ಮಣಿಪುರ ಹಿಂಸಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಶನಿವಾರದಂದು ಲ್ಯಾಮ್ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಟೆಕ್ಚಾಮ್‌ನಲ್ಲಿ ಈ ಘಟನೆ ನಡೆದಿದೆ. ಆರ್‌ಕೆ ಪೃಥಿಬಿ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿಯ ಕಣ್ಣಿಗೆ ಬಟ್ಟೆಯನ್ನು ಕಟ್ಟಿ, ಆತನ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿ, ಪಾಯಿಂಟ್-ಬ್ಲಾಂಕ್ ರೇಂಜ್‌ನಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ನಿಷೇಧಿತ ಸಂಘಟನೆ, ಕೆಸಿಪಿ (ಪ್ರಗತಿಪರ) ಈ ಮರಣದಂಡನೆ-ಶೈಲಿಯ ಕೊಲೆಯ ಹೊಣೆಗಾರಿಕೆಯನ್ನು ವಹಿಸಿಕೊಂಡಿದೆ. ಆರ್‌ಕೆ ಪೃಥಿಬಿ ಸಿಂಗ್ ಭದ್ರತಾ ಪಡೆಗಳಿಗಾಗಿ ಗೂಢಚಾರಿಕೆ ಮಾಡುತ್ತಿದ್ದಾನೆ ಎಂಬ ಕಾರಣಕ್ಕೆ ಈ ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಶಂಕಿತ ಬಂಡುಕೋರರ ಹೊಂಚುದಾಳಿ; ಸಿಆರ್‌ಪಿಎಫ್ ಯೋಧ ಹುತಾತ್ಮ
ಪೃಥಿಬಿ ಸಿಂಗ್ ಈ ಹಿಂದೆ ಉಗ್ರಗಾಮಿಯಾಗಿದ್ದು, ಶರಣಾಗಿ ಪಡೆಗಳಿಗೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಕೆಸಿಪಿ ತಿಳಿಸಿದೆ.
ಈ ನಡುವೆ ಕಾಕ್ಚಿಂಗ್ ಜಿಲ್ಲೆಯ ತೇಜ್‌ಪುರ ಮಖಾ ಲೈಕೈಯಿಂದ ನಿಷೇಧಿತ ಕೆಸಿಪಿ (ತೈಬಂಗಾನ್‌ಬಾ) ಉಗ್ರನೊಬ್ಬನನ್ನು ಬಂಧಿಸಲಾಗಿದೆ. ನಿಂಗ್‌ತೌಜಮ್ ಆಶಾಕುಮಾರ್ ಮೈತಿ (33) ಸುಲಿಗೆ ಚಟುವಟಿಕೆಗಳಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.