಗಂಭೀರ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಶೂ ಧರಿಸಿದ್ದಾನೆ ಎಂಬ ಕಾರಣಕ್ಕೆ ಪ್ರಥಮ ಪಿಯುಸಿ ವಿದ್ಯಾರ್ಥಿಯೋರ್ವನನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಲ್ಲೆಗೈದು, ರ್‍ಯಾಗಿಂಗ್ ನಡೆಸಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಚಿತ್ತಾರಿಯಲ್ಲಿ ನಡೆದಿದೆ. ಚಿತ್ತಾರಿ ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿ ಬಿಲಾಲ್ ಆಸ್ಪತ್ರೆಗೆ ದಾಖಲಾಗಿದ್ದಾನೆ. pic.twitter.com/9NMswQ42tJ
— eedina.com ಈ ದಿನ.ಕಾಮ್ (@eedinanews) July 12, 2024
ಹಲ್ಲೆಯಿಂದಾಗಿ ವಿದ್ಯಾರ್ಥಿಯ ಕಿವಿ ಮತ್ತು ಕಣ್ಣಿಗೆ ಹಾನಿಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ವೈರಲಾಗಿರುವ ವಿಡಿಯೋದಲ್ಲಿ ಹಿರಿಯ ವಿದ್ಯಾರ್ಥಿಗಳ ಗುಂಪು ಹುಡುಗನ ಮುಖದ ಮೇಲೆ ಹೊಡೆಯುವುದು, ಅವನ ಕೂದಲನ್ನು ಹಿಡಿದೆಳೆಯುವುದು, ಬೆನ್ನಿಗೆ ಗುದ್ದಿರುವುದು ದಾಖಲಾಗಿದೆ.
ವಿಡಿಯೋ ವೈರಲ್ ಆದ ನಂತರ ಹಲ್ಲೆಗೊಳಗಾದ ವಿದ್ಯಾರ್ಥಿಯ ಪೋಷಕರು ಹೊಸದುರ್ಗ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪೊಲೀಸರು ನೂತನ ಭಾರತೀಯ ನ್ಯಾಯ ಸಂಹಿತೆಯಡಿಯಲ್ಲಿ ಹಲ್ಲೆ ನಡೆಸಿದವರ ವಿರುದ್ಧ ಕಾನೂನುಬಾಹಿರ ಸಭೆ (ಸೆಕ್ಷನ್ 189 (2)], ಗಲಭೆ(ಸೆಕ್ಷನ್ 191 (2)), ತಪ್ಪಾದ ನಿರ್ಬಂಧ (ಸೆಕ್ಷನ್ 126 (2), ಗಾಯವಾಗುವಂತೆ ಹಲ್ಲೆ(ಸೆಕ್ಷನ್ 115 (2), ಸೆಕ್ಷನ್ 190 (ಸಾಮಾನ್ಯ ಉದ್ದೇಶದಿಂದ ಕಾನೂನುಬಾಹಿರ ಸಭೆ) ಎಫ್‌ಐಆರ್ ದಾಖಲಿಸಿಕೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ದಾಖಲಾಗಿರುವ ಎಫ್‌ಐಆರ್‌ನಲ್ಲಿ 12ನೇ ತರಗತಿಯ ಐವರನ್ನು ಪೊಲೀಸರು ಹೆಸರಿಸಲಾಗಿದೆ ಎಂದು ಹೊಸದುರ್ಗ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
12 ನೇ ತರಗತಿಯ ವಿದ್ಯಾರ್ಥಿಗಳು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮತ್ತು ತಪ್ಪಿತಸ್ಥರು ಎಂದು ಸಾಬೀತಾದರೆ, ಅವರು ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Adastu Bega Arrest Madi, Inmunde E tara Yaru Nadedukollabardu, Hage Pata Kalisi