ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಮೇಲೆ ದಾಳಿ ನಡೆಯುತ್ತಿದ್ದಂತೆ ಎಕ್ಸ್ ಪೋಸ್ಟ್ ಮಾಡಿರುವ ಮೋದಿಗೆ ಮಣಿಪುರ ವಿಚಾರದ ಬಗ್ಗೆ ಮಾತನಾಡಲು ಒಂದು ವರ್ಷಗೂ ಅಧಿಕ ಸಮಯ ಬೇಕಾಯಿತೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಟ್ರಂಪ್ ಹತ್ಯೆ ಪ್ರಯತ್ನ ನಡೆದ ಬಳಿಕ ಎಕ್ಸ್ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ನನ್ನ ಸ್ನೇಹಿತ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ದಾಳಿಯಿಂದ ತೀವ್ರ ಕಳವಳಗೊಂಡಿದ್ದೇನೆ. ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
Deeply concerned by the attack on my friend, former President Donald Trump. Strongly condemn the incident. Violence has no place in politics and democracies. Wish him speedy recovery.
Our thoughts and prayers are with the family of the deceased, those injured and the American…
— Narendra Modi (@narendramodi) July 14, 2024
ಹಾಗೆಯೇ, “ಮೃತರ ಕುಟುಂಬ, ಗಾಯಗೊಂಡವರು ಮತ್ತು ಅಮೆರಿಕದ ಜನರಿಗಾಗಿ ನಮ್ಮ ಪ್ರಾರ್ಥನೆ” ಎಂದೂ ಕೂಡಾ ಪ್ರಧಾನಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣಾ ಪ್ರಚಾರದ ವೇಳೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಕಿವಿಗೆ ಗಾಯ
ಪ್ರಧಾನಿ ಅಮೆರಿಕದ ಮಾಜಿ ಅಧ್ಯಕ್ಷರ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಕ್ಕೆ ಧನ್ಯವಾದ ತಿಳಿಸಿರುವ ನೆಟ್ಟಿಗರು ಮಣಿಪುರ ಮತ್ತು ದೇಶದ ಹಲವಾರು ವಿಚಾರಗಳ ಬಗ್ಗೆ ಧನಿ ಎತ್ತದ ಪ್ರಧಾನಿ ಮೋದಿಗೆ ಪಾಠ ಮಾಡಿದ್ದಾರೆ.
“ಮಣಿಪುರ ಒಂದು ವರ್ಷದಿಂದ ಹೊತ್ತಿ ಉರಿಯುತ್ತಿದೆ. ದೇಶದ ಪ್ರಧಾನಿ ಇಲ್ಲಿಯವರೆಗೂ ಅಲ್ಲಿಗೆ ಭೇಟಿ ನೀಡಿಲ್ಲ. ಆದರೆ ಬಂಡವಾಳಶಾಹಿಯೊಬ್ಬನ ಮಗನ ಮದುವೆಯ ಹೆಸರಿನಲ್ಲಿ ನಡೆಯುತ್ತಿರುವ ಅಶ್ಲೀಲ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ಎಂತಹ ದೌರ್ಭಾಗ್ಯ ಈ ದೇಶಕ್ಕಿದೆ” ಎಂದು ನೆಟ್ಟಿಗರೊಬ್ಬರು ಟೀಕಿಸಿದ್ದಾರೆ.
मणिपुर एक साल से जल रहा है, देश का प्रधानमंत्री वहां आज तक नहीं गया।
लेकिन एक पूंजीपति पुत्र की शादी के नाम पर हो रहे अश्लील प्रदर्शन में पहुंच गया।
क्या दुर्भाग्य है इस देश का!🔥🔥 pic.twitter.com/6Ku0ZPJojb
— Tejas Chauhan AAP (@tejaschauhanAAP) July 14, 2024
“ಪ್ರಧಾನಿ ಮಣಿಪುರದಲ್ಲಿಯೂ ಹಿಂಸಾಚಾರ ನಡೆಯುತ್ತಿದೆ. ಆದರೆ ಅದರ ಬಗ್ಗೆ ಮಾತ್ರ ಸುಮಾರು ತಿಂಗಳುಗಳ ಕಾಲ ಮಾತನಾಡಲಿಲ್ಲ” ಎಂದು ಮತ್ತೋರ್ವ ನೆಟ್ಟಿಗರು ಹೇಳಿದ್ದಾರೆ.
“ನೀವು ಮಣಿಪುರದ ಬಗ್ಗೆ ಪೋಸ್ಟ್ ಮಾಡಬೇಕು. ನೀವು ಗೂಂಡಾಗಳಿಂದ ಸುಡಲ್ಪಟ್ಟ ಬಂಗಾಳಿ ಮಹಿಳೆಯರ ಬಗ್ಗೆ ಮಾತನಾಡಬೇಕಿತ್ತು. ಹರಿಯಾಣ ಪಂಜಾಬ್ ರೈತರ ಸಮಸ್ಯೆಯ ಬಗ್ಗೆಯೂ ಪೋಸ್ಟ್ ಮಾಡಬೇಕಿತ್ತು. ನೀವು ಉತ್ತರ ಪ್ರದೇಶದಲ್ಲಿ ದಲಿತರ ಸಮಸ್ಯೆಗಳಿಗೆ ಪ್ರತಿಕ್ರಿಯಿಸಬೇಕು. ನೀವು ಭಾರತದಲ್ಲಿ ಎಲ್ಲಿ ಏನೂ ನಡೆದರೂ ಪ್ರತಿಕ್ರಿಯಿಸಬೇಕಿತ್ತು. ಒಮ್ಮೆ ಆಲೋಚಿಸಿ ಮೋದಿ ಅವರೇ” ಎಂದು ಸಂತೋಷ್ ರೆಡ್ಡಿ ಎಂಬ ನೆಟ್ಟಿಗರೊಬ್ಬರು ತಿಳಿಸಿದ್ದಾರೆ.
Same u should posted on #Manipur…
Same u should have worked on #Bengaliwomen torched by goons there..
Same u should have done in #Haryanapunjabfarmers issue
Same u should react to #DalitUP issues
Same u should have done in every where in India#thinkmodi ji@ANI@INCIndia— Santosh Reddy (@santu026) July 14, 2024
“ಮೋದಿ ಅವರೇ ಪ್ರತಿಯೊಬ್ಬರನ್ನು & ಎಲ್ಲರನ್ನು ಸ್ನೇಹಿತರೆಂದು ಕರೆಯುವುದನ್ನು ನಿಲ್ಲಿಸಿ. ಪ್ರತಿಯೊಬ್ಬರನ್ನೂ ಸ್ನೇಹಿತ ಎಂದು ಹೇಳದೆಯೇ ನೀವು ರಾಜತಾಂತ್ರಿಕತೆಯನ್ನು ಮಾಡಬಹುದು” ಎಂದು ಮತ್ತೋರ್ವ ನೆಟ್ಟಿಗರು ಅಭಿಪ್ರಾಯಿಸಿದ್ದಾರೆ.
ಮಣಿಪುರದಲ್ಲಿ 2023ರ ಮೇ ತಿಂಗಳಿನಲ್ಲಿ ಹಿಂಸಾಚಾರ ಆರಂಭವಾಗಿದ್ದು ಪ್ರಧಾನಿ ಮೋದಿ ಒಂದು ವರ್ಷಗಳ ಕಾಲ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಎಕ್ಸ್‌ನಲ್ಲಿಯೂ ಪೋಸ್ಟ್ ಮಾಡಿರಲಿಲ್ಲ. ಇತ್ತೀಚೆಗೆ ನಡೆದ ಲೋಕಸಭೆಯಲ್ಲಿ ಇಂಡಿಯಾ ಒಕ್ಕೂಟ ವಿಪಕ್ಷ ನಾಯಕರುಗಳ ಒತ್ತಡ ಅಧಿಕವಾದ ಬಳಿಕ ಮೋದಿ ಮಣಿಪುರದ ಬಗ್ಗೆ ಮೌನ ಮುರಿದಿದ್ದಾರೆ. ಆದರೆ ಈವರೆಗೂ ಮೋದಿ ಮಣಿಪುರಕ್ಕೆ ಭೇಟಿ ನೀಡಿಲ್ಲ.
BREAKING: 🇺🇸 Former President Donald Trump shot at rally. pic.twitter.com/SnQe62Vu4d
— Watcher.Guru (@WatcherGuru) July 13, 2024