ಮಹಿಳೆಯರ ವಿಂಬಲ್ಡನ್ ಫೈನಲ್: ಜಾಸ್ಮಿನ್ ಪಾವೊಲಿನಿ ಸೋಲಿಸಿ ಬಾರ್ಬೊರಾ ಕ್ರೆಚಿಕೋವಾ ಚಾಂಪಿಯನ್

Date:

ಲಂಡನ್‌ನಲ್ಲಿ ನಡೆದ 2024ರ ವಿಂಬಲ್ಡನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಜಾಸ್ಮಿನ್ ಪಾವೊಲಿನಿ ಅವರನ್ನು 6-2, 2-6, 6-4 ಸೆಟ್‌ಗಳಿಂದ ಸೋಲಿಸಿದ ಬಾರ್ಬೊರಾ ಕ್ರೆಚಿಕೋವಾ 2024ರ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

- Advertisement -

ಜಾಸ್ಮಿನ್ ಪಾವೊಲಿನಿ ವಿರುದ್ಧ ಜಯ ಸಾಧಿಸಲು 28ರ ಹರೆಯದ ಝೆಕ್ ರಿಪಬ್ಲಿಕ್‌ನ ಆಟಗಾರ್ತಿ ಬಾರ್ಬೊರಾ ಕ್ರೆಚಿಕೋವಾ ಒಂದು ಗಂಟೆ 56 ನಿಮಿಷಗಳನ್ನು ತೆಗೆದುಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

2021ರಲ್ಲಿ ಬಾರ್ಬೊರಾ ಕ್ರೆಚಿಕೋವಾ 2021ರ ಫ್ರೆಂಚ್ ಓಪನ್ ಟ್ರೋಫಿಯನ್ನು ಗೆದ್ದಿದ್ದರು. ವಿಂಬಲ್ಡನ್ ಗೆಲ್ಲುವ ಮೂಲಕ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.

2017ರಲ್ಲಿ ನಿಧನರಾದ ಬಾರ್ಬೊರಾ ಕ್ರೆಚಿಕೋವಾ ಅವರ ಮಾರ್ಗದರ್ಶಕಿ ಜನಾ ನೊವೊಟ್ನಾ ಅವರು 1998ರ ವಿಂಬಲ್ಡನ್‌ನಲ್ಲಿ ತಮ್ಮ ಏಕೈಕ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದರು.

ಜಾಸ್ಮಿನ್ ಪಾವೊಲಿನಿ ವಿಂಬಲ್ಡನ್ ಫೈನಲ್ ತಲುಪಿದ ಮೊದಲ ಇಟಾಲಿಯನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಿಂಗಲ್ಸ್ ಗ್ರ್ಯಾಂಡ್ ಸ್ಲ್ಯಾಮ್ ಅನ್ನು ಗೆದ್ದ ಮೊದಲ ಇಟಾಲಿಯನ್ ಪುರುಷ ಅಥವಾ ಮಹಿಳೆಯಾಗುವ ಅವಕಾಶವನ್ನು ಜಾಸ್ಮಿನ್ ಪಾವೊಲಿನಿ ಹೊಂದಿದ್ದರು. ಆದರೆ ಕ್ರೆಚಿಕೋವಾ ವಿರುದ್ಧ ಸೋತದ್ದರಿಂದ ಇತಿಹಾಸ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ.

ಈ ವರ್ಷದ ಆರಂಭದಲ್ಲಿ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡೆದಿದ್ದ ಫ್ರೆಂಚ್ ಓಪನ್‌ನ ಫೈನಲ್‌ನಲ್ಲಿ ವಿಶ್ವ ನಂ.1 ಇಗಾ ಸ್ವಿಯಾಟೆಕ್ ವಿರುದ್ಧ ಸೋತು ಜಾಸ್ಮಿನ್ ಪಾವೊಲಿನಿ ಆಘಾತ ಅನುಭವಿಸಿದ್ದರು. ಜಾಸ್ಮಿನ್ ಪಾವೊಲಿನಿ ಮತ್ತೊಮ್ಮೆ ಸೋಲಿನ ವಿರುದ್ಧ ಹೋರಾಡಲು ಸಾಧ್ಯವಾಗಲಿಲ್ಲ. ಆದರೆ, ಬಾರ್ಬೊರಾ ಕ್ರೆಚಿಕೋವಾ ವಿರುದ್ಧ ದಿಟ್ಟ ಹೋರಾಟ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

2022ರ ಚಾಂಪಿಯನ್ ಎಲೆನಾ ರೈಬಾಕಿನಾ ವಿರುದ್ಧದ ಗೆಲುವಿನಿಂದ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಂತೆ ತೋರುತ್ತಿದ್ದ ಬಾರ್ಬೊರಾ, ಮೊದಲ ಸೆಟ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದರು. ಬಳಿಕ ದಿಟ್ಟ ಹೋರಾಟ ಪ್ರದರ್ಶಿಸಿದ ಜಾಸ್ಮಿನ್ ಪಾವೊಲಿನಿ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಸ್​ ಗಳಿಸಿದರೆ, ಬಾರ್ಬೊರಾ 2 ಅಂಕದಲ್ಲೇ ಉಳಿದರು. ಈ ಮೂಲಕ ಜಾಸ್ಮಿನ್ 2ನೇ ಸುತ್ತನ್ನು 6-2 ಅಂತರದಿಂದ ಗೆದ್ದುಕೊಂಡರು.

ಆದರೆ ಅಂತಿಮ ಸುತ್ತಿನಲ್ಲಿ ಕಂಬ್ಯಾಕ್ ಮಾಡಿದ ಬಾರ್ಬೊರಾ, ದ್ವಿತೀಯ ಸುತ್ತಿನಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡರು. ಅಲ್ಲದೆ ಚಾಣಾಕ್ಷ ಆಟದೊಂದಿಗೆ ಜಾಸ್ಮಿನ್​ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಅದಾಗ್ಯೂ ಒಂದು ಹಂತದಲ್ಲಿ ಇಬ್ಬರೂ ಕೂಡ 4-4 ಅಂತರದಿಂದ ಸಮಬಲ ಸಾಧಿಸಿದ್ದರಿಂದ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಆದರೆ ತಮ್ಮೆಲ್ಲಾ ಅನುಭವನ್ನು ಧಾರೆಯೆರೆದ ಬಾರ್ಬೊರಾ, ಅಂತಿಮವಾಗಿ 6-4 ಅಂತರದಿಂದ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಲವ್ಲಿನಾಗೆ ಚಿನ್ನ, ಬಿಲ್ಲುಗಾರಿಕೆಯಲ್ಲಿ ಐತಿಹಾಸಿಕ ಸಾಧನೆ; ಪದಕ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು...

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಫೈನಲ್‌ಗೇರಿದ ಭಾರತ ಹಾಕಿ ತಂಡ; ಕುಸ್ತಿಯಲ್ಲಿ ನಿತೇಶ್‌ಗೆ ಬೆಳ್ಳಿ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನವಾದ...

ಏಷ್ಯಾಡ್’ನಲ್ಲಿ ಶ್ರೀಲಂಕಾ ಸೋಲಿಸಿದ ಟೀಮ್ ಇಂಡಿಯಾ: ಚಿನ್ನದ ಪದಕಕ್ಕಾಗಿ ಪಾಕ್ ಎದುರು ಸೆಣಸು

ಸಂಘಟಿತ ಪ್ರದರ್ಶನ ನೀಡಿದ ಭಾರತ ಪುರುಷರ ಕ್ರಿಕೆಟ್ ತಂಡ, ಇಲ್ಲಿ ನಡೆಯುತ್ತಿರುವ...

ಗಿಲ್ ಅಮೋಘ ದ್ವಿಶತಕದಾಟ, ರೋಹಿತ್ ಶತಕ: 406 ರನ್ ಗುರಿ ಮುಟ್ಟಿ ಐತಿಹಾಸಿಕ ಜಯ ಸಾಧಿಸಿದ ಭಾರತ

ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇತಿಹಾಸ...