ಬಿಜೆಪಿ ನಾಯಕನೊಬ್ಬರು ದಾಖಲಿಸಿರುವ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಧ್ರುವ್ ರಾಠಿ ಅವರಿಗೆ ದೆಹಲಿ ಕೋರ್ಟ್ ಸಮನ್ಸ್ ನೀಡಿದೆ.
ಮುಂಬೈ ಬಿಜೆಪಿ ಘಟಕದ ವಕ್ತಾರರಾದ ಸುರೇಶ್ ಕರ್ಮಿಶಿ ನಕುವಾ ಅವರು ರಾಠಿ ಅವರ ಯೂಟ್ಯೂಬ್ ಚಾನಲ್‌ನ ಒಂದು ವಿಡಿಯೋ ‘ಹಿಂಸಾತ್ಮಕ ಹಾಗೂ ನಿಂದನೀಯ’ವಾಗಿದೆ ಎಂದು ದೂರು ದಾಖಲಿಸಿದ್ದಾರೆ.
ಜುಲೈ 19ರಂದು ಸಾಕೇತ್ ಕೋರ್ಟ್‌ನ ಜಿಲ್ಲಾ ನ್ಯಾಯಾಧೀಶರಾದ ಗುಂಜನ್ ಗುಪ್ತಾ ಅವರು ಸಮನ್ಸ್ ನೀಡಿದ್ದಾರೆ.
ಸುರೇಶ್ ಕರ್ಮಿಶಿ ನಕುವಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 6 ರಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆಯಲ್ಲಿ ಹಾಜರಾಗಬೇಕೆಂದು ಧ್ರುವ್ ರಾಠಿ ಅವರಿಗೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಪತ್ನಿ ಪಾಕಿಸ್ತಾನಿ, ದಾವೂದ್ ಬಂಗಲೆಯಲ್ಲಿ ವಾಸ ಎಂಬ ಆರೋಪಕ್ಕೆ ಧ್ರುವ್ ರಾಠಿ ತಕ್ಕ ಉತ್ತರ
ರಾಠಿ ಅವರು ತಮ್ಮ ವಿಡಿಯೋದಲ್ಲಿ ಸುಳ್ಳು ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಇವರ ವಿಡಿಯೋಗಳು ಹಿಂಸಾತ್ಮಕ ಹಾಗೂ ನಿಂದನೀಯ ಟ್ರೋಲ್‌ಗಳಾಗಿವೆ ಎಂದು ನಕುವಾ ಆರೋಪಿಸಿದ್ದಾರೆ.
ರಾಠಿ ಮಾಡಿರುವ ಆರೋಪದ ವಿಡಿಯೋದಲ್ಲಿ ಯಾವುದೇ ಸ್ಪಷ್ಟ ಉದ್ದೇಶವಿಲ್ಲ.ತಮ್ಮ ಘನತೆಯನ್ನು ಹಾಳು ಮಾಡುವ ಉದ್ದೇಶ ಮಾತ್ರ ಹೊಂದಿದೆ ಎಂದು ನಕುವಾ ತಿಳಿಸಿದ್ದಾರೆ.
ತಮ್ಮ ವಿರುದ್ಧ ಮಾಡಲಾದ ವಿಡಿಯೋ ಕುತಂತ್ರದಿಂದ ದೂಷಿಸಿ ರಚಿಸಲಾದ ವಿಡಿಯೋವಾಗಿದೆ. ತಮ್ಮ ಘನತೆಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುವ ಸ್ಪಷ್ಟ ಉದ್ದೇಶವನ್ನು ಹೊಂದಿದೆ. ವಿಡಿಯೋ ಸೃಷ್ಟಿಸಿರುವವರು ಸಮಾಜದಲ್ಲಿ ತಾವು ಸಂಪಾದಿಸಿರುವ ಗೌರವವನ್ನು ಹಾಳು ಮಾಡುವುದಾಗಿದೆ. ಇದು ತಮ್ಮ ವೈಯುಕ್ತಿಕ ಹಾಗೂ ವೃತ್ತಿ ಬದುಕಿನ ಜೀವನದ ಮೇಲೆ ದೂರಗಾಮಿ ಹಾಗೂ ಗಂಭೀರ ಪರಿಣಾಮಗಳನ್ನು ಉಂಟುಮಾಡಲಿದೆ ಎಂದು ನಕುವಾ ಆರೋಪಿಸಿದ್ದಾರೆ.