ರಾಷ್ಟ್ರಪತಿ ಭವನ ದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ದರ್ಬಾರ್ ಹಾಲ್ ಹಾಗೂ ಅಶೋಕ ಹಾಲ್‌ನ ಹೆಸರುಗಳನ್ನು ಪುನರ್ ನಾಮಕರಣಗೊಳಿಸಲಾಗಿದ್ದು, ಇವೆರಡನ್ನು ಕ್ರಮವಾಗಿ ಗಣತಂತ್ರ ಮಂಟಪ್ ಹಾಗೂ ಆಶೋಕ ಮಂಟಪ್ ಎಂದು ಬದಲಾಯಿಸಲಾಗಿದೆ. ರಾಷ್ಟ್ರಪತಿ ಭವನವು ಭಾತರದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಗಿದೆ.
ಎರಡು ಸಭಾಂಗಣಗಳ ಹೆಸರು ಬದಲಾವಣೆಗಳಿಂದ ಸಾರ್ವಜನಿಕರಿಗೆ ಹೆಚ್ಚು ಪ್ರವೇಶ ಸಿಗಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಅಲ್ಲದೆ ರಾಷ್ಟ್ರಪತಿ ಭವನದಲ್ಲಿ ಭಾರತೀಯ ಸಂಸ್ಕೃತಿಯ ಸಾಂಸ್ಕೃತಿಕ ಮೌಲ್ಯಗಳು ಹಾಗೂ ನೈತಿಕತೆಯನ್ನು ಪಸರಿಸುವ ನಿರಂತರ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ಇದಾಗಿದೆ ಎಂದು ರಾಷ್ಟ್ರಪತಿ ಭವನದ ಸೆಕ್ರೆಟ್ರಿಯೇಟ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿಜಕ್ಕೂ ಮೋದಿಯವರು ಕುರ್ಚಿ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಇದು
ದರ್ಬಾರ್ ಹಾಲ್‌ನಲ್ಲಿ ರಾಷ್ಟ್ರೀಯ ಪುರಸ್ಕಾರಗಳ ವಿತರಣೆಯಂತಹ ಪ್ರಮುಖ ಮುಖ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ದರ್ಬಾರ್ ಎನ್ನುವುದು ಭಾರತೀಯ ರಾಜರು ಹಾಗೂ ಬ್ರಿಟಿಷರು ಇಟ್ಟಂತಹ ಪದವಾಗಿದೆ. ಭಾರತ ಗಣರಾಜ್ಯವಾದ ಮೇಲೆ ಪ್ರಾಮುಖ್ಯತೆ ಕಳೆದುಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.