ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸುವ ಭರದಲ್ಲಿ ರಾಜ್ಯದ ಹಿತವನ್ನು ಕಡೆಗಣಿಸಿ ಮಾತನಾಡಿದ್ದಾರೆಂದು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಎಕ್ಸ್ ತಾಣದಲ್ಲಿ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಪೋಸ್ಟ್‌ಗೆ ನೆಟ್ಟಿಗರು ಅಲ್ಲೇ ಪ್ರತಿಕ್ರಿಯಿಸಿದ್ದು, ಶೆಟ್ಟಿ ಎಂಬುವರು, “ನೀವೂ ಒಬ್ಬ ಕನ್ನಡಿಗರಾ? ಕರ್ನಾಟಕಕ್ಕೆ ಚಿಪ್ಪು ಕೊಟ್ಟವ್ರೆ. ಏನೂ ಅನ್ಸಲ್ವಾ ನಿಮ್ಗೆ ಮತ್ತೆ ಪ್ರಾದೇಶಿಕ ಪಕ್ಷ ಅನ್ನೋ ನಾಟಕ ಬೇರೆ” ಎಂದು ಕುಟುಕಿದ್ದಾರೆ.
ಸಾಗರ್ ರವಿನಾಥ್ ಎಂಬುವರು ಪ್ರತಿಕ್ರಿಯಿಸಿ, “ಕರ್ನಾಟಕದಿಂದ ಆಯ್ಕೆಯಾಗಿ ಹೋದ ಸಂಸದರಿಂದ ಕರ್ನಾಟಕಕ್ಕೆ ನಯಾಪೈಸೆ ಉಪಯೋಗವಿದೆಯೇ? ಯಾರೇ ಆಯ್ಕೆಯಾಗಿ ಹೋದರೂ ದೆಹಲಿಯವರ ಕೈಗೊಂಬೆಗಳಾಗೋದನ್ನೇ ಕಂಡಿದ್ದೇವೆ ಹೊರತು ಎಂದೂ ಏನನ್ನೋ ಸಾಧಿಸಿಕೊಂಡು ಬರುವ ಚಾಣಾಕ್ಷತೆ ಕಾಣಲಿಲ್ಲ! ಇ ಪುರುಷಾರ್ಥಕ್ಕೆ ಮತದಾರರು ಎಷ್ಟೋ ದೂರ ಕ್ರಮಿಸಿ ಇವರಿಗೆ ಮತ ಹಾಕಬೇಕು. ಇದು ನಮ್ಮ ಕರ್ಮ!” ಎಂದು ಬೇಸರ ಹೊರಹಾಕಿದ್ದಾರೆ.
“ಕರ್ನಾಟಕಕ್ಕೆ ಬಜೆಟ್ ಇಂದ ಸಿಕ್ಕ ಅನುದಾನ ಹಾಗೂ ಅನುಕೂಲಗಳ ಒಂದು ಪಟ್ಟಿ ಮಾಡಿ ಟ್ವೀಟ್ ಮಾಡಿ ಎಚ್ ಡಿ ಕುಮಾರಸ್ವಾಮಿ ಅವರೇ” ಎಂದು ಲಕ್ಷ್ಮಣ್ ಶೆಟ್ಟಿ ಸಲಹೆ ನೀಡಿದ್ದಾರೆ.
“ಕರ್ನಾಟಕ ಜನರಿಗೆ ನೀವೇನು ತಗೋ ಬಂದಿದ್ದೀರಾ? ನಿಮ್ಮ ಸರ್ಕಾರದಿಂದ ಕರ್ನಾಟಕ ಜನರು ಹಗಲು ರಾತ್ರಿ ಸಂಪಾದನೆ ಮಾಡಿ ಟ್ಯಾಕ್ಸ್ ಅನ್ನು ಕೊಡ್ತಾರೆ ಅದಕ್ಕೆ ಕರ್ನಾಟಕ ಜನರಿಗೆ ಕೇಂದ್ರ ಸರ್ಕಾರ ಏನ್ ಮಾಡಿದೆ ಮತ್ತೆ ನೀವು ಕರ್ನಾಟಕ ಗೋಸ್ಕರ ಏನ್ ಕೇಳಿದಿರಾ?” ಎಂದು ಸಿ ಎಸ್ ಅನ್ಸರ್ ಬೇಗ್ ಪ್ರಶ್ನೆ ಮಾಡಿದ್ದಾರೆ.
“ಏನು ಅಣ್ಣಾ, ಇಷ್ಟುದ್ದ ಬರೆದುಕೊಂಡು ಇದ್ದೀರಾ, ತಾವು ಮುಖ್ಯಮಂತ್ರಿಗಳು ಆಗಿದ್ದಾಗ ಬಜೆಟ್ ಬಗ್ಗೆ ಏನೂ ವ್ಯಾಖ್ಯಾನ ಮಾಡಿದ್ರಿ ನೆನಪಿಸಿಕೊಳ್ಳಿ. ನಿಮ್ಮ ಸೀಟ್ ಗಟ್ಟಿ ಮಾಡಿಕೊಳ್ಳಲು ಇಷ್ಟೊಂದು ಓಲೈಕೆ ಬೇಡವಾಗಿತ್ತು. ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ ಅಂತ ಹೇಳಿ ಅಣ್ಣಾವ್ರೇ” ಎಂದು ಮುರುಳಿ ಎಂಬುವರು ಲೇವಡಿ ಮಾಡಿದ್ದಾರೆ.
“ಕರ್ನಾಟಕಕ್ಕೆ ಒಂದೇ ಒಂದು ಯೋಜನೆ ಮಾಡಿಸಿಕೊಳ್ಳಲು ನಿಮಗೆ ಸಾಧ್ಯವಾಗಲಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡಿದರೂ ಮೋದಿಯವರ ಹೊಗಳಿ ನಿಮ್ಮ ಋಣ ತೀರಿಸಿಕೊಳ್ಳುತ್ತಿದ್ದೀರಿ ಸಾರ್” ಎಂದು ವಿಜಯ್ ಕೃಷ್ಣ ಟೀಕಿಸಿದ್ದಾರೆ.
ಇದು “ವಿಕಸಿತ ಭಾರತ”ಅಲ್ಲ”ವಿನಾಶದ ಭಾರತ ಬಜೆಟ್”. ಯಾವ ದೇಶದಲ್ಲಿ ಕೃಷಿಕರು ನೆಮ್ಮದಿಯಿಂದ ಇರುತ್ತಾರೆ ಆದೇಶ ಸಂಪತ್ ಭರಿತವಾಗಿರುತ್ತದೆ. ಆದರೆ ರೈತರಿಗೆ ಶೂನ್ಯ ಬಜೆಟ್. ಬಿಜೆಪಿ ಒನ್-ರೈತರ ಅವನತಿ, ಬಿಜೆಪಿ ಟು-ಶವ ಪೆಟ್ಟಿಗೆ ನಿರ್ಮಾಣ, ಬಿಜೆಪಿ 3-ಶವಪೆಟ್ಟಿಗೆಗೆ ಮಳೆ. ರೈತರ ಜೀವನ ಮುಕ್ತಾಯ ಜಿ ಡಿ ಗೌಡರ್ ಪ್ರತಿಕ್ರಿಯೆ ನೀಡಿದ್ದಾರೆ.
“ನಾಡ ದ್ರೋಹಿ ಸರ್ಕಾರ ಕರ್ನಾಟಕದ ಹೆಸರನ್ನು ಸಹ ಪ್ರಸ್ತಾಪ ಮಾಡಲಿಲ್ಲ ನೀವು ಅವರನ್ನು ಈ ಮಟ್ಟಿಗೆ ಹೊಗಳಿ ಗುಲಾಮಗಿರಿ ಪ್ರದರ್ಶನ ಮಾಡ್ತಿರಲ್ಲ ನಿಮಗೆ ಏನು ಹೇಳಬೇಕು” ಎಂದು ಅಪ್ಪು ಎನ್ನೋರು ಕೆಣಕಿದ್ದಾರೆ.
ಏನೂ ಅಣ್ಣಾ ಇದು ಇಷ್ಟುದ್ದ ಬರೆದುಕೊಂಡು ಇದ್ದೀರಾ.. ತಾವು ಮುಖ್ಯಮಂತ್ರಿಗಳು ಆಗಿದ್ದಾಗ ಬಜೆಟ್ ಬಗ್ಗೆ ಏನೂ ವ್ಯಾಖ್ಯಾನ ಮಾಡಿದ್ರಿ ನೆನಪಿಸಿ ಕೊಳ್ಳಿ.ನಿಮ್ಮ ಸೀಟ್ ಗಟ್ಟಿ ಮಾಡಿಕೊಳ್ಳಲು ಇಷ್ಟೊಂದು ಓಲೈಕೆ ಬೇಡವಾಗಿತ್ತು. ಕರ್ನಾಟಕಕ್ಕೆ ಏನೂ ಕೊಟ್ಟಿದ್ದಾರೆ ಅಂತ ಹೇಳಿ ಅಣ್ಣಾವ್ರೇ. pic.twitter.com/clzfEAL0lq
— Muruli ® 🔥🔥 (@MuraliRamesh001) July 23, 2024
ಯಾರೇ ಕನ್ನಡಿಗ, ಕರ್ನಾಟಕದಲ್ಲಿ ವಾಸಿಸುತ್ತಿರುವವರಾಗಲಿ ಈ ಸಾರಿಯ ಕೇಂದ್ರದ ಬಡ್ಜೆಟ್ ನಾ ಸ್ವಾಗತಿಸಲಾಗದು, ಸ್ವಾಗತಿಸಲು ಅರ್ಹವೂ ಅಲ್ಲ. ಅಂದರಾಗಲಿ, ಅಂದರಂತೆ ನಟಿಸುವ ಸ್ವಾರ್ಥಿಗಳೂ ಇದನ್ನು ಸ್ವಾಗತಿಸುದಿಲ್ಲ. ಇವೆಲ್ಲಕ್ಕಿಂತ ಮಿಗಿಲಾದ ಕಪಟಿಗರು ಇದನ್ನು ಕೊಂಡಾಡುತ್ತಾರೆ ಮತ್ತು ಹೊಗಳುತ್ತಾರೆ.