ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿರುತ್ತಾರೆ. ಅವರ ವಯಸ್ಸು ಮತ್ತು ಆರೋಗ್ಯದ ಬಗ್ಗೆ ಮಾತನಾಡುತ್ತಿರುವುದರ ಮಿತ್ರಪಕ್ಷಗಳ ಒತ್ತಡದ ಹೊರತಾಗಿಯೂ ಅವರು ಅಧ್ಯಕ್ಷೀಯ ರೇಸ್‌ನಲ್ಲಿ ಮುಂದುವರೆಯುತ್ತಾರೆ ಎಂದು ಬೈಡೆನ್ ಅವರ ಪ್ರಚಾರ ತಂಡದ ಮುಖ್ಯಸ್ಥ ಜೆನ್ ಒ’ಮಲ್ಲಿ ದಿಲ್ಲನ್ ಹೇಳಿದ್ದಾರೆ.
81 ವರ್ಷ ವಯಸ್ಸಾಗಿರುವ ಬೈಡೆನ್ ಅವರು ಡೊನಾಲ್ಡ್ ಟ್ರಂಪ್ ವಿರುದ್ಧದ ಸ್ಪರ್ಧೆಯಲ್ಲಿ ಮತ್ತೆ ಗೆಲ್ಲಲಾರರು ಎಂಬ ಚರ್ಚೆಗಳು ಮುನ್ನೆಲೆಯಲ್ಲಿದ್ದು, ಬೈಡೆನ್ ಅವರವಾದ ಬೆಂಬಲದಲ್ಲಿ ಕುಸಿತ ಕಂಡುಬಂದಿದೆ ಎಂಬುದನ್ನು ದಿಲ್ಲನ್ ಒಪ್ಪಿದಿದ್ದಾರೆ. ಅದಾಗ್ಯೂ, ಬೈಡೆನ್ ಮತ್ತೊಮ್ಮೆ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿದ್ದಾರೆ.
“ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಲು ಜೋ ಬೈಡೆನ್ ಹಿಂದಿಗಿಂತಲೂ ಈಗ ಹೆಚ್ಚು ಪ್ರಬಲರಾಗಿದ್ದಾರೆ. ಅವರು ಎರಡನೇ ಅವಧಿಗೆ ನಮ್ಮ ಅಧ್ಯಕ್ಷರಾಗಲಿದ್ದಾರೆ” ಎಂದು ದಿಲ್ಲನ್ ಹೇಳಿದ್ದಾರೆ.
ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹಾಗೂ ಡೆಮಾಕ್ರೆಟಿಕ್ ಪಕ್ಷದ ಹಲವಾರು ನಾಯಕರು ಬೈಡೆನ್ ಸೋಲುತ್ತಾರೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಹಲವಾರು ಡೆಮಾಕ್ರೆಟಿಕ್ ನಾಯಕರು ಬೈಡೆನ್ ಅವರನ್ನು ಅಧ್ಯಕ್ಷೀಯ ರೇಸ್‌ನಲ್ಲಿ ದೂರವಿಡುವಂತೆ ಒತ್ತಾಯಿಸಿದ್ದಾರೆ. ಅದಾಗ್ಯೂ, ಬೈಡೆನ್ ಚುನಾವಣಾ ಸ್ಪರ್ಧೆಯಲ್ಲಿದ್ದಾರೆ.