ಬೀದರ್‌ | ಮಾಸಿಕ 10 ಸಾವಿರ ಗೌರವ ಧನ ನೀಡಲು ಬೆಳೆ ಸಮೀಕ್ಷೆದಾರರ ಆಗ್ರಹ

Date:

Advertisements

ಬೆಳೆ ಸಮೀಕ್ಷೆದಾರರಿಗೆ ಮಾಸಿಕ ಗೌರವ ಧನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾ ಬೆಳೆ ಸಮೀಕ್ಷೆದಾರರ ತಂಡ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಂಟಿ ಕೃಷಿ ನಿರ್ದೇಶಕರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿತು.

ʼಪ್ರತಿ ವರ್ಷ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಋತುವಿನಲ್ಲಿ ಬೆಳೆ ಸಮಿಕ್ಷೆ ಕಾರ್ಯಕೈಗೊಳ್ಳುತ್ತೇವೆ. ಆದರೆ ಸದರಿ ಬೆಳೆ ಸಮೀಕ್ಷೆ ಕಾರ್ಯ ಸುಗಮ ರೀತಿಯಲ್ಲಿ ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಲ್ಲಿ ಹಲವು ಸಮಸ್ಯೆಗಳು ಎದುರಿಸುತ್ತಿದ್ದು, ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕುʼ ಎಂದು ಆಗ್ರಹಿಸಿದರು.

ʼಸರಕಾರದ ಆದೇಶದಂತೆ ಪ್ರತಿ ವರ್ಷ ಜಿಲ್ಲೆಯ ರೈತರ ಪಹಣಿ ಪ್ರತಿಕೆಯಲ್ಲಿ ಬೆಳೆ ನಮೂದಿಸಲು ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಪರಿಹಾರ ಸೇರಿ ವಿವಿಧ ಬೆಳೆ ಹಾನಿ ಪ್ರಸಂಗಗಳಲ್ಲಿ ಬೆಳೆ ಹಾನಿ ಪರಿಹಾರ ಧನ ಪಡೆಯಲು ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡಲು ಬೆಳೆ ಸಮೀಕ್ಷೆ ಅತ್ಯಗತ್ಯವಾಗಿರುತ್ತದೆ. ಸರ್ಕಾರದ ಯೋಜನೆಗಳಿಗೆ ಬೆಳೆ ಸಮೀಕ್ಷೆ ನಡೆಸಲು ಜಿಲ್ಲಾದ್ಯಂತ ಸುಮಾರು ಐನೂರಕ್ಕೂ ಅಧಿಕ ಸಮೀಕ್ಷೆದಾರರು ಕಾರ್ಯ ನಿರ್ವಹಿಸುತ್ತಿದ್ದಾರೆʼ ಎಂದು ಹೇಳಿದರು.

Advertisements

ʼಎಲ್ಲ ಋತುಮಾನದಲ್ಲಿ ಬೆಳೆ ಸಮೀಕ್ಷೆ ನಡೆಸುವ ನಮಗೆ ಇಲಾಖೆಯಾಗಲಿ, ಸರ್ಕಾರವಾಗಲಿ ಯಾವುದೇ ಸಂರಕ್ಷಣೆ ನೀಡುತ್ತಿಲ್ಲ. ಅಷ್ಟೇ ಅಲ್ಲದೆ ಕನಿಷ್ಠ ಗೌರವಧನ ಕೂಡ ನೀಡುತ್ತಿಲ್ಲ. ಪಿಯುಸಿ, ಪದವಿ ಮುಗಿಸಿದ ನಮಗೆ ಜೀವನ ನಿರ್ವಹಣೆಗೆ ಸಂಕಷ್ಟ ಅನುಭವಿಸುತ್ತಿದ್ದೇವೆʼ ಎಂದು ದೂರಿದರು.

ʼಬೆಳೆ ಸಮೀಕ್ಷೆದಾರರಿಗೆ ಸುರಕ್ಷಿತ ಕವಚ ಹಾಗೂ ಗುರುತಿನ ಚೀಟಿ ನೀಡಬೇಕು. ಬೆಳೆ ಸಮೀಕ್ಷೆಗೆ ಜಿ.ಪಿ.ಎಸ್ ನಕ್ಷೆ ವ್ಯವಸ್ಥೆ ಮಾಡಿಕೊಡಬೇಕು. ಸಮೀಕ್ಷೆದಾರರಿಗೆ ಜೀವ ಹಾನಿ ಸಂಭವಿಸಿದಲ್ಲಿ 5 ಲಕ್ಷ ರೂ. ಜೀವ ವಿಮೆ ನೀಡಬೇಕು. ಪ್ರತಿ ಪ್ಲಾಟ್‌ ಬೆಳೆಗೆ 50 ರೂ. ಅಥವಾ ಪಿಆರ್ ಗಳಿಗೆ ಪ್ರತಿ ತಿಂಗಳಿಗೆ 10 ಸಾವಿರ ರೂ. ಗೌರವ ಧನ ನಿಗದಿಪಡಿಸಬೇಕು. ಸಮೀಕ್ಷೆ ನಡೆಸಲು ಪ್ರತಿಯೊಬ್ಬರಿಗೆ ಹೊಸ ಮೊಬೈಲ್‌ ಫೋನ್ ಕೊಡುವುದು ಸೇರಿದಂತೆ ಇತರೆ ಸೌಲಭ್ಯಗಳು ಒದಗಿಸಬೇಕುʼ ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ?‌ ಮಹಿಳಾ ಉದ್ಯಮಶೀಲತೆ ಕಾರ್ಯಕ್ರಮಕ್ಕಾಗಿ ಅರ್ಜಿ ಆಹ್ವಾನ

ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಸಮೀಕ್ಷೆದಾರರಾದ ಲೋಕೇಶ ಕಾಂಬಳೆ, ಏಕನಾಥ ಮೇತ್ರೆ, ಶಿವಕುಮಾರ್ ಶಿವಗೊಂಡ, ಮೋಹನ್ ಮಾನೆ, ಮಾಣಿಕ್ ಬಂಗಾರೆ, ಅವಿನಾಶ್, ಸುಜೀತ್, ಮಲಗೊಂಡ, ಸುಂದರ್, ಲೋಕೇಶ್ ಕುಂಟೆ, ರತಿಕಾಂತ್ ಕಾಂಬಳೆ, ರವಿ ಶಿಂಧೆ, ಷಡಕ್ಷರಿ, ಮಚೇಂದ್ರ, ವಿನೋದ್, ಬಸವರಾಜ್ ಸೇರಿದಂತೆ ಇತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

3 COMMENTS

  1. ಹಾಯ ಎಲ್ಲ ನನ್ನ ಪಿ ಆರ್ ಗಳಿಗೆ ಹಾಗೂ ತಲಾಟಿ ತಹಶೀಲ್ದಾರ್ ಎಸಿ, ಡಿಸಿ ,ಎಲ್ಲರಿಗೂ ನನ್ನ ಮನವಿ .ನಾವು ಜಿಪಿಎಸ್ ಮಾಡಲು ಹೋದಾಗ ಎಲ್ಲ ರೈತರು ನಮ್ಮನ್ನು “ಕಳ್ಳ ಬಂದ “ಎನ್ನುವ ರೀತಿಯಲ್ಲಿ ಭಾವಿಸ್ತಿದ್ದಾರೆ. ಅನಕ್ಷರಸ್ಥರು ರೈತರು ನಾವು ಅವರ ಹೊಲದ ಮೇಲೆ ದುಡ್ಡನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಭಾವಿಸುತ್ತಾರೆ. ಮತ್ತೆ ನಾವು ಅವರಿಗೆ ವಿಸ್ತಾರವಾಗಿ ಹೇಳಲು ಹೋಗುವಾಗ ಅವರು ನಮ್ಮ ಗುರುತಿನ ಚೀಟಿ ಕೇಳುತ್ತಾರೆ. ಕೆಲವೊಬ್ಬರು ಹೊಡೆಯಲು ಬರುವ ಹಾಗೆ ಬರುತ್ತಾರೆ ಕೆಲವೊಬ್ಬರಿಗೆ ಏನು ಹೇಳಿದರು ಅರ್ಥವಾಗುವುದಿಲ್ಲ. ಎಲ್ಲ ಮೇಲಾಧಿಕಾರಿಗಳಿಗೆ ಕೇಳುವುದು ಏನೆಂದರೆ ನಮಗೆ ಸರಕಾರ ಕಡೆಯಿಂದ ಒಂದು ಗುರ್ತಿನ ಚೀಟಿ ಕೊಡಬೇಕೆಂದು ತಮ್ಮಲ್ಲಿ ಕಳಕಳಿ ವಿನಂತಿಸಿಕೊಳ್ಳುತ್ತೇವೆ .ಮತ್ತೆ ನಾವು ಖಾಸಗಿ ಕಾರ್ಖಾನೆ ಕಂಪನಿ ಗಳಲ್ಲಿ ಕೆಲಸ ಮಾಡಿದರೆ. ಎರಡರಿಂದ ಮೂರು ವರ್ಷದೊಳಗಾಗಿ ಅವರು ನಮ್ಮನ್ನು ಪರ್ಮನೆಂಟ್ ಎಂಪ್ಲಯ್ ಎಂದು ಘೋಷಿಸುತ್ತಾರೆ. ನಾವು ಈಗ ಸುಮಾರು ಆರರಿಂದ ಏಳು ವರ್ಷ ಜಿಪಿಎಸ್ ಅಥವಾ ಕ್ರಾಫ್ಟ್ ಸರ್ವೆ ಅಥವಾ ಬೆಳೆ ಸಮೀಕ್ಷೆ ಮಾಡುತ್ತಲೇ ಬಂದಿದ್ದೇವೆ. ಆದರೂ ಕೂಡ ನಾವು ಎಂದರೆ. ಪಿಆರ್ ಗಳ ಮೇಲೆ ಯಾರಿಗೂ ಕೂಡ ಕಾಳಜಿ ಕನಿಕರ ಬರಲೇ ಇಲ್ಲ. ತಾಳಿದವನು ಬಾಳಿಯಾನು ಗಾದೆ ಮಾತು ಕೇಳುತ್ತಾ, ಹಾಗೆ ಸುಮ್ಮನೆ ಕುಳಿತಿದ್ದೇವೆ . ನಮ್ಮ ಮೇಲೆ ಕರುಣೆ ತೋರಿಸಿ ನಿರುದ್ಯೋಗಿಗಳಾದ ನಮಗೆ ಒಂದು ದಾರಿ ತೋರಿಸಬೇಕೆಂದು. ತಮ್ಮಲ್ಲಿ ಮತ್ತೊಮ್ಮೆ ಮಗದೊಮ್ಮೆ ಪ್ರಾರ್ಥಿಸುತ್ತೇನೆ Hi all my PRs and Talati Tahsildar AC, DC, all my request. When we go for GPS all the farmers think us as “thieves”. The illiterate farmers think that we are taking dirt on their fields. Again when we go to elaborate they ask for our identity card. Some come as if they are coming to hit, some don’t understand what is said. What we ask all superiors is that we request them to give us an identity card from the government. Again if we work in private factory companies. Within two to three years they will announce us as permanent employees. We have been doing GPS or craft survey or crop survey for about six to seven years now. Even though we mean it. No one cares about PR. We were sitting like that listening to the old saying. Have mercy on us and show a way to us unemployed people. I pray for them once again.Please excuse my english grammar mistake

  2. ಹಾಯ ಎಲ್ಲ ನನ್ನ ಪಿ ಆರ್ ಗಳಿಗೆ ಹಾಗೂ ತಲಾಟಿ ತಹಶೀಲ್ದಾರ್ ಎಸಿ, ಡಿಸಿ ,ಎಲ್ಲರಿಗೂ ನನ್ನ ಮನವಿ .ನಾವು ಜಿಪಿಎಸ್ ಮಾಡಲು ಹೋದಾಗ ಎಲ್ಲ ರೈತರು ನಮ್ಮನ್ನು “ಕಳ್ಳ ಬಂದ “ಎನ್ನುವ ರೀತಿಯಲ್ಲಿ ಭಾವಿಸ್ತಿದ್ದಾರೆ. ಅನಕ್ಷರಸ್ಥರು ರೈತರು ನಾವು ಅವರ ಹೊಲದ ಮೇಲೆ ದುಡ್ಡನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಭಾವಿಸುತ್ತಾರೆ. ಮತ್ತೆ ನಾವು ಅವರಿಗೆ ವಿಸ್ತಾರವಾಗಿ ಹೇಳಲು ಹೋಗುವಾಗ ಅವರು ನಮ್ಮ ಗುರುತಿನ ಚೀಟಿ ಕೇಳುತ್ತಾರೆ. ಕೆಲವೊಬ್ಬರು ಹೊಡೆಯಲು ಬರುವ ಹಾಗೆ ಬರುತ್ತಾರೆ ಕೆಲವೊಬ್ಬರಿಗೆ ಏನು ಹೇಳಿದರು ಅರ್ಥವಾಗುವುದಿಲ್ಲ. ಎಲ್ಲ ಮೇಲಾಧಿಕಾರಿಗಳಿಗೆ ಕೇಳುವುದು ಏನೆಂದರೆ ನಮಗೆ ಸರಕಾರ ಕಡೆಯಿಂದ ಒಂದು ಗುರ್ತಿನ ಚೀಟಿ ಕೊಡಬೇಕೆಂದು ತಮ್ಮಲ್ಲಿ ಕಳಕಳಿ ವಿನಂತಿಸಿಕೊಳ್ಳುತ್ತೇವೆ .ಮತ್ತೆ ನಾವು ಖಾಸಗಿ ಕಾರ್ಖಾನೆ ಕಂಪನಿ ಗಳಲ್ಲಿ ಕೆಲಸ ಮಾಡಿದರೆ. ಎರಡರಿಂದ ಮೂರು ವರ್ಷದೊಳಗಾಗಿ ಅವರು ನಮ್ಮನ್ನು ಪರ್ಮನೆಂಟ್ ಎಂಪ್ಲಯ್ ಎಂದು ಘೋಷಿಸುತ್ತಾರೆ. ನಾವು ಈಗ ಸುಮಾರು ಆರರಿಂದ ಏಳು ವರ್ಷ ಜಿಪಿಎಸ್ ಅಥವಾ ಕ್ರಾಫ್ಟ್ ಸರ್ವೆ ಅಥವಾ ಬೆಳೆ ಸಮೀಕ್ಷೆ ಮಾಡುತ್ತಲೇ ಬಂದಿದ್ದೇವೆ. ಆದರೂ ಕೂಡ ನಾವು ಎಂದರೆ. ಪಿಆರ್ ಗಳ ಮೇಲೆ ಯಾರಿಗೂ ಕೂಡ ಕಾಳಜಿ ಕನಿಕರ ಬರಲೇ ಇಲ್ಲ. ತಾಳಿದವನು ಬಾಳಿಯಾನು ಗಾದೆ ಮಾತು ಕೇಳುತ್ತಾ, ಹಾಗೆ ಸುಮ್ಮನೆ ಕುಳಿತಿದ್ದೇವೆ . ನಮ್ಮ ಮೇಲೆ ಕರುಣೆ ತೋರಿಸಿ ನಿರುದ್ಯೋಗಿಗಳಾದ ನಮಗೆ ಒಂದು ದಾರಿ ತೋರಿಸಬೇಕೆಂದು. ತಮ್ಮಲ್ಲಿ ಮತ್ತೊಮ್ಮೆ ಮಗದೊಮ್ಮೆ ಕೇಳಿಕೊಳ್ಳುತ್ತೇನೆ.
    ಧನ್ಯವಾದಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X