ಕೇಂದ್ರ ಬಜೆಟ್‌ ಕುರಿತ ಕುಮಾರಸ್ವಾಮಿ ಪ್ರತಿಕ್ರಿಯೆಗೆ ‘ನೀವೂ ಒಬ್ಬ ಕನ್ನಡಿಗರಾ’ ಎಂದು ಪ್ರಶ್ನಿಸಿದ ನೆಟ್ಟಿಗರು

Date:

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಕೇಂದ್ರ ಬಜೆಟ್‌ ಬಗ್ಗೆ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸುವ ಭರದಲ್ಲಿ ರಾಜ್ಯದ ಹಿತವನ್ನು ಕಡೆಗಣಿಸಿ ಮಾತನಾಡಿದ್ದಾರೆಂದು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

- Advertisement -

ಎಕ್ಸ್‌ ತಾಣದಲ್ಲಿ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಪೋಸ್ಟ್‌ಗೆ ನೆಟ್ಟಿಗರು ಅಲ್ಲೇ ಪ್ರತಿಕ್ರಿಯಿಸಿದ್ದು, ಶೆಟ್ಟಿ ಎಂಬುವರು, “ನೀವೂ ಒಬ್ಬ ಕನ್ನಡಿಗರಾ? ಕರ್ನಾಟಕಕ್ಕೆ ಚಿಪ್ಪು ಕೊಟ್ಟವ್ರೆ. ಏನೂ ಅನ್ಸಲ್ವಾ ನಿಮ್ಗೆ ಮತ್ತೆ ಪ್ರಾದೇಶಿಕ ಪಕ್ಷ ಅನ್ನೋ ನಾಟಕ ಬೇರೆ” ಎಂದು ಕುಟುಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಸಾಗರ್‌ ರವಿನಾಥ್‌ ಎಂಬುವರು ಪ್ರತಿಕ್ರಿಯಿಸಿ, “ಕರ್ನಾಟಕದಿಂದ ಆಯ್ಕೆಯಾಗಿ ಹೋದ ಸಂಸದರಿಂದ ಕರ್ನಾಟಕಕ್ಕೆ ನಯಾಪೈಸೆ ಉಪಯೋಗವಿದೆಯೇ? ಯಾರೇ ಆಯ್ಕೆಯಾಗಿ ಹೋದರೂ ದೆಹಲಿಯವರ ಕೈಗೊಂಬೆಗಳಾಗೋದನ್ನೇ ಕಂಡಿದ್ದೇವೆ ಹೊರತು ಎಂದೂ ಏನನ್ನೋ ಸಾಧಿಸಿಕೊಂಡು ಬರುವ ಚಾಣಾಕ್ಷತೆ ಕಾಣಲಿಲ್ಲ! ಇ ಪುರುಷಾರ್ಥಕ್ಕೆ ಮತದಾರರು ಎಷ್ಟೋ ದೂರ ಕ್ರಮಿಸಿ ಇವರಿಗೆ ಮತ ಹಾಕಬೇಕು. ಇದು ನಮ್ಮ ಕರ್ಮ!” ಎಂದು ಬೇಸರ ಹೊರಹಾಕಿದ್ದಾರೆ.

“ಕರ್ನಾಟಕಕ್ಕೆ ಬಜೆಟ್ ಇಂದ ಸಿಕ್ಕ ಅನುದಾನ ಹಾಗೂ ಅನುಕೂಲಗಳ ಒಂದು ಪಟ್ಟಿ ಮಾಡಿ ಟ್ವೀಟ್ ಮಾಡಿ ಎಚ್‌ ಡಿ ಕುಮಾರಸ್ವಾಮಿ ಅವರೇ” ಎಂದು ಲಕ್ಷ್ಮಣ್‌ ಶೆಟ್ಟಿ ಸಲಹೆ ನೀಡಿದ್ದಾರೆ.

“ಕರ್ನಾಟಕ ಜನರಿಗೆ ನೀವೇನು ತಗೋ ಬಂದಿದ್ದೀರಾ? ನಿಮ್ಮ ಸರ್ಕಾರದಿಂದ ಕರ್ನಾಟಕ ಜನರು ಹಗಲು ರಾತ್ರಿ ಸಂಪಾದನೆ ಮಾಡಿ ಟ್ಯಾಕ್ಸ್ ಅನ್ನು ಕೊಡ್ತಾರೆ ಅದಕ್ಕೆ ಕರ್ನಾಟಕ ಜನರಿಗೆ ಕೇಂದ್ರ ಸರ್ಕಾರ ಏನ್ ಮಾಡಿದೆ ಮತ್ತೆ ನೀವು ಕರ್ನಾಟಕ ಗೋಸ್ಕರ ಏನ್ ಕೇಳಿದಿರಾ?” ಎಂದು ಸಿ ಎಸ್‌ ಅನ್ಸರ್‌ ಬೇಗ್‌ ಪ್ರಶ್ನೆ ಮಾಡಿದ್ದಾರೆ.

“ಏನು ಅಣ್ಣಾ, ಇಷ್ಟುದ್ದ ಬರೆದುಕೊಂಡು ಇದ್ದೀರಾ, ತಾವು ಮುಖ್ಯಮಂತ್ರಿಗಳು ಆಗಿದ್ದಾಗ ಬಜೆಟ್ ಬಗ್ಗೆ ಏನೂ ವ್ಯಾಖ್ಯಾನ ಮಾಡಿದ್ರಿ ನೆನಪಿಸಿಕೊಳ್ಳಿ. ನಿಮ್ಮ ಸೀಟ್ ಗಟ್ಟಿ ಮಾಡಿಕೊಳ್ಳಲು ಇಷ್ಟೊಂದು ಓಲೈಕೆ ಬೇಡವಾಗಿತ್ತು. ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ ಅಂತ ಹೇಳಿ ಅಣ್ಣಾವ್ರೇ” ಎಂದು ಮುರುಳಿ ಎಂಬುವರು ಲೇವಡಿ ಮಾಡಿದ್ದಾರೆ.

“ಕರ್ನಾಟಕಕ್ಕೆ ಒಂದೇ ಒಂದು ಯೋಜನೆ ಮಾಡಿಸಿಕೊಳ್ಳಲು ನಿಮಗೆ ಸಾಧ್ಯವಾಗಲಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡಿದರೂ ಮೋದಿಯವರ ಹೊಗಳಿ ನಿಮ್ಮ ಋಣ ತೀರಿಸಿಕೊಳ್ಳುತ್ತಿದ್ದೀರಿ ಸಾರ್” ಎಂದು ವಿಜಯ್‌ ಕೃಷ್ಣ ಟೀಕಿಸಿದ್ದಾರೆ.

ಇದು “ವಿಕಸಿತ ಭಾರತ”ಅಲ್ಲ”ವಿನಾಶದ ಭಾರತ ಬಜೆಟ್”. ಯಾವ ದೇಶದಲ್ಲಿ ಕೃಷಿಕರು ನೆಮ್ಮದಿಯಿಂದ ಇರುತ್ತಾರೆ ಆದೇಶ ಸಂಪತ್ ಭರಿತವಾಗಿರುತ್ತದೆ. ಆದರೆ ರೈತರಿಗೆ ಶೂನ್ಯ ಬಜೆಟ್. ಬಿಜೆಪಿ ಒನ್-ರೈತರ ಅವನತಿ, ಬಿಜೆಪಿ ಟು-ಶವ ಪೆಟ್ಟಿಗೆ ನಿರ್ಮಾಣ, ಬಿಜೆಪಿ 3-ಶವಪೆಟ್ಟಿಗೆಗೆ ಮಳೆ. ರೈತರ ಜೀವನ ಮುಕ್ತಾಯ ಜಿ ಡಿ ಗೌಡರ್‌ ಪ್ರತಿಕ್ರಿಯೆ ನೀಡಿದ್ದಾರೆ.

“ನಾಡ ದ್ರೋಹಿ ಸರ್ಕಾರ ಕರ್ನಾಟಕದ ಹೆಸರನ್ನು ಸಹ ಪ್ರಸ್ತಾಪ ಮಾಡಲಿಲ್ಲ ನೀವು ಅವರನ್ನು ಈ ಮಟ್ಟಿಗೆ ಹೊಗಳಿ ಗುಲಾಮಗಿರಿ ಪ್ರದರ್ಶನ ಮಾಡ್ತಿರಲ್ಲ ನಿಮಗೆ ಏನು ಹೇಳಬೇಕು” ಎಂದು ಅಪ್ಪು ಎನ್ನೋರು ಕೆಣಕಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ ವರದಿ ಬಿಚ್ಚಿಟ್ಟ ಮತದಾರರ ಕಣ್ಣೀರ ಕಥನ

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ...

SIR ಅಕ್ರಮ: ಲೋಕಸಭೆ, ವಿಧಾನಸಭೆಗಳ ವಿಸರ್ಜನೆಗೆ ಖರ್ಗೆ ಒತ್ತಾಯ; ತಕ್ಷಣ ಹೊಸ ಚುನಾವಣೆಗೆ ಆಗ್ರಹ

ಪ್ರಸ್ತುತ ದೇಶಾದ್ಯಂತ ನಡೆದಿರುವ ಹಾಗೂ ಮುಗಿದಿರುವ ಚುನಾವಣೆಗಳ ಸಿಂಧುತ್ವವನ್ನೇ ಪ್ರಶ್ನಿಸಿರುವ ಕಾಂಗ್ರೆಸ್...

ರಾಜ್ಯಕ್ಕೆ ₹3,705.30 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ತಂಡಕ್ಕೆ ಸಿಎಂ ಡಿಕೆಶಿ ಮನವಿ

ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ...