ಭಾರತ ತಂಡ ಜಿಂಬಾಬ್ವೆ ವಿರುದ್ಧದ ಐದನೇ ಪಂದ್ಯದಲ್ಲಿ 42 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 4-1 ಮೂಲಕ ಜಯಗಳಿಸಿತು.
ಹಾರಾರೆ ಸ್ಪೋರ್ಟ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ 168 ರನ್ನುಗಳ ಸವಾಲನ್ನು ಬೆನ್ನಟ್ಟಿದ ಜಿಂಬಾಬ್ವೆ ಭಾರತದ ಬೌಲರ್‌ಗಳ ದಾಳಿಗೆ ಕುಸಿದು 125 ರನ್‌ಗಳಿಗೆ ಆಲೌಟ್ ಆಯಿತು.
ವೇಗಿ ಮುಖೇಶ್ ಕುಮಾರ್ 22/4, ಶಿವಂ ದುಬೆ 25/2 ಹಾಗೂ ತುಷಾರ್ ದೇಶಪಾಂಡೆ, ವಾಷಿಂಗ್ಟನ್ ಸುಂದರ್ ಹಾಗೂ ಅಭಿಷೇಕ್ ಶರ್ಮಾ ತಲಾ ಒಂದೊಂದು ವಿಕೆಟ್ ಕಬಳಿಸಿ ಗೆಲುವಿನ ರೂವಾರಿಗಳಾದರು.
ಜಿಂಬಾಬ್ವೆ ಪರ ಡಿಯೋನ್ ಮೈಯರ್ಸ್ 34, ತದಿವನ್ಷೆ ಮರುಮಣಿ 27 ಹಾಗೂ ಫರಾಜ್ ಅಕ್ರಮ್ 27 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರ್ಯಾರು 10ರ ಗಡಿ ದಾಟಲಿಲ್ಲ.
ಈ ಸುದ್ದಿ ಓದಿದ್ದೀರಾ? ಕೆಲವೇ ತಿಂಗಳ ಅಂತರದಲ್ಲಿ ಏಳು-ಬೀಳು ಎದುರಿಸಿ ಗೆದ್ದು ಬಂದ ಹಾರ್ದಿಕ್ ಪಾಂಡ್ಯ!
ಮೊದಲು ಟಾಸ್ ಗೆದ್ದ ಜಿಂಬಾಬ್ವೆ ಟಿಂ ಇಂಡಿಯಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ಯಶಸ್ವಿ ಜೈಸ್ವಾಲ್(12), ನಾಯಕ ಶುಭಮನ್ ಗಿಲ್(13) ಹಾಗೂ ಅಭಿಷೇಕ್ ಶರ್ಮಾ (14) ಬೇಗನೆ ಪೆವಲಿಯನ್‌ಗೆ ತೆರಳಿದರು.
ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಉಪಯುಕ್ತ ಅರ್ಧ ಶತಕ ತಂಡ ಗೌರವಾನ್ವಿತ ಮೊತ್ತ ಕಲೆ ಹಾಕಲು ಕಾರಣವಾಯಿತು. 45 ಚೆಂಡುಗಳಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿಯಿಂದಿಗೆ ಸ್ಯಾಮ್ಸನ್ 58 ಗಳಿಸಿದರು.
ಸಂಜುಗೆ ರಿಯಾನ್ ಪರಾಗ್ 22, ಶಿವಂ ದುಬೆ 26 ಉತ್ತಮ ಬೆಂಬಲ ನೀಡಿದರು. ಕೊನೆಯಲ್ಲಿ ಬಂದ ರಿಂಕು ಸಿಂಗ್ ಅಜೇಯ 11 ರನ್ ಗಳಿಸಿದ ಪರಿಣಾಮ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ಮೊತ್ತ ಕಲೆ ಹಾಕಲು ಕಾರಣರಾದರು.
