ಯುವಕರಿಬ್ಬರು ಬೈಕ್‌ನಲ್ಲಿ ಸವಾರಿ ಮಾಡುವಾಗ ‘ರೀಲ್ಸ್’ ಚಿತ್ರೀಕರಿಸಲು ಮುಂದಾಗಿದ್ದು, ಅಪಘಾತಕ್ಕೀಡಾಗಿದ್ದಾರೆ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೊಲೀಸರು, ವಾಹನ ಸವಾರಿ ವೇಳೆ ‘ಕಣ್ಣು ರಸ್ತೆಯ ಮೇಲಿರಲಿ’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ, ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಯುವಕ ರೀಲ್ಸ್‌ಗಾಗಿ ವಿಡಿಯೋ ಸೆರೆಹಿಡಿಯಲು ಅರಂಭಿಸಿದ್ದಾನೆ. ಬೈಕ್ ಚಲಾಯಿಸುತ್ತಿದ್ದ ಸವಾರ ಕೂಡ ಆತನ ವಿಡಿಯೋಗೆ ಮುಖ ತೋರಿಸಲು ಮುಂದಾಗಿದ್ದು, ಬೈಕ್ ಅಪಘಾತಕ್ಕೀಡಾಗಿದೆ. ಕ್ರ್ಯಾಶ್ ಆಗುವ ಖಾಲಿ ಪರದೆಯೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.
ಈ ವಿಡಿಯೋವನ್ನು ಉತ್ತರ ಪ್ರದೇಶ ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಲು ಬಳಸಿಕೊಂಡಿದ್ದಾರೆ. ಎಲ್ಲ ಸವಾರರು ಮತ್ತು ಚಾಲಕರು ತಮ್ಮ ಫೋನ್‌ಗಳನ್ನು ಬಳಸುವುದನ್ನು ಅಥವಾ ರಸ್ತೆಯಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
”ಕಣ್ಣುಗಳು ರಸ್ತೆಯ ಮೇಲಿರಲಿ. ಲೈಕ್ಸ್‌ಗಳ ಮೇಲೆ ಅಲ್ಲ. ಒಂದು ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಬಹುದು. ಆದರೆ, ಲಕ್ಷಾಂತರ ಮೌಲ್ಯದ ಜೀವನವನ್ನು ಬದಲಿಸಲು ಸಾಧ್ಯವಿಲ್ಲ” ಎಂದು ಪೊಲೀಸರು ಹೇಳಿದ್ದಾರೆ.