ಕಾವಡ್ ಯಾತ್ರೆಯ ಮಾರ್ಗದಲ್ಲಿರುವ ತಿನಿಸುಗಳ ಸ್ಟಾಲ್ಗಳ ಮಾಲೀಕರು ಸ್ಟಾಲ್ನಲ್ಲಿ ತಮ್ಮ ಹೆಸರನ್ನು ಪ್ರದರ್ಶಿಸಬೇಕು ಎಂಬ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳ ಆದೇಶದ ವಿರುದ್ಧವಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇಂತಹ ಆದೇಶಗಳು ಸಮುದಾಯಗಳ ನಡುವಿನ ವೈಷಮ್ಯವನ್ನು ಉಲ್ಬಣಗೊಳಿಸುತ್ತವೆ ಎಂದು ಅಭಿಪ್ರಾಯಿಸಿರುವ ಮಹುವಾ ಮೊಯಿತ್ರಾ ಉಭಯ ರಾಜ್ಯ ಸರ್ಕಾರಗಳು ಹೊರಡಿಸಿದ ಆದೇಶಗಳಿಗೆ ತಡೆಯಾಜ್ಞೆ ನೀಡುವಂತೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಅರ್ಜಿಯನ್ನು ಇನ್ನೂ ವಿಚಾರಣೆಗೆ ತೆಗೆದುಕೊಂಡಿಲ್ಲ.
ಯಾತ್ರಾರ್ಥಿಗಳ ಆಹಾರಕ್ರಮದ ಆಯ್ಕೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಮಾಲೀಕರ ಹೆಸರುಗಳನ್ನು ಮತ್ತು ಅವರ ಸಿಬ್ಬಂದಿಯ ಹೆಸರನ್ನು ಬಹಿರಂಗಪಡಿಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಸರ್ಕಾರಗಳ ವಾದವು ಬರೀ ನೆಪವಾಗಿದೆ. ಇದು ನೇರವಾಗಿ ಧಾರ್ಮಿಕ ಗುರುತನ್ನ ಬಹಿರಂಗಪಡಿಸುವ ಉದ್ದೇಶವಾಗಿದೆ ಎಂದು ಟಿಎಂಸಿ ನಾಯಕಿ ವಾದಿಸಿದ್ದಾರೆ.
ಮುಸ್ಲಿಂ ಅಂಗಡಿ ಮಾಲೀಕರು ಮತ್ತು ಕಾರ್ಮಿಕರ ಮೇಲೆ ಸಾಮಾಜಿಕವಾಗಿ ಜಾರಿಗೊಳಿಸಲಾದ ಆರ್ಥಿಕ ಬಹಿಷ್ಕಾರವನ್ನು ಸೃಷ್ಟಿಸಲು ಮತ್ತು ಅವರ ಜೀವನೋಪಾಯವನ್ನು ಕಳೆದುಕೊಳ್ಳುವಂತೆ ಮಾಡಲು ಈ ಆದೇಶವನ್ನು ನೀಡಲಾಗಿದೆ ಎಂದು ಅರ್ಜಿಯಲ್ಲಿ ಸಂಸದೆ ಆರೋಪಿಸಿದ್ದಾರೆ.
ಸೋಮವಾರ ಶ್ರಾವಣ ತಿಂಗಳ ಆರಂಭವಾಗಲಿದ್ದು ಇಂದೇ ಕಾವಡ್ ಯಾತ್ರೆಯು ಆರಂಭವಾಗಲಿದೆ. ಹಲವಾರು ರಾಜ್ಯಗಳಲ್ಲಿ ಈ ಯಾತ್ರೆಗೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಸಮಯದಲ್ಲಿ ಲಕ್ಷಾಂತರ ಶಿವ ಭಕ್ತರು ಹರಿದ್ವಾರದಲ್ಲಿ ಗಂಗಾನದಿಯಿಂದ ಪವಿತ್ರ ನೀರನ್ನು ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಾರೆ. ಜುಲೈ 22ರಿಂದ ಆಗಸ್ಟ್ 19ರವರೆಗೆ, ಶಿವನ ಆರಾಧನೆ ಮಾಡಲಾಗುತ್ತದೆ.
ಇದನ್ನು ಓದಿದ್ದೀರಾ? ಕಾವಡ್ ಯಾತ್ರೆ ವೇಳೆ ಅಂಗಡಿ ಮಾಲೀಕರ ಹೆಸರುಳ್ಳ ಫಲಕ ಹಾಕಲು ಆದೇಶ; ‘ಸಂವಿಧಾನದ ಮೇಲಿನ ದಾಳಿ’ ಎಂದ ಪ್ರಿಯಾಂಕಾ
ಈ ಕಾವಡ್ ಯಾತ್ರೆ ನಡೆಯುವ ಮಾರ್ಗದಲ್ಲಿರುವ ಎಲ್ಲಾ ಅಂಗಡಿಗಳ ಮಾಲೀಕರ ಹೆಸರನ್ನು ಪ್ರದರ್ಶಿಸಲು ಮುಜಫರ್ನಗರ ಪೊಲೀಸರು ಆದೇಶ ನೀಡಿದ ಕೆಲವು ದಿನಗಳ ನಂತರ, ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ರಾಜ್ಯಾದ್ಯಂತ ಈ ವಿವಾದಾತ್ಮಕ ಆದೇಶವನ್ನು ವಿಸ್ತರಿಸಿದೆ. ಈ ಆದೇಶಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾವಡ್ ಯಾತ್ರೆಯಲ್ಲಿ ಜನರಿಗೆ ಆಹಾರದ ಆಯ್ಕೆಯನ್ನು ಮಾಡಲು ಸುಲಭವಾಗಬೇಕಾದರೆ ಸಸ್ಯಾಹಾರಿ, ಮಾಂಸಹಾರಿ, ಹಲಾಲ್, ಜಟ್ಕಾ ಈ ರೀತಿ ಆಹಾರ ಪದ್ಧತಿಯ ಉಲ್ಲೇಖ ಮಾಡಬಹುದು. ಅದರ ಬದಲಾಗಿ ಮಾಲೀಕರ, ಕೆಲಸಗಾರರ ಹೆಸರು ಹಾಕುವುದು ಮುಸ್ಲಿಮರ ವಿರುದ್ಧ ಸಾಮಾಜಿಕ ಆರ್ಥಿಕ ಬಹಿಷ್ಕಾರ ನಡೆಸುವ ಹುನ್ನಾರ ಎಂದು ವಿಪಕ್ಷಗಳು ಹೇಳಿದೆ.
🧵 Breaking News
MP Mahua Moitra has gone to the Supreme Court and filed a petition against the order to install name plates of shopkeepers on the route of Kanwad Yatra in UP.
This is a good news, the decision which creates division in the society should be withdrawn.
Kudos… pic.twitter.com/gkEfUOzBy6
— Harsh Tiwari (@harsht2024) July 22, 2024