ಕಳೆದ ಒಂದು ವರ್ಷದಿಂದ ಮಂಡ್ಯ ಜಿಲ್ಲೆ ಭೀಕರ ಬರಗಾಲವನ್ನು ಎದುರಿಸುತ್ತಿದೆ. ಅಲ್ಲಿರುವ ಕೆರೆಗಳು ಬಹುತೇಕ ಬತ್ತಿ ಹೋಗಿವೆ. ಬತ್ತಿಹೋಗಿರೋ ಈ ಕೆರೆಗಳು ಈಗ ಮಣ್ಣು ಮಾರಾಟ ದಂಧೆಕೋರರ ಖಜಾನೆ ತುಂಬಿಸುತ್ತಿವೆ. ಹೂಳು ತೆಗೆಯುವ ನೆಪದಲ್ಲಿ, ಕೆರೆಗಳ್ಳರು ಹಗಲು, ರಾತ್ರಿ ಎನ್ನದೆ ಜೆಸಿಬಿ, ಟ್ರಾಕ್ಟರ್ ಬಳಸಿಕೊಂಡು ಮಣ್ಣನ್ನು ಅಕ್ರಮವಾಗಿ ಅಗೆದು ಮಾರಾಟ ಮಾಡುತ್ತಿದ್ದಾರೆ.
[embedyt] https://www.youtube.com/watch?v=rxXyexQ9gx4[/embedyt]