ಐಪಿಎಲ್ 16ನೇ ಆವೃತ್ತಿಯ 36ನೇ ಪಂದ್ಯದಲ್ಲಿ ಆರ್ಸಿಬಿ ಗೆಲವಿಗೆ ಕೆಕೆಆರ್ 201 ರನ್ಗಳ ಕಠಿಣ ಸವಾಲು ಮುಂದಿಟ್ಟಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್, ಕೋಲ್ಕತ್ತಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ಆರಂಭಿಕ ಜೇಸನ್ ರಾಯ್ ಸತತ ಎರಡನೇ ಅರ್ಧಶತಕ ಮತ್ತು ನಾಯಕ ನಿತೀಶ್ ರಾಣಾ ಗಳಿಸಿದ ಬಿರುಸಿನ 48 ರನ್ಗಳ ನೆರವಿನಿಂದ ಕೆಕೆಆರ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 200 ರನ್ ಗಳಿಸಿದೆ.
ನಾರಾಯಣ್ ಜಗದೀಶನ್ 27, ವೆಂಕಟೇಶ್ ಅಯ್ಯರ್ 31 ಹಾಗೂ ಕೊನೆಯಲ್ಲಿ ರಿಂಕು ಸಿಂಗ್ 18 ರನ್ಗಳಿಸಿ ಅಜೇಯರಾಗುಳಿದರು.
ಆರ್ಸಿಬಿ ಪರ ವಿಜಯಕುಮಾರ್ ವೈಶಾಕ್ ಮತ್ತು ಸ್ಪಿನ್ನರ್ ವನಿಂದು ಹಸರಂಗ ತಲಾ 2 ವಿಕೆಟ್ ಪಡೆದರೆ, ಆಂಡ್ರೆ ರಸೆಲ್ ವಿಕೆಟ್ ಸಿರಾಜ್ ಪಾಲಾಯಿತು.