ಮಹಾರಾಜ ಟ್ರೋಫಿ | ಮೈಸೂರು ವಾರಿಯರ್ಸ್ ತಂಡಕ್ಕೆ ಹರಾಜಾದ ರಾಹುಲ್ ದ್ರಾವಿಡ್ ಪುತ್ರ

Date:

Advertisements

ಕೆಎಸ್‌ಸಿಎ ಮತ್ತು ಶ್ರೀರಾಮ್ ಕ್ಯಾಪಿಟಲ್ಸ್ ಸಹಭಾಗಿತ್ವದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 3ನೇ ಆವೃತ್ತಿಗೆ ಇಂದು(ಜುಲೈ 25) ಆಟಗಾರರ ಹರಾಜು ನಡೆದಿದೆ. ಇದೇ ಮೊದಲ ಬಾರಿಗೆ ಹರಾಜಿಗೆ ಆಗಮಿಸಿದ್ದ ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಮೈಸೂರು ವಾರಿಯರ್ಸ್ ತಂಡ ಆಲ್‌ರೌಂಡರ್ ಆಗಿರುವ ಸಮಿತ್ ದ್ರಾವಿಡ್ ಅವರನ್ನು 60 ಸಾವಿರಕ್ಕೆ ಖರೀದಿಸಿದೆ.

ಬೆಂಗಳೂರು ಬ್ಲಾಸ್ಟರ್, ಗುಲ್ಬರ್ಗಾ ಮಿಸ್ಟಿಕ್ಸ್, ಹುಬ್ಬಳ್ಳಿ ಟೈಗರ್ಸ್‌, ಮಂಗಳೂರು ಡ್ರ್ಯಾ ಗನ್ಸ್, ಮೈಸೂರು ವಾರಿಯರ್, ಶಿವಮೊಗ್ಗ ಲಯನ್ಸ್ ತಂಡಗಳು ಆಟಗಾರರನ್ನು ಖರೀದಿಸಿವೆ. ಪಂದ್ಯಾವಳಿ ಆಗಸ್ಟ್ 15 ರಿಂದ ಸೆಪ್ಟೆಂಬರ್ 1 ರವರೆಗೆ ನಡೆಯಲಿದೆ.

ಆಲ್‌ರೌಂಡರ್ ಚೇತನ್ ಎಲ್ ಆರ್ ಇಂದಿನ ಹರಾಜಿನಲ್ಲಿ ಹೆಚ್ಚಿನ ತಂಡಗಳಲ್ಲಿ ಗಮನ ಸೆಳೆದರು. ಚೇತನ್ ಅವರು ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿಯಾದರು. ಬೆಂಗಳೂರು ಬ್ಲಾಸ್ಟರ್ಸ್‌ ತಂಡವು ಅವರನ್ನು ರೂ 8.60 ಲಕ್ಷಕ್ಕೆ ಅವರನ್ನು ಖರೀದಿಸಿತು.

Advertisements

ಈ ಸುದ್ದಿ ಓದಿದ್ದೀರಾ? ವಿಂಬಲ್ಡನ್ ಛಾಂಪಿಯನ್ ಕಾರ್ಲೋಸ್ ಅಲ್ಕರಾಜ್ – ವಿಶ್ವ ಟೆನಿಸ್ ಯುಗದ ಅದ್ಭುತ ಪ್ರತಿಭೆ

ಅನುಭವಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರನ್ನು ಮಂಗಳೂರು ಡ್ರ್ಯಾಗನ್ಸ್ ತಂಡ 7.60 ಲಕ್ಷ ರೂ ನೀಡಿ ಖರೀದಿಸಿತು. ಐಪಿಎಲ್ ಅನುಭವ ಹೊಂದಿರುವ ಪ್ರಮುಖ ಆಟಗಾರರಾದ ಮನೀಶ್ ಪಾಂಡೆ, ಮಯಾಂಕ್ ಅಗರ್‌ವಾಲ್, ದೇವದತ್ ಪಡಿಕ್ಕಲ್, ವೈಶಾಕ್ ವಿಜಯ್ ಕುಮಾರ್, ಅಭಿನವ್ ಮನೋಹರ್ ಮತ್ತು ಕರುಣ್ ನಾಯರ್ ಹರಾಜಿಗೆ ಮುಂಚಿತವಾಗಿ ತಂಡಗಳು ಉಳಿಸಿಕೊಂಡ ಆಟಗಾರರಲ್ಲಿ ಸೇರಿದ್ದಾರೆ.

ಮಹಾರಾಜ ಟ್ರೋಫಿಗೆ ಹರಾಜಾದ ಆಟಗಾರರು

ಚೇತನ್ ಎಲ್ ಆರ್ (ಬೆಂಗಳೂರು ಬ್ಲಾಸ್ಟರ್ಸ್) – 8.60 ಲಕ್ಷ ರೂ

ಶ್ರೇ ಯಸ್ ಗೋಪಾಲ್ (ಮಂಗಳೂರು ಡ್ರಾಗನ್ಸ್) – 7.60 ಲಕ್ಷ ರೂ

ಕೆ ಗೌತಮ್ (ಮೈಸೂರು ವಾರಿಯರ್ಸ್) – 7.40 ಲಕ್ಷ ರೂ

ಲವ್ನಿತ್ ಸಿಸೋಡಿಯಾ (ಗುಲ್ಬರ್ಗಾ ಮಿಸ್ಟಿಕ್ಸ್) – 7.20 ಲಕ್ಷ ರೂ

ಪ್ರವೀಣ್ ದುಬೆ (ಗುಲ್ಬರ್ಗಾ ಮಿಸ್ಟಿಕ್ಸ್) – 6.80 ಲಕ್ಷ ರೂ

ಮೊಹಮ್ಮದ್ ತಾಹಾ (ಹುಬ್ಬಳ್ಳಿ ಟೈಗರ್ಸ್) – 6.60 ಲಕ್ಷ ರೂ

ವಿದ್ಯಾಧರ್ ಪಾಟೀಲ್ (ಮೈಸೂರು ವಾರಿಯರ್ಸ್) – 6.40 ಲಕ್ಷ ರೂ

ಅನೀಶ್ವರ್ ಗೌತಮ್ (ಹುಬ್ಬಳ್ಳಿ ಟೈಗರ್ಸ್) – 6.20 ಲಕ್ಷ ರೂ

ಹಾರ್ದಿಕ್ ರಾಜ್ (ಹುಬ್ಬಳ್ಳಿ ಟೈಗರ್ಸ್) – 5.80 ಲಕ್ಷ ರೂ

ಜಗದೀಶ ಸುಚಿತ್ (ಮೈಸೂರು ವಾರಿಯರ್ಸ್) – 4.80 ಲಕ್ಷ ರೂ

ಕ್ರಾಂ ತಿ ಕುಮಾರ್ ಎಂ (ಬೆಂಗಳೂರು ಬ್ಲಾಸ್ಟರ್ಸ್) – 4.40 ಲಕ್ಷ ರೂ

ಕೆ ಸಿ ಕಾರಿಯಪ್ಪ (ಹುಬ್ಬಳ್ಳಿ ಟೈಗರ್ಸ್)- 4.20 ಲಕ್ಷ ರೂ

ವೆಂಕಟೇಶ್ ಎಂ (ಮೈಸೂರು ವಾರಿಯರ್ಸ್) – 3.40 ಲಕ್ಷ ರೂ

ಎಂ ಜಿ ನವೀನ್ (ಬೆಂಗಳೂರು ಬ್ಲಾಸ್ಟರ್ಸ್) – 2.30 ಲಕ್ಷ ರೂ

ಧೀರಜ್ ಗೌಡ (ಮಂಗಳೂರು ಡ್ರಾಗನ್ಸ್) – 1 ಲಕ್ಷ ರೂ

ಪ್ರದೀಪ್ ಟಿ (ಶಿವಮೊಗ್ಗ ಲಯನ್ಸ್) – 1 ಲಕ್ಷ ರೂ

ಪ್ರತೀಕ್ ಜೈನ್ (ಬೆಂಗಳೂರು ಬ್ಲಾಸ್ಟರ್ಸ್) – 1 ಲಕ್ಷ ರೂ

ದರ್ಶನ್ ಎಂಬಿ (ಮಂಗಳೂರು ಡ್ರಾಗನ್ಸ್) – 1 ಲಕ್ಷ ರೂ

ಶರತ್ ಬಿಆರ್ (ಗುಲ್ಬರ್ಗಾ ಮಿಸ್ಟಿಕ್ಸ್) – 1 ಲಕ್ಷ ರೂ

ಪ್ರಸಿಧ್ ಕೃಷ್ಣ (ಮೈಸೂರು ವಾರಿಯರ್ಸ್) – 1 ಲಕ್ಷ ರೂ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X