ಟೈಫೂನ್ ಗೇಮಿ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ ಆಗ್ನೇಯ ಚೀನಾದಲ್ಲಿ ಭಾನುವಾರ ಭೂಕುಸಿತ ಉಂಟಾಗಿದೆ. ಮನೆಯೊಂದಕ್ಕೆ ಮಣ್ಣು ಕುಸಿದು ಹನ್ನೊಂದು ಜನರು ಸಾವನ್ನಪ್ಪಿದ್ದಾರೆ ಎಂದು ಚೀನಾ ಮಾಧ್ಯಮಗಳು ತಿಳಿಸಿದೆ.
ಇನ್ನು ಚೀನಾದ ಶಾಂಘೈನಲ್ಲಿ ತೀವ್ರ ಗಾಳಿಯಿಂದಾಗಿ ನೆಲಸಮವಾಗಿದ್ದ ಮರಕ್ಕೆ ಸ್ಕೂಟರ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ ಎಂದು ಡಿಜಿಟಲ್ ಸುದ್ದಿ ಸಂಸ್ಥೆ ದಿ ಪೇಪರ್ ವರದಿ ಮಾಡಿದೆ.
ಚೀನಾದಲ್ಲಿ ಗುರುವಾ ಭೂಕುಸಿತ ಉಂಟು ಮಾಡಿದ ಟೈಫೂನ್ ಗೇಮಿ ಚಂಡಮಾರುತವು ದುರ್ಬಲಗೊಂಡಿದ್ದು, ಟೈಫೂನ್ ಗೇಮಿ ಚಂಡಮಾರುತದಿಂದ ಚೀನಾದಲ್ಲಿ ಸಂಭವಿಸಿದ ಮೊದಲ ಸಾವು ಇದಾಗಿದೆ.
ಇದನ್ನು ಓದಿದ್ದೀರಾ? ಚೀನಾ | ಶಾಪಿಂಗ್ ಸೆಂಟರ್‌ನಲ್ಲಿ ಬೆಂಕಿ ಅವಘಡ; 14 ಮಂದಿ ಸಾವು
ಚೀನಾವನ್ನು ತಲುಪುವ ಮೊದಲು ಟೈಫೂನ್ ಗೇಮಿ ಫಿಲಿಪೈನ್ಸ್‌ಗೆ ಅಪ್ಪಳಿಸಿದ್ದು ಫಿಲಿಪೈನ್ಸ್‌ನಲ್ಲಿ ಭಾರೀ ಮಳೆ ಸುರಿದಿದೆ. ಟೈಫೂನ್ ಗೇಮಿ ಚಂಡಮಾರುತದಿಂದ ಚೀನಾದಲ್ಲಿ ಕನಿಷ್ಠ 34 ಮಂದಿ ಸಾವನ್ನಪ್ಪಿದ್ದಾರೆ. ಬಳಿಕ ತೈವಾನ್ ದ್ವೀಪದಾದ್ಯಂತ ಚಂಡಮಾರುತ ವ್ಯಾಪಿಸಿದ್ದು ಅಲ್ಲಿ ಸುಮಾರು ಹತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಇನ್ನು ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್ ನಗರದ ವ್ಯಾಪ್ತಿಯ ಯುಯೆಲಿನ್ ಗ್ರಾಮದಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಕೆಸರು ನೀರು ಮನೆಯೊಳಗೆ ನುಗ್ಗಿದೆ. ಪ್ರತ್ಯೇಕ ಘಟನೆಯಲ್ಲಿ 18 ಮಂದಿ ಮಣ್ಣಿನಡಿ ಸಿಲುಕಿದ್ದು, ಆರು ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.