ಯಾದಗಿರಿ | ಟ್ಯಾಕ್ಸಿ ಚಾಲಕರಿಂದ ಮತದಾನ ಜಾಗೃತಿ; ಮತ ಚಲಾಯಿಸುವಂತೆ ಕರೆ

Date:

Advertisements
  • ಟ್ಯಾಕ್ಸಿ ಚಾಲಕರಿಗೆ ಮತದಾನ ವ್ಯವಸ್ಥೆ ಕಲ್ಪಿಸುವಂತೆ ಕರೆ
  • ಚಾಲಕರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವಂತೆ ಮನವಿ

“ದೇಶದ ಪ್ರತಿ ವಯಸ್ಕ ನಾಗರೀಕರು ಮತ ಚಲಾಯಿಸಬೇಕು, ಪ್ರತಿಯೊಬ್ಬರಿಗೆ ಮತದಾನ ಹಕ್ಕು ಇದೆ, ಚಾಲಕರು ಕೂಡ ಎಷ್ಟೇ ಒತ್ತಡವಿದ್ದರೂ ಮತದಾನ ಮಾಡಿ ಕೆಲಸಕ್ಕೆ ಹೋಗಬೇಕು” ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಸಲಹೆ ನೀಡಿದರು.

‘ಗಿರಿನಾಡು ಕಾರು ಮತ್ತು ಟ್ಯಾಕ್ಸಿ ಚಾಲಕರ ಸಂಘ’ದ ವತಿಯಿಂದ ಯಾದಗಿರಿ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಬಳಿಯ ನಗರಸಭೆ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುದ್ನಾಳ ಮಾತನಾಡಿದರು.

“ಸ್ವಾತಂತ್ರ್ಯ ಸಿಕ್ಕಂದಿನಿಂದ ಇಲ್ಲಿಯವರೆಗೆ ಚಾಲಕರು ಪ್ರತಿ ಚುನಾವಣೆ ವೇಳೆ ವಾಹನದ ಬಾಡಿಗೆಗೆ ತೆರಳಿದ ಸಂದರ್ಭದಲ್ಲಿ ಮತದಾನದಿಂದ ವಂಚಿತರಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಟ್ಯಾಕ್ಸಿ ಚಾಲಕರಿಗೆ ವಿಶೇಷ ಮತದಾನ ವ್ಯವಸ್ಥೆಗೆ ಮುಂದಾಗಬೇಕು” ಎಂದು ಚುನವಣೆ ಆಯೋಗವನ್ನು ಒತ್ತಾಯಿಸಿದರು.

Advertisements

ಈ ಸುದ್ದಿ ಓದಿದ್ದೀರಾ? : ಆಪರೇಷನ್ ಕಮಲ ಮಾಡಿದಾಗಲೇ ಬಿಜೆಪಿಯ ತತ್ವ ಸಿದ್ಧಾಂತ ಮಣ್ಣು ಪಾಲಾದವು : ಜಗದೀಶ್ ಶೆಟ್ಟರ್

“ಕಾರು ಮತ್ತು ಟ್ಯಾಕ್ಸಿ ಚಾಲಕರಿಗೆ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಟ್ಯಾಕ್ಸಿ ಸ್ಟ್ಯಾಂಡ್‌ಗೆ ಸ್ಥಳ, ಮೂಲಭೂತ ಸೌಕರ್ಯ ನೀಡದೇ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನಿರ್ಲಕ್ಷ ವಹಿಸಿರುವುದು ದೃರದೃಷ್ಟಕರ ಸಂಗತಿ. ಚಾಲಕರು ಹೊಟ್ಟೆಪಾಡಿಗಾಗಿ ಬಾಡಿಗೆಗೆ ಹೋಗುತ್ತಾರೆ. ಅವರು ಹೋಗಿ ಬರುವವರೆಗೆ ಅವರ ಬಗ್ಗೆ ಕುಟುಂಬದವರು ಎದುರು ನೋಡುವ ಪರಿಸ್ಥಿತಿ ಇದೆ. ಹೀಗಾಗಿ ಇವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದರು.

ಗಿರಿನಾಡು ಚಾಲಕರ ಸಂಘದ ಅದ್ಯಕ್ಷ ಬಸವರಾಜ ಇಟಗಿ, ಶರಣು ನಾರಾಯಣಪೇಟೆ, ಶರಣು ಜೋತಾ, ಸಾಬಯ್ಯ ಗುತ್ತೇದಾರ, ಅಪಸರ ಬಾಯಿ, ಮಹೇಬೂಬ ಪಾಟೀಲ್, ಬೀರೇಶ ಪೂಜಾರಿ, ಮಹೇಶ ಹೊಸಮಿ, ಭೀಮು ಪುಜಾರಿ, ವೀರೇಶ, ರವಿ, ಶರಣು, ಹೊಸಳ್ಳಿ, ತಾಯಪ್ಪ, ಬನ್ನಪ್ಪ, ಕಾಡಪ್ಪ ಸಿದ್ದು ಮಾನಗನಾಳ, ಅಶೋಕ ಸಜ್ಜನ್, ವಿಜಯಕುಮಾರ, ವಿಶ್ವನಾಥ ಎಂ.ಡಿ. ನಾಯಕ, ನವೀನ ನಾಯ್ಕಲ್, ರಫೀಕ್, ರಫೀಕ್, ರಶೀದ, ಸುಭಾಷ, ಪ್ರಕಾಶ, ಗಂಗು ಮುತ್ಯಾ, ಉಮೇಶ, ಜಮೀರ, ರಿಯಾಜ್, ಸಿರಿ, ನಯಿಮ್, ಅಜಿಮ್, ಸಾಬು, ಮರೆಪ್ಪ, ಗೌಸ್, ಶರಣು ಸ್ವಾಮಿ, ಮಹೇಶ, ನಬಿ, ಗಣೇಶ, ಜಮಾಲ್, ಭೀಮು, ಅಸೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X