ಮೈಕ್ರೋಸಾಫ್ಟ್ ಬಳಿಕ ಈಗ ಭಾರತದಲ್ಲಿ ಕೆಲವು ಬಳಕೆದಾರರಿಗೆ ಯೂಟ್ಯೂಬ್ ಡೌನ್ ಆಗಿದ್ದು ಕೆಲವು ಯೂಟ್ಯೂಬ್ ಬಳಕೆದಾರರಿಗೆ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಯೂಟ್ಯೂಬ್ ಅಪ್ಲಿಕೇಶನ್, ವೆಬ್‌ಸೈಟ್ ಬಳಸುವಾಗ ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡುವಾಗ ಸಮಸ್ಯೆ ಎದುರಾಗಿದೆ ಎಂದು ವರದಿಯಾಗಿದೆ.
ಸೋಮವಾರ ಮಧ್ಯಾಹ್ನ 1.30 ಗಂಟೆಯಿಂದ ಯೂಟ್ಯೂಬ್‌ನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದ್ದು ಮಧ್ಯಾಹ್ನ 3.15 ಗಂಟೆ ವೇಳೆಗೆ ಹಲವಾರು ಮಂದಿ ಯೂಟ್ಯೂಬ್ ಬಳಕೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್‌ಗಳನ್ನು ಹಂಚಿಕೊಂಡಿದ್ದಾರೆ.
ವೆಬ್‌ಸೈಟ್‌ನ ಪ್ರಕಾರ ಶೇಕಡ 43ರಷ್ಟು ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಶೇಕಡ 33ರಷ್ಟು ಬಳಕೆದಾರರಿಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಶೇಕಡ 23ರಷ್ಟು ಬಳಕೆದಾರರಿಗೆ ಯೂಟ್ಯೂಬ್ ವೆಬ್‌ಸೈಟ್‌ನಲ್ಲಿ ಸಮಸ್ಯೆ ಕಂಡುಬಂದಿದೆ.
Me right now wanting upload a good Short but sadly YouTube is down 🫡😭 pic.twitter.com/5cViRp3gPi
— RudiTheFlopper (@RudiTheFlopper1) July 22, 2024
ಪ್ರಸ್ತುತ ಯೂಟ್ಯೂಬ್‌ನಲ್ಲಿ ಯಾವ ಸಮಸ್ಯೆ ಉಂಟಾಗಿದೆ ಎಂಬುವುದು ತಿಳಿದುಬಂದಿಲ್ಲ. ಈ ಬಗ್ಗೆ ಯೂಟ್ಯೂಬ್ ಸಪೋರ್ಟ್ ಪೇಜ್‌ನಲ್ಲಿ ಅಥವಾ ಸಾಮಾಜಿಕ ಮಾಧ್ಯಮ ಚಾನಲ್‌ಗಳಲ್ಲಿ ಯಾವುದೇ ವರದಿ ಮಾಡಲಾಗಿಲ್ಲ.
ಯೂಟ್ಯೂಬ್‌ನಲ್ಲಿ ಸಮಸ್ಯೆಯನ್ನು ಎದುರಿಸುತ್ತಿರುವ ನೆಟ್ಟಿಗರು ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. “ವಿಡಿಯೋ ಅಪ್‌ಲೋಡ್ ಮಾಡಿದ ಬಳಿಕ ಅಪ್‌ಲೋಡ್ ಫೀಡ್‌ನಲ್ಲಿ (sic) ವಿಡಿಯೋಗಳು ಕಾಣಿಸುತ್ತಿಲ್ಲ, ಆದರೆ ಅಪ್‌ಲೋಡ್ ಆಗಿದೆ” ಎಂದು ಹೇಳಿದರೆ, ಇನ್ನು ಕೆಲವು ನೆಟ್ಟಿಗರು “ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ” ಎಂದಿದ್ದಾರೆ. ಸದ್ಯ ಎಕ್ಸ್‌ನಲ್ಲಿ (ಟ್ವಿಟ್ಟರ್) ಮೀಮ್ಸ್‌ಗಳು ಹರಿದಾಡುತ್ತಿದೆ.
Apparently YouTube is down right now. When I try to upload a YouTube Short it doesn’t appear on YouTube Studio or on my Channel. It just disappears.
this is my problem or all youtube creator #youtubedown pic.twitter.com/xB8I3EEFpk
— Rakesh Singh (@satyug20201) July 22, 2024
For those wondering why Studio is down. It’s a worldwide problem I was talking to @TeamYouTube on a chat and they said it’s a known problem and they are working on a fix. #youtubestudio #YouTube #youtubedown pic.twitter.com/saxY2sz2pD
— MiniMasterGG (@MiniMasterGG) July 22, 2024