ಮಹಾರಾಷ್ಟ್ರ| ಅಜಿತ್ ಅಲ್ಲ ಬಿಜೆಪಿಯ ‘ಚಾರ್‌ ಸೌ ಪಾರ್’ ಚುನಾವಣೆ ಸೋಲಿಗೆ ಕಾರಣ: ಮಿತ್ರ ಪಕ್ಷದ ಸಚಿವ

Date:

ಮಹಾರಾಷ್ಟ್ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಎನ್‌ಸಿಪಿಯ ಅಜಿತ್‌ ಪವಾರ್‌ ಕಾರಣವಲ್ಲ, ಬಿಜೆಪಿಯ ‘ಚಾರ್‌ ಸೌ ಪಾರ್’ ಚುನಾವಣೆ ಸೋಲಿಗೆ ಕಾರಣ ಎಂದು ಬಿಜೆಪಿಯ ಮಿತ್ರ ಪಕ್ಷ ಎನ್‌ಸಿಪಿ (ಅಜಿತ್ ಪವಾರ್ ಬಣ) ಸಚಿವ ಛಗನ್ ಭುಜಬಲ್ ಹೇಳಿದ್ದಾರೆ.

ಮಹಾರಾಷ್ಟ್ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿನ್ನಡೆಗೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯೊಂದಿಗಿನ ಮೈತ್ರಿಯೇ ಕಾರಣ ಎಂದು ಆರ್‌ಎಸ್‌ಎಸ್‌ ಮುಖವಾಣಿಯಲ್ಲಿ ಲೇಖನ ಪ್ರಕಟವಾದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಛಗನ್ ಭುಜಬಲ್, “ಉಪಮುಖ್ಯಮಂತ್ರಿಯನ್ನು ಬಲಿಪಶು ಮಾಡಬಾರದು” ಎಂದಿದ್ದಾರೆ.

“ಉತ್ತರ ಪ್ರದೇಶದಲ್ಲೂ ಬಿಜೆಪಿ ಹೀನಾಯವಾಗಿ ಸೋತಿದೆ. ಅಜಿತ್ ಪವಾರ್ ಉತ್ತರ ಪ್ರದೇಶದಲ್ಲಿ ಇಲ್ಲ. ಹಾಗಿರುವಾಗ ಅಲ್ಲಿ ಬಿಜೆಪಿ ಹೇಗೆ ಸೋತಿದೆ” ಎಂದು ಛಗನ್ ಭುಜಬಲ್ ಪ್ರಶ್ನಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  ಮಹಾರಾಷ್ಟ್ರದಲ್ಲಿ ಬಿಜೆಪಿ ತಂತ್ರಕ್ಕೆ ಆಹುತಿಯಾಗುತ್ತಾ ಮಹಾಯುತಿ

“ಮಹಾಯುತಿಯ ಸೋಲಿಗೆ ಬಿಜೆಪಿಯ ‘ಅಬ್‌ ಕಿ ಬಾರ್ ಚಾರ್‌ ಸೌ ಪಾರ್’ ಘೋಷಣೆ ಕಾರಣ. ಈ ಘೋಷಣೆಯಿಂದಾಗಿ ದಲಿತ ಮತ್ತು ಮುಸ್ಲಿಂ ಮತದಾರರು ಮಹಾಯುತಿಯಿಂದ ದೂರವಾಗಿದ್ದಾರೆ” ಎಂದಿದ್ದಾರೆ.


ಇನ್ನು “ಸಂವಿಧಾನವನ್ನು ಬದಲಿಸುವುದು, ಮೀಸಲಾತಿಯನ್ನು ಅಂತ್ಯ ಮಾಡುವಂತಹ ಹೇಳಿಕೆಗಳನ್ನು ವಿಪಕ್ಷಗಳು ಎತ್ತಿ ಹಿಡಿದು ತನ್ನ ಚುನಾವಣಾ ಪ್ರಚಾರ ಮಾಡಿದೆ. ಇದು ನಮ್ಮ ಚುನಾವಣಾ ಭವಿಷ್ಯಕ್ಕೆ ಹಾನಿ ಮಾಡಿದೆ. ಮಹಾರಾಷ್ಟ್ರ ಸಿಎಂ ಏಕಾಂತ್ ಶಿಂಧೆ ಕೂಡ ಇದನ್ನೇ ಹೇಳುತ್ತಿದ್ದರು” ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ?  ಮಹಾರಾಷ್ಟ್ರದಲ್ಲಿ ಬಿಜೆಪಿ ಕಳಪೆ ಪ್ರದರ್ಶನ: ರಾಜೀನಾಮೆಗೆ ಮುಂದಾದ ಡಿಸಿಎಂ ಫಡ್ನವಿಸ್

ಆರ್‌ಎಸ್‌ಎಸ್ ಕಾರ್ಯಕರ್ತ ರತನ್ ಶಾರದ ಲೇಖನಕ್ಕೆ ಪ್ರತಿಕ್ರಿಯೆ ನೀಡಿರುವ ಎನ್‌ಸಿಪಿ ಸಚಿವ ಹಸನ್ ಮುಶ್ರಿಫ್, “ಚುನಾವಣಾ ಸೋಲಿಗೆ ಆರ್‌ಎಸ್‌ಎಸ್-ಬಿಜೆಪಿ ಅಜಿತ್ ಮೇಲೆ ಆರೋಪ ಹೊರಿಸಬಾರದು. ಪರಸ್ಪರ ಆರೋಪ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಾವು ಮೈತ್ರಿಕೂಟದಲ್ಲಿರುವಾಗ ಇದು ಸರಿಯಲ್ಲ” ಎಂದು ಅಭಿಪ್ರಾಯಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಯನ್ನು ಕಾಣಲು ಎನ್‌ಸಿಪಿ ಜೊತೆಗಿನ ಮೈತ್ರಿಯೂ ಕಾರಣ ಎಂದು ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಸರ್‌’ನ ಲೇಖನವೊಂದರಲ್ಲಿ ಬರೆಯಲಾಗಿದೆ.

ಆರ್‌ಎಸ್‌ಎಸ್ ಕಾರ್ಯಕರ್ತ ರತನ್ ಶಾರದ “ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿಯ ‘ಬ್ರಾಂಡ್ ಮೌಲ್ಯ’ ಕಡಿಮೆಯಾಗಿದೆ. ಇತರೆ ಪಕ್ಷಗಳಂತೆಯೇ ಬಿಜೆಪಿಯೂ ಸಾಮಾನ್ಯವಾಗಿ ಕಾಣತೊಡಗಿದೆ. ಲೋಕಸಭೆ ಚುನಾವಣೆಯ ಫಲಿತಾಂಶವು ಬಿಜೆಪಿ ಕಾರ್ಯಕರ್ತರ ಅತಿಯಾದ ವಿಶ್ವಾಸದ ರಿಯಾಲಿಟಿ ಚೆಕ್ ಆಗಿದೆ” ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೀಲ್ಸ್ ಮಾಡುವಾಗ 300 ಅಡಿ ಜಲಪಾತಕ್ಕೆ ಬಿದ್ದು ‘ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್’ ಮೃತ್ಯು

ಮುಂಬೈ ಮೂಲದ 'ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್' ಆನ್ವಿ ಕಾಮ್ದಾರ್ (27) ರೀಲ್ಸ್...

ಬಿಜೆಪಿ ಭಿನ್ನಮತೀಯರಿಗೆ ‘ಮಾನ್ಸೂನ್ ಆಫರ್’ ನೀಡಿದ ಅಖಿಲೇಶ್ ಯಾದವ್

ಉತ್ತರ ಪ್ರದೇಶದಲ್ಲಿ ಬಿಜೆಪಿ ಭಿನ್ನಮತ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ...

ಉತ್ತರಾಖಂಡ | ಅನಾರೋಗ್ಯದಿಂದ ತಮಟೆ ಬಾರಿಸದ ವ್ಯಕ್ತಿ; ದಲಿತ ಕುಟುಂಬಗಳಿಗೆ ಗ್ರಾಮದಿಂದ ಬಹಿಷ್ಕಾರ!

ದಲಿತ ಸಮುದಾಯದ ವ್ಯಕ್ತಿಯೊಬ್ಬರು ಅನಾರೋಗ್ಯದ ಕಾರಣ ದೇವಸ್ಥಾನದಲ್ಲಿ ತಮಟೆ ಬಾರಿಸಲು ಬರದ...

ರಾಜ್ಯ ಸರ್ಕಾರವನ್ನು ಬುಡಮೇಲು ಮಾಡುವುದೇ ಇ.ಡಿ ಉದ್ದೇಶ: ಸಚಿವ ಕೃಷ್ಣ ಬೈರೇಗೌಡ ಆರೋಪ

ಕೇಂದ್ರ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯವನ್ನು (ಇಡಿ) ಬಳಸಿಕೊಂಡು ರಾಜ್ಯ ಕಾಂಗ್ರೆಸ್‌...