ಕೇಂದ್ರ ಬಜೆಟ್ ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶಾದಾದ್ಯಂತ ‘ಚಾರ್ ಸೋ ಪಾರ್’ (400ಕ್ಕೂ ಅಧಿಕ ಕ್ಷೇತ್ರದಲ್ಲಿ ಗೆಲುವು) ಮಾಡಲು ಉತ್ತಮ ಅವಕಾಶ ಸಿಕ್ಕಿದೆ. ರಾಷ್ಟ್ರವ್ಯಾಪಿ ಕನಿಷ್ಠ ವೇತನ 400 ರೂಪಾಯಿಗೂ ಅಧಿಕ ಮಾಡಬಹುದು ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ. ಕನಿಷ್ಠ ವೇತನವೊಂದರ ಡೇಟಾವನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಅವರಿಗೆ ‘ಚಾರ್ ಸೋ ಪಾರ್’ ಮಾಡುವ ಅವಕಾಶದ ಬಗ್ಗೆ ವಿವರಿಸಿದ್ದಾರೆ.
‘ನೈಜ ವೇತನ ಕುಸಿತ’ದ ಬಗ್ಗೆ ಪ್ರಸ್ತಾಪ ಮಾಡಿರುವ ಕಾಂಗ್ರೆಸ್, “ಲೋಕಸಭೆಯಲ್ಲಿ ಚಾರ್ ಸೋ ಪಾರ್ ಅನ್ನು ತಲುಪುವ ಪ್ರಯತ್ನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತದಾರರು ಛೀಮಾರಿ ಹಾಕಿದ್ದಾರೆ. ಆದರೆ ಬಜೆಟ್ ಅವರಿಗೆ ಅವಕಾಶ ನೀಡುತ್ತದೆ. ದಿನಕ್ಕೆ 400 ರೂಪಾಯಿಗಳ ರಾಷ್ಟ್ರವ್ಯಾಪಿ ಕನಿಷ್ಠ ವೇತನದ ಅಸಲಿ ಚಾರ್ ಸೋ ಪಾರ್ ಅನ್ನು ಸಾಧಿಸುವ ಅವಕಾಶವಿದೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ| ಅಜಿತ್ ಅಲ್ಲ ಬಿಜೆಪಿಯ ‘ಚಾರ್ ಸೌ ಪಾರ್’ ಚುನಾವಣೆ ಸೋಲಿಗೆ ಕಾರಣ: ಮಿತ್ರ ಪಕ್ಷದ ಸಚಿವ
“10 ವರ್ಷಗಳ ಹಿಂದೆ ಕಾರ್ಮಿಕರು ಎಷ್ಟು ಆಹಾರ, ವಸ್ತು ಸಾಮಾಗ್ರಿಗಳ ಖರೀದಿಸುವ ಆರ್ಥಿಕ ಬಲವನ್ನು ಹೊಂದಿದ್ದರೋ ಅದಕ್ಕಿಂತ ಅತೀ ಕಡಿಮೆ ಸಾಮರ್ಥ್ಯವನ್ನು ಪ್ರಸ್ತುತ ಹೊಂದಿದ್ದಾರೆ ಎಂದು ಸರ್ಕಾರದ ಅಧಿಕೃತ ಅಂಕಿಅಂಶಗಳು ಸೇರಿದಂತೆ ಅನೇಕ ಡೇಟಾ ಮೂಲಗಳು ತೋರಿಸುತ್ತದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಇನ್ನು ಲೇಬರ್ ಬ್ಯೂರೋದ ವೇತನ ದರ ಸೂಚ್ಯಂಕದ ಸರ್ಕಾರಿ ದತ್ತಾಂಶವನ್ನು ಉಲ್ಲೇಖಿಸಿದ ರಮೇಶ್, “ಕಾರ್ಮಿಕರ ನೈಜ ವೇತನವು 2014 ಮತ್ತು 2023ರ ನಡುವೆ ಸ್ಥಿರವಾಗಿದೆ. ವಾಸ್ತವವಾಗಿ 2019 ಮತ್ತು 2024 ರ ನಡುವೆ ಕುಸಿದಿದೆ” ಎಂದು ಹೇಳಿದರು.
The data is clear: India’s workers can buy less today than they could 10 years ago. Real wages have stagnated or declined for most of India.
A nationwide minimum wage of Rs. 400 per day is an idea whose time has come. Our statement on the need for Asli 400 Paar. pic.twitter.com/UjBpHeATUk
— Jairam Ramesh (@Jairam_Ramesh) July 18, 2024
ಕೃಷಿ ಸಚಿವಾಲಯದ ಕೃಷಿ ಅಂಕಿಅಂಶಗಳನ್ನು ಉಲ್ಲೇಖಿಸಿರುವ ಅವರು, ಮನಮೋಹನ್ ಸಿಂಗ್ ಸರ್ಕಾರದಡಿಯಲ್ಲಿ ಕೃಷಿ ಕಾರ್ಮಿಕರ ನೈಜ ವೇತನವು ಪ್ರತಿ ವರ್ಷ ಶೇಕಡ 6.8ರಷ್ಟು ಏರಿಕೆಯಾಗಿದೆ. ಆದರೆ ಮೋದಿ ಸರ್ಕಾರದಡಿಯಲ್ಲಿ ಕೃಷಿ ಕಾರ್ಮಿಕರ ನೈಜ ವೇತನವು ಪ್ರತಿ ವರ್ಷ ಋಣಾತ್ಮಕ ಶೇಕಡ 1.3ರಷ್ಟು (-1.3 %) ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.