ಡ್ರಗ್ಸ್ ಪ್ರಕರಣದಲ್ಲಿ ಗುಜರಾತ್‌ನ ಸೂರತ್ ಮೂಲಕ ವ್ಯಕ್ತಿಯೊಬ್ಬನನ್ನು ಬಂಧಸಿಲಾಗಿದೆ. ಆತನನ್ನು ವಿಕಾಸ್ ಅಹಿರ್ ಎಂದು ಗುರುತಿಸಲಾಗಿದ್ದು, ಆತ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘವಿ, ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿಯ ಹಲವಾರು ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾದ ಡ್ರಗ್ ಪ್ಲೆಡರ್, ಆರೋಪಿ ವಿಕಾಸ್ ಅಹಿರ್ ಬಂಧನದ ನಂತರ ಗುಜರಾತ್ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿದೆ. ಆತ ಬಿಜೆಪಿಯ ಮುಂಚೂಣಿ ಕಾರ್ಯಕರ್ತ ಎಂದು ಕಾಂಗ್ರೆಸ್ ಆರೋಪಿಸಿದೆ.
ಆರೋಪಕ್ಕೆ ಪ್ರತಿಕ್ರಿಯಿಸಿರುವ ಇಜೆಪಿ, “ಡ್ರಗ್ ಪೆಡ್ಲರ್‌ನ ಬಂಧನವು ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಪೊಲೀಸರು ಡ್ರಗ್ಸ್ ವಿಷಯದಲ್ಲಿ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ. ತಪ್ಪಿತಸ್ಥರ ವಿರುದ್ಧ ಅವರ ರಾಜಕೀಯ ಸಂಬಂಧವನ್ನು ಲೆಕ್ಕಿಸದೆ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಿದೆ.
સુરતમાં 50 લાખના MD ડ્રગ્સ સાથે ભાજપનો એક હોદ્દેદાર પકડાયો છે.
ભાજપના નેતાઓની નાક નીચે જ ડ્રગ્સની હેરાફેરી થાય છે?
શું કમલમમાં અહીંયાથી પણ કમિશન જતું હશે? pic.twitter.com/BT2aaLEr8M
— Gujarat Congress (@INCGujarat) July 22, 2024
“ಖಚಿತ ಮಾಹಿತಿಯ ಮೇರೆಗೆ ಸೂರತ್ ಪೊಲೀಸರು ಸೋಮವಾರ, ಸಲಾಬತ್‌ಪುರ ಪ್ರದೇಶದಲ್ಲಿರುವ ಹೋಟೆಲ್ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 35.49 ಲಕ್ಷ ರೂಪಾಯಿ ಮೌಲ್ಯದ 910 ಗ್ರಾಂ ಮೆಫೆಡ್ರೋನ್ ಡ್ರಗ್‌ಅನ್ನು ವಶಪಡಿಸಿಕೊಂಡಿದ್ದಾರೆ” ಎಂದು ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಾಜಸ್ಥಾನದ ಉದಯಪುರ ನಿವಾಸಿ ಚೇತನ್ ಶಾಹು ಮತ್ತು ಸೂರತ್‌ನ ಇಬ್ಬರು – ಅನಿಷ್ಖಾನ್ ಪಠಾಣ್ ಮತ್ತು ವಿಕಾಸ್ ಅಹಿರ್ ಎಂದು ಗುರುತಿಸಲಾಗಿದೆ.
“ಮಾದಕ ವ್ಯಸನಿಗಳಿಗೆ ಪಾನ್ ಮತ್ತು ಐಸ್‌ಕ್ರೀಂ ಪಾರ್ಲರ್‌ಗಳ ಮೂಲಕ ಪಠಾಣ್ ಮತ್ತು ಅಹಿರ್ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದರು. ಇವರಿಬ್ಬರಿಗೂ ಶಾಹು ಎಂಬಾತ ಮಾದಕವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ” ಎಂದು ಗೆಹ್ಲೋಟ್ ಹೇಳಿದ್ದಾರೆ.
ಅಹಿರ್‌ನ ರಾಜಕೀಯ ಸಂಬಂಧದ ಬಗ್ಗೆ ಮಾತನಾಡಿರುವ ಗೆಹ್ಲೋಟ್, “ಆರೋಪಿ ಅಹಿರ್ ಒಬ್ಬ ರೌಡಿಶೀಟರ್. ಅಹಿರ್ ಈಗಾಗಲೇ ಅಪಹರಣ, ಗಲಭೆ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಆರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಇಂತಹ ಜನರು ತಮ್ಮ ಕಾನೂನುಬಾಹಿರ ಚಟುವಟಿಕೆಗಳನ್ನು ಮರೆಮಾಚಲು ರಾಜಕೀಯ ಪಕ್ಷ ಅಥವಾ ಪ್ರಭಾವಿ ವ್ಯಕ್ತಿಗಳೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾರೆ” ಎಂದು ಹೇಳಿದ್ದಾರೆ.
ಅಹಿರ್ ಬಂಧನದ ನಂತರ, ಕಾಂಗ್ರೆಸ್‌ನ ಹಲವು ನಾಯಕರು ಕೇಂದ್ರ ಸಚಿವ ಸಾಂಘವಿ, ಸಂಸದ ತೇಜಸ್ವಿ ಸೂರ್ಯ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಅಹಿರ್ ಇರುವ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
He is Vikas Ahir, an active BJP-RSS member & close aid of several BJP leaders
He was an Anti-Drug campaigner & even used to tweet against drugs
Today he got arrested by Surat Police for drugs smuggling 🤣🤣🤣
Gems of BJP & RSS 😂👏 pic.twitter.com/0PcxHUhE0g
— Ankit Mayank (@mr_mayank) July 22, 2024
ಅಹಿರ್ ಬಹಳ ಹಿಂದಿನಿಂದಲೂ ಯೋಗಿ ಆದಿತ್ಯನಾಥ್ ಅವರ ‘ಹಿಂದೂ ಯುವ ವಾಹಿನಿ’ ಸಂಘಟನೆಯ ಗುಜರಾತ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಸ್ಲಾಂ ಸೈಕಲ್‌ವಾಲಾ ಹೇಳಿದ್ದಾರೆ.
ಅಹಿರ್ ಬಿಜೆಪಿಯ ಸದಸ್ಯ ಎಂದು ಆರೋಪಿಸಿರುವ ಕಾಂಗ್ರೆಸ್, ಗಾಂಧಿನಗರದಲ್ಲಿರುವ ಬಿಜೆಪಿಯ ರಾಜ್ಯ ಪ್ರಧಾನ ಕಚೇರಿ ‘ಕಮಲಂ’ನಲ್ಲಿ ಅಹಿರ್ ಬಿಜೆಪಿಯ ಹಿರಿಯ ನಾಯಕರಿಗೆ ಕುಳಳಿತಿರುವ ಚಿತ್ರವನ್ನು ಹಂಚಿಕೊಂಡಿದೆ.
ಇನ್ನು, ಬಂಧನದ ಬಗ್ಗೆ ಹೇಳಿಕೆ ನೀಡಿರುವ ಗುಜರಾತ್ ಬಿಜೆಪಿಯ ಮಾಧ್ಯಮ ಸಂಯೋಜಕ ಯಜ್ಞೇಶ್ ದವೆ, “ಅಹಿರ್ ಬಂಧನವು ಬಿಜೆಪಿ ಸರ್ಕಾರ ಯಾರನ್ನೂ ಬಿಡುವುದಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಬಿಜೆಪಿ ಸರ್ಕಾರಕ್ಕೆ, ಯಾರೇ ಅಪರಾಧಿಯಾಗಿದ್ದರೂ ಅವರ ರಾಜಕೀಯ ಸಂಬಂಧವು ಲೆಕ್ಕಕಿಲ್ಲ. ನಾವು ಯಾರನ್ನೂ ರಕ್ಷಿಸಲು ಪ್ರಯತ್ನಿಸುವುದಿಲ್ಲ. ಅದಕ್ಕಾಗಿಯೇ ಕಳೆದ ಐದು ವರ್ಷಗಳಲ್ಲಿ ಗುಜರಾತ್‌ನಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಸುಮಾರು 3,500 ವ್ಯಕ್ತಿಗಳನ್ನು ಬಂಧಿಸಲಾಗಿದೆ” ಎಂದು ಹೇಳಿದ್ದಾರೆ.