ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತದ ಒಲಿಂಪಿಕ್ ಕ್ರೀಡಾಪಟುಗಳು ಯಶಸ್ಸುಗಳಿಸುವ ಸಲುವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ(ಬಿಸಿಸಿಐ) ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಸಿ)ಗೆ 8.5 ಕೋಟಿ ರೂ. ನೆರವನ್ನು ನೀಡಿದೆ. 8.5 ಕೋಟಿ ನೆರವು ನೀಡಿರುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ದೃಢಪಡಿಸಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಜಯ್ ಶಾ “2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅಸಮಾನ್ಯ ಕ್ರೀಡಾಪಟುಗಳನ್ನು ಬೆಂಬಲಿಸಲು ಬಿಸಿಸಿಐನಿಂದ ಸಹಾಯ ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. ಅಭಿಯಾನಕ್ಕಾಗಿ ಐಒಸಿಗೆ ನಾವು 8.5 ಕೋಟಿ ರೂ. ಒದಗಿಸುತ್ತಿದ್ದೇವೆ. ನಮ್ಮ ಸಂಪೂರ್ಣ ತಂಡಕ್ಕೆ ನಾನು ಶುಭ ಹಾರೈಸುತ್ತೇನೆ. ಭಾರತವನ್ಬು ಹೆಮ್ಮೆ ಪಡುವಂತೆ ಮಾಡಿ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಂಬಲ್ಡನ್ ಛಾಂಪಿಯನ್ ಕಾರ್ಲೋಸ್ ಅಲ್ಕರಾಜ್ – ವಿಶ್ವ ಟೆನಿಸ್ ಯುಗದ ಅದ್ಭುತ ಪ್ರತಿಭೆ
ಜು.26ರಿಂದ ಆರಂಭವಾಗುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದಿಂದ 70 ಪುರುಷರು ಹಾಗೂ 47 ಮಹಿಳೆಯರು ಸೇರಿ ಒಟ್ಟು 117 ಮಂದಿ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಒಲಿಂಪಿಕ್ಸ್ ಆಗಸ್ಟ್ 11ರವರೆಗೂ ನಡೆಯಲಿದೆ.
ಭಾರತವು ಕಳೆದ ಬಾರಿಯ ಟೊಕಿಯಾ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕವನ್ನು ಜಯಿಸಿತ್ತು.