ಭಾರತದ ಕೆಲ ಪ್ರದೇಶಗಳಿಗೆ ತೆರಳಬೇಡಿ ಎಂದ ಅಮೆರಿಕ; ಮೋದಿ ನೇತೃತ್ವದ ಭಾರತಕ್ಕೆ ಇದೆಂಥಾ ಅಪಮಾನ?

Date:

Advertisements

ಇತ್ತೀಚಿನ ದಿನಗಳಲ್ಲಿ ಜಗತ್ತು ನಾನಾ ರೀತಿಯ ಘಟನೆಗಳು, ಬೆಳವಣಿಗೆಗಳು ಮತ್ತು ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ರಷ್ಯಾ-ಉಕ್ರೇನ್ ಯುದ್ಧ, ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ದಾಳಿ, ಇಸ್ರೇಲ್-ಇರಾನ್ ಯುದ್ಧಗಳು ಹಾಗೂ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಹಿಂಸಾತ್ಮಕ ಹೋರಾಟಗಳು ಜಗತ್ತನ್ನು ಬೆಚ್ಚಿಬೀಳಿಸಿವೆ. ಇದೇ ಹೊತ್ತಿನಲ್ಲಿ ಭಾರತವೂ ಆಂತರಿಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ದಾಳಿಗಳು ನಡೆಯುತ್ತಿವೆ. ಈಶಾನ್ಯ ಭಾರತದಲ್ಲಿ ಮಾವೋವಾದಿಗಳು ಮತ್ತು ಪೊಲೀಸ್‌ ಪಡೆಗಳ ನಡುವೆ ತಿಕ್ಕಾಟ ಸಾಮಾನ್ಯವಾಗಿದೆ.

ಮಣಿಪುರ ಹಿಂಸಾಚಾರ, 370 ವಿಧಿ ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ, ಪಾಕ್‌ ಗಡಿಯಲ್ಲಿ ದಾಳಿಗಳು, ದೇಶದ ನಾನಾ ಭಾಗಗಳಲ್ಲಿ ಹಿಂಸೆ, ಕೊಲೆ, ಅತ್ಯಾಚಾರಗಳು ನಡೆಯುತ್ತಿದ್ದರೂ ಪ್ರಧಾನಿ ಮೋದಿಯನ್ನೂ ಒಳಗೊಂಡಂತೆ ಕೇಂದ್ರ ಸರ್ಕಾರ ಮೌನವಾಗಿದೆ.

ಇದೇ ಹೊತ್ತಿನಲ್ಲಿ, ಭಾರತದಲ್ಲಿ ಇಂತಹ ಆತಂಕಕಾರಿ ಬೆಳವಣಿಗೆಗಳ ನಡುವೆ, ಅಮೆರಿಕ ಸರ್ಕಾರ ತನ್ನ ಪ್ರಜೆಗಳಿಗೆ ಮಣಿಪುರ, ಜಮ್ಮು-ಕಾಶ್ಮೀರ ಹಾಗೂ ಪೂರ್ವ ಭಾರತದ ಪ್ರದೇಶಗಳಿಗೆ ಪ್ರವಾಸ ಹೋಗದಂತೆ ಸೂಚನೆ ನೀಡಿದೆ. ಆ ಮೂಲಕ ಮನವಿಯನ್ನೂ ಮಾಡಿಕೊಂಡಿದೆ.

Advertisements

ಅಮೆರಿಕವು ಭಾರತದ ಪರಿಷ್ಕೃತ ಪ್ರವಾಸ ಸಲಹೆಗಳನ್ನು ಪ್ರಕಟಿಸಿದ್ದು, ”ಅಪರಾಧ ಮತ್ತು ಭಯೋತ್ಪಾದನಾ ಕೃತ್ಯಗಳಿಂದಾಗಿ ಭಾರತದಲ್ಲಿ ಎಚ್ಚರಿಕೆಯಿಂದ ಇರಬೇಕಾಗಿದೆ. ಜಮ್ಮು ಮತ್ತು ಕಾಶ್ಮೀರ, ಭಾರತ-ಪಾಕ್ ಗಡಿ, ಮಣಿಪುರ, ಮಧ್ಯ ಮತ್ತು ಪೂರ್ವ ಭಾರತದ ಭಾಗಗಳಿಗೆ ಪ್ರಯಾಣಿಸಬೇಡಿ” ಎಂದು ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.

”ಭಾರತದಲ್ಲಿ ಹೆಚ್ಚುತ್ತಿರುವ ಅಪರಾಧಗಳಲ್ಲಿ ಅತ್ಯಾಚಾರವೂ ಒಂದಾಗಿದೆ ಎಂದು ಭಾರತೀಯ ಅಧಿಕಾರಿಗಳೇ ವರದಿ ಮಾಡಿದ್ದಾರೆ. ಪ್ರವಾಸಿ ತಾಣಗಳು ಮತ್ತು ಇತರ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯದಂತಹ ಹಿಂಸಾತ್ಮಕ ಅಪರಾಧಗಳು ಹೆಚ್ಚುತ್ತಿವೆ. ಪ್ರವಾಸಿ ಸ್ಥಳಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆಗಳು/ಶಾಪಿಂಗ್ ಮಾಲ್‌ಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ. ಹೀಗಾಗಿ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‌ಗಢ ಹಾಗೂ ಜಾರ್ಖಂಡ್‌ನ ಗ್ರಾಮೀಣ ಭಾಗಗಳಲ್ಲಿ ದಾಳಿಗಳು ಸಾಂದರ್ಭಿಕವಾಗಿ ನಡೆಯುತ್ತಲೇ ಇವೆ. ಈ ಪ್ರದೇಶಗಳಿಗೆ ಭೇಟಿ ನೀಡದೇ ಇರುವುದು ಉತ್ತಮ” ಎಂದು ಅಮೆರಿಕಾ ಹೇಳಿದೆ.

ವಿಶ್ವಗುರು, ಚೌಕಿದಾರ್, ದೇವರೇ ಕಳಿಸಿದ ವಿಶಿಷ್ಟ ಶಕ್ತಿಯುಳ್ಳ ಮೋದಿ ಅವರು ಭಾರತದ ಪ್ರಧಾನಿಯಾಗಿರುವಾಗ ಅಮೆರಿಕದಂತಹ ವಿಶ್ವದ ದೊಡ್ಡಣ್ಣ, ತನ್ನ ಪ್ರಜೆಗಳು ಭಾರತದ ಬಹುಭಾಗಗಳಿಗೆ ಪ್ರವಾಸ ಹೋಗಬೇಡಿ, ಪ್ರಯಾಣ ಕೈಗೊಳ್ಳಬೇಡಿ ಎಂದು ಹೇಳುವುದು ನಿಜಕ್ಕೂ ಅಪಮಾನಕರ ಸಂಗತಿಯಲ್ಲವೇ?

ಭಯೋತ್ಪಾದನೆಯನ್ನು ಇಲ್ಲವಾಗಿಸುತ್ತೇವೆ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆದು ಹೆಣ್ಣುಮಕ್ಕಳನ್ನು ರಕ್ಷಿಸುತ್ತೇವೆ – (ಬೇಟಿ ಬಚಾವೋ –ಬೇಟಿ ಪಡಾವೋ), ಎಲ್ಲರನ್ನು ಒಳಗೊಂಡು ಎಲ್ಲರ ಅಭಿವೃದ್ಧಿಗಾಗಿ (ಸಬ್‌ ಕಾ ಸಾತ್ – ಸಬ್‌ ಕಾ ವಿಕಾಸ್) ದುಡಿಯುತ್ತೇವೆ ಎಂಬ ಘೋಷಣೆಗಳನ್ನು ಮೊಳಗಿಸಿದ್ದ ಮೋದಿ ಅವರ ಕಳೆದ 10 ವರ್ಷಗಳ ಆಡಳಿತದಲ್ಲಿ ಭಾರತವು ನಾನಾ ದುಷ್ಕೃತ್ಯಗಳಿಗೆ ಸಾಕ್ಷಿಯಾಗಿದೆ. ಯಾವುದೇ ಬೇಟಿ ಬಜಾವಾಗಲು ಸಾಧ್ಯವಾಗುತ್ತಿಲ್ಲ. ಯಾರ ವಿಕಾಸವೂ ಕಾಣುತ್ತಿಲ್ಲ. ಬದಲಾಗಿ, ಅತ್ಯಾಚಾರ, ಕೊಲೆ, ಸುಲಿಗೆ, ಭ್ರಷ್ಟಾಚಾರ, ಹಿಂಸೆ, ಹಿಂಸಾಚಾರ, ದ್ವೇಷ, ತಾರತಮ್ಯಗಳು ಹೆಚ್ಚಾಗಿವೆ.

ಬಹುತ್ವ, ಶಾಂತಿ, ಸೌಹಾರ್ದತೆ, ಒಳಗೊಳ್ಳುವಿಕೆ ಮಾಯವಾಗಿದೆ. ಅತ್ಯಾಚಾರಿಗಳನ್ನು ಸಮರ್ಥಿಸಿ, ಅತ್ಯಾಚಾರಿಗಳ ಪರವಾಗಿ ಬಿಜೆಪಿ ಶಾಸಕರು, ಸಂಸದರು ಹಾಗೂ ಕಾರ್ಯಕರ್ತರು ಪ್ರತಿಭಟನೆ, ರ್‍ಯಾಲಿಗಳನ್ನು ನಡೆಸುತ್ತಿದ್ದಾರೆ. ಸ್ವತಃ ಬಿಜೆಪಿಯ ಶಾಸಕ, ಸಂಸದರೂ ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಅರೋಪಿಗಳಾಗಿದ್ದಾರೆ.

ಈ ವರದಿ ಓದಿದ್ದೀರಾ?: ಕೇಂದ್ರ ಬಜೆಟ್ | ಮೋದಿ ಸರ್ಕಾರ ಭಾರತೀಯ ರೈಲ್ವೆಯನ್ನು ಖಾಸಗೀಕರಣದತ್ತ ದೂಡುತ್ತಿದೆ

ಮಣಿಪುರದಂತಹ ರಾಜ್ಯದಲ್ಲಿ ವರ್ಷಗಳ ಕಾಲ ಹಿಂಸಾಚಾರ ನಡೆದರೂ, ಅದನ್ನು ಪ್ರಬಲವಾಗಿ ತಡೆಯುವ ಧೈರ್ಯವನ್ನು ಬಿಜೆಪಿ ನೇತೃತ್ವದ ಅಲ್ಲಿನ ರಾಜ್ಯ ಸರ್ಕಾರವಾಗಲೀ, ಮೋದಿ ನೇತೃತ್ವದ ಕೇಂದ್ರ ಸರ್ಕಾರವಾಗಲೀ ಮಾಡಲಿಲ್ಲ. ಇದೆಲ್ಲವೂ, ವಿದೇಶಗಳಿಗೆ ಆತಂಕವನ್ನು ಹೆಚ್ಚಿಸಿದೆ. ಹೀಗಾಗಿಯೇ, ಅಮೆರಿಕದಂತಹ ಬೃಹತ್ ರಾಷ್ಟ್ರ ತನ್ನ ಪ್ರಜೆಗಳಿಗೆ ಭಾರತದಲ್ಲಿ ಎಚ್ಚರಿಕೆಯಿಂದ ಪ್ರವಾಸ ಮಾಡುವಂತೆ ಸೂಚಿಸುತ್ತಿದೆ.

ಭಾರತದ ಇತಿಹಾಸದಲ್ಲಿ ಯಾವುದೇ ದೇಶವು ಇಂತಹ ಸೂಚನೆಗಳನ್ನು ತನ್ನ ಪ್ರಜೆಗಳಿಗೆ ಕೊಟ್ಟಿರಲು ಸಾಧ್ಯವಿಲ್ಲ. ಆದರೆ, ಮೋದಿ ಆಡಳಿತದಲ್ಲಿ ಇಂತಹದೊಂದು ಎಚ್ಚರಿಕೆಯ ಸೂಚನೆಗಳು ವ್ಯಕ್ತವಾಗುತ್ತಿವೆ. ಇದು, ಭಾರತದ ಪಾಲಿಗೆ ಅಪಮಾನಕರ ಸಂಗತಿಯೇ ಸರಿ.

ಅಂದಹಾಗೆ, 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋದ್ರಾ ಹತ್ಯಾಕಾಂಡದಿಂದಾಗಿ ಮೋದಿ ಭಾರೀ ಟೀಕೆ, ಆಕ್ರೋಶ, ಪ್ರತಿಭಟನೆಗೆ ಗುರಿಯಾಗಿದ್ದರು. ಅದೇ ಕಾರಣಕ್ಕಾಗಿ, 2005ರಲ್ಲಿ ಅಮೆರಿಕ ಮೋದಿಗೆ ವೀಸಾ ನಿರಾಕರಣೆ ಮಾಡಿತ್ತು ಎಂಬುದನ್ನು ನಾವು ಮರೆಯುವಂತಿಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಅಮೆರಿಕದ ‘ಅಕ್ಕರೆಯ ನ್ಯಾಯಾಧೀಶ’ ಫ್ರಾಂಕ್ ಕ್ಯಾಪ್ರಿಯೊ ನಿಧನ

ರೋಡ್ ಐಲ್ಯಾಂಡ್‌ನ ನಿವೃತ್ತ ಮುನಿಸಿಪಲ್ ನ್ಯಾಯಾಧೀಶರಾಗಿದ್ದ, ಸಾಮಾಜಿಕ ಜಾಲತಾಣಗಳಲ್ಲಿ 'ಅಕ್ಕರೆಯ ನ್ಯಾಯಾಧೀಶ'...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X