ಮಧ್ಯಾಹ್ನ ಬಿಸಿಯೂಟಕ್ಕೆ ಅಡುಗೆ ಸಿದ್ದ ಮಾಡುವ ಸಮಯದಲ್ಲಿ ಕುಕ್ಕರ್ ಬ್ಲಾಸ್ಟ್ ಆದ ಘಟನೆ ತುಮಕೂರು ಜಿಲ್ಲೆಯ ಅಂಗನವಾಡಿ ಕೇಂದ್ರವೊಂದರಲ್ಲಿ ನಡೆದಿದೆ.
ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿ ಸಿ.ಯಡವನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಘಟನೆಯ ವೇಳೆ ಅಂಗನವಾಡಿಯಲ್ಲಿದ್ದ ಮಕ್ಕಳಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಬೇಳೆ ತರಕಾರಿ ಇದ್ದ ಕುಕ್ಕರ್ ಗ್ಯಾಸ್ಗೆಟ್ ರಬ್ಬರ್ ಸರಿ ಇಲ್ಲದ ಕಾರಣ ಸ್ಟೌವ್ ಮೇಲೆಯೇ ಬ್ಲಾಸ್ಟ್ ಆಗಿ ಪಟಾಕಿ ಶಬ್ದದ ರೀತಿಯಲ್ಲಿ ಸ್ಫೋಟದ ಶಬ್ದ ಕೇಳಿ ಬಂದಿದೆ. ಆದರೆ ಕುಕ್ಕರ್ ಮುಚ್ಚಳ ಓಪನ್ ಆಗಿದ್ದರಿಂದ ಕುಕ್ಕರ್ ಅಲ್ಲಿದ್ದ ಬೇಳೆ ಅಡುಗೆ ಮನೆಯಲ್ಲಿ ಹರಡಿತ್ತು. ಆ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಯಾವ ನೋವು ಸಂಭವಿಸಿಲ್ಲ. ಯಾವ ಹಾನಿಯೂ ಕೂಡಾ ನಡೆದಿಲ್ಲ. ಅಲ್ಲಿದ್ದ 11 ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಉಪ ತಹಶೀಲ್ದಾರ್ ಮುತ್ತುರಾಜ್ ತಿಳಿಸಿದರು.
ಸ್ಥಳಕ್ಕೆ ಧಾವಿಸಿದ ಸಿಡಿಪಿಓ ಮಹೇಶ್, ಎಸಿಡಿಪಿಓ ಕೃಷ್ಣಮೂರ್ತಿ, ಮೇಲ್ವಿಚಾರಕಿ ಸ್ವರ್ಣ ಹಾಗೂ ಕಂದಾಯ ನಿರೀಕ್ಷಕ ರಂಗಸ್ವಾಮಿ, ಗ್ರಾಮ ಲೆಕ್ಕಿಗರಾದ ಸುಮಾ ಇತರರು ಸ್ಥಳ ಪರಿಶೀಲಿಸಿದರು.
