ಸುಪ್ರೀಂ ಕೋರ್ಟ್‌ನಲ್ಲಿ ನೀಟ್- ಯುಜಿ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಹಿರಿಯ ನ್ಯಾಯವಾದಿ ಮ್ಯಾಥ್ಯೂಸ್ ನೆದುಂಪಾರ ವಿರುದ್ಧ ಕಠಿಣ ಶಬ್ಧಗಳಲ್ಲಿ ವಾಗ್ದಾಳಿ ನಡೆಸಿದ ಘಟನೆ ಇಂದು ನಡೆಯಿತು.
ನೀಟ್ ಯುಜಿ ಅರ್ಜಿದಾರರಲ್ಲಿ ಒಬ್ಬರಾಗಿದ್ದ ಮ್ಯಾಥ್ಯೂಸ್ ನೆದುಂಪಾರ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಪದೇ ಪದೇ ಅಡ್ಡಿ ಪಡಿಸುತ್ತಿದ್ದರು. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಆರಂಭದಲ್ಲಿ ಹೂಡ ಅವರ ವಾದ ಮುಗಿದ ನಂತರ ಮಾತನಾಡುವಂತೆ ಮ್ಯಾಥ್ಯೂಸ್ ಅವರಲ್ಲಿ ಮನವಿ ಮಾಡಿದ್ದರು. ಆದಾಗ್ಯೂ ನೆದುಂಪಾರ ಅವರು ತಾವು ಹಿರಿಯರಾಗಿದ್ದು ತಮಗೆ ಆದ್ಯತೆ ನೀಡಬೇಕೆಂದು ಅಡ್ಡಿಪಡಿಸುತ್ತಿದ್ದರು.
”ನಾನು ನಿಮ್ಮ ಪ್ರಶ್ನೆಗೆ ಉತ್ತರ ನೀಡುತ್ತೇನೆ. ಇಲ್ಲಿರುವ ಎಲ್ಲ ವಕೀಲರಲ್ಲಿ ನಾನು ಅತ್ಯಂತ ಹಿರಿಯ. ನಾನು ನ್ಯಾಯಾಲಯದ ಸಲಹೆಗಾರ” ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶರು, ”ಇಲ್ಲ. ನಾನು ಯಾವುದೇ ನ್ಯಾಯಾಲಯದ ಸಲಹೆಗಾರರನ್ನು ನೇಮಿಸಿಕೊಂಡಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | RSS ನಿಷೇಧ ತೆರವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆಯೇ?
ಇದಕ್ಕೆ ಪದೇ ಪದೆ ಮಾತು ಬೆಳೆಸುತ್ತಿದ್ದಾಗ ಕೋಪಗೊಂಡ ಸಿಜೆಐ ಚಂದ್ರಚೂಡ್, ”ಪ್ರಶ್ನೆಗೆ ನಿಮ್ಮ ಉತ್ತರ ಬೇಕಾಗಿಲ್ಲ. ಕುಳಿತುಕೊಳ್ಳಿ. ಇಲ್ಲದಿದ್ದರೆ ಕೋರ್ಟ್‌ನಿಂದ ನಿಮ್ಮ ಹೊರ ಹಾಕಬೇಕಾಗುತ್ತದೆ” ಎಂದರು.
ಇದಕ್ಕೆ ಉತ್ತರಿಸಿದ ಮ್ಯಾಥ್ಯೂಸ್ ”ನೀವು ನನಗೆ ಗೌರವ ನೀಡದಿದ್ದರೆ, ನಾನಾಗಿಯೇ ತೆರಳುತ್ತೇನೆ” ಎಂದರು.
ಇಬ್ಬರ ನಡುವೆ ಮಾತು ಮುಂದುವರೆದು ಮ್ಯಾಥ್ಯೂಸ್ ಹೂಡಾ ವಿಚಾರಣೆ ಸಂದರ್ಭದಲ್ಲಿ ಅಡ್ಡಿಪಡಿಸುವುದು ಹೆಚ್ಚಾಯಿತು. ಇದಕ್ಕೆ ತೀವ್ರ ಕೋಪಗೊಂಡ ಸಿಜೆಐ ಚಂಡ್ರಚೂಡ್ ”ಭದ್ರತಾ ಸಿಬ್ಬಂದಿಯನ್ನು ಕರೆಯಿರಿ. ನೆದುಂಪಾರ ಅವರನ್ನು ಕೋರ್ಟ್‌ನಿಂದ ಹೊರಗೆ ಹಾಕಿ” ಎಂದು ಕಠಿಣ ಮಾತುಗಳಲ್ಲಿ ಹೇಳಿದರು.
ಇದಕ್ಕೆ ಅಸಮಾಧಾನಗೊಂಡ ನೆದುಂಪಾರ, ”ನಾನು ತೆರಳುತ್ತೇನೆ. ಇದು ಸರಿಯಲ್ಲ” ಎಂದು ಹೇಳಿದರು.
ಮಾತು ಮುಂದುವರೆದು ವಾಗ್ವಾದ ಹೆಚ್ಚಾದಾಗ, ”ನೀವು ಹೀಗೆ ಮಾತನಾಡುವ ಅಗತ್ಯವಿಲ್ಲ. ನೀವೀಗ ಇಲ್ಲಿಂದ ಹೊರಡಬಹುದು. ಕಳೆದ 24 ವರ್ಷಗಳಿಂದ ನಾನು ನ್ಯಾಯಾಂಗ ವ್ಯವಸ್ಥೆಯಲ್ಲಿದ್ದೇನೆ. ವಕೀಲರು ಈ ಕೋರ್ಟ್ ಹೇಗೆ ನಡೆಯಬೇಕು ಎಂದು ತಿಳಿಸೋದಕ್ಕೆ ನಾನು ಬಿಡೋದಿಲ್ಲ” ಎಂದರು.
ಇದಕ್ಕೆ ಮ್ಯಾಥ್ಯೂಸ್, ನಾನು ಕೂಡ 1979ರಿಂದಲೂ ಈ ಕೋರ್ಟ್‌ಅನ್ನು ನೋಡುತ್ತಿದ್ದೇನೆ ಎಂದು ಎದುರು ಉತ್ತರಿಸಿದರು.
ನೆದುಂಪಾರ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರೊಂದಿಗೆ ವಾಗ್ವಾದ ನಡೆಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಮಾರ್ಚ್‌ನಲ್ಲಿ ಚುನಾವಣಾ ಬಾಂಡ್‌ಗಳ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಾಧೀಶರು ಅದರ ವಿರುದ್ಧ ಎಚ್ಚರಿಕೆ ನೀಡಿದ್ದರೂ, ನೆದುಂಪಾರ ಅವರು ವಿಚಾರಣೆಗೆ ಅಡ್ಡಿಪಡಿಸಿದರು.
‘ನನ್ನ ಮೇಲೆ ಕೂಗಾಡಬೇಡಿ’ ಎಂದು ಮುಖ್ಯ ನ್ಯಾಯಮೂರ್ತಿ ನೆಡುಂಪಾರ ಅವರಿಗೆ ಹೇಳಿದ್ದರು. ”ಇದು ಹೈಡ್ ಪಾರ್ಕ್ ಕಾರ್ನರ್ ಮೀಟಿಂಗ್ ಅಲ್ಲ, ನೀವು ನ್ಯಾಯಾಲಯದಲ್ಲಿದ್ದೀರಿ, ನೀವು ಅರ್ಜಿಯನ್ನು ಸ್ಥಳಾಂತರಿಸಲು, ಅರ್ಜಿ ಸಲ್ಲಿಸಲು ಬಯಸುತ್ತೀರಿ, ನೀವು ಮುಖ್ಯ ನ್ಯಾಯಮೂರ್ತಿಯಾಗಿ ನನ್ನ ನಿರ್ಧಾರವನ್ನು ಪಡೆದಿದ್ದೀರಿ, ನಾವು ನಿಮ್ಮ ಮಾತನ್ನು ಕೇಳುತ್ತಿಲ್ಲ, ನೀವು ಅರ್ಜಿ ಸಲ್ಲಿಸಲು ಬಯಸಿದರೆ, ಅದನ್ನು ಇಮೇಲ್‌ನಲ್ಲಿ ಸಲ್ಲಿಸಿ. ಅದು ಈ ನ್ಯಾಯಾಲಯದ ನಿಯಮವಾಗಿದೆ” ಎಂದು ಹೇಳಿದ್ದರು.
न्याय के मंदिर में आपसी झगड़ा
आपको अभी मैं बाहर निकलवा दूंगा, सिक्योरिटी को बुलाकर बाहर निकलवा दूंगा" CJI चंद्रचूड़
"1979 से मैं वकालत कर रहा हूं, आप ऐसा नहीं कर सकते, आप मुझे अपमानित कर रहे हैं" वकील मैथ्यू नेदुम्परा :#SupremeCourtOfIndia #CJIDYChandrachud #viralvideo pic.twitter.com/hBR2ZTPg6L
— Ram Tyagi Hindu (@RamTyagiHindu) July 23, 2024
CJI चंद्रचूड़ और सीनियर वकील में हुई जोरदार भिड़ंत।#SupremeCourt #NEET #CJIDYChandrachud pic.twitter.com/NgB4ScIsC5
— NewsNasha (@newsnasha) July 23, 2024